newsfirstkannada.com

ಅಮಿತ್ ಶಾ ಜೊತೆ HDK ಫೈನಲ್ ಮೀಟಿಂಗ್‌.. ಜೆಡಿಎಸ್‌ಗೆ ಮತ್ತೊಂದು ಬಿಗ್ ಆಫರ್; ಏನದು?

Share :

Published March 17, 2024 at 6:57am

  ಮೂರು ಕ್ಷೇತ್ರದ ಜೊತೆಗೆ ಮತ್ತೊಂದು ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಮಾತುಕತೆ

  ಮುಂದಿನ 48 ಗಂಟೆಗಳಲ್ಲಿ ಜೆಡಿಎಸ್ ನಾಯಕರಿಂದ ಮಹತ್ವದ ಘೋಷಣೆ

  ಡಿಕೆ ಸುರೇಶ್ ಸೋಲಿಗೆ ಡಾಕ್ಟರ್ ಮಂಜುನಾಥ್ ಗೆಲುವಿಗೆ ಚಾಣಕ್ಯ ತಂತ್ರ

ಇಡೀ ದೇಶವೇ ಕಾದು ಕೂತಿದ್ದ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್‌ 19ರಿಂದ ದೇಶದಲ್ಲಿ ಮತದಾನ ಆರಂಭವಾಗಲಿದ್ದು, ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಏಪ್ರಿಲ್ 26, ಮೇ 7ರಂದು ಕರ್ನಾಟಕದ ಚುನಾವಣೆಗೆ ಮುಹೂರ್ತ ಫಿಕ್ಸ್​ ಆಗ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಮಿಂಚಿನ ಸಂಚಾರವಾಗಿದೆ. ರಾಜ್ಯದಲ್ಲಿ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದ್ದು ಇದೀಗ ಮೂರು ಕ್ಷೇತ್ರಗಳ ಟಿಕೆಟ್ ಘೋಷಣೆಗೆ ದಳಪತಿಗಳು ಅಮಿತ್ ಶಾ ಭೇಟಿಯಾಗಿದ್ದಾರೆ.

ಲೋಕಸಮರಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಕರ್ನಾಟಕದಲ್ಲಿ 2 ಹಂತಗಳಲ್ಲಿ ಯುದ್ಧಕ್ಕೆ ಕೇಂದ್ರ ಚುನಾವಣಾ ಆಯೋಗ ಡೇಟ್‌ ಫಿಕ್ಸ್ ಮಾಡಿದೆ. ಏಪ್ರಿಲ್‌ 19ರಿಂದ ಮತದಾನ ಆರಂಭವಾಗಲಿದ್ದು, ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಕಾಂಗ್ರೆಸ್​ಗೆ ಠಕ್ಕರ್ ಕೊಡಲು ರಾಜ್ಯದಲ್ಲಿ ಕಮಲ-ದಳ ಮೈತ್ರಿ ಮಾಡಿಕೊಂಡಿದ್ದು 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಘೋಷಿಸಿದೆ. ಸದ್ಯ ಉಳಿದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸಿದೆ.

ಈಗಾಗಲೇ 28 ಕ್ಷೇತ್ರಗಳ ಫೈಕಿ ಬಿಜೆಪಿಗೆ 25 ಜೆಡಿಎಸ್​ಗೆ 3 ಕ್ಷೇತ್ರಗಳನ್ನ ನೀಡುವ ಕುರಿತು ಮಾತುಕತೆಯಾಗಿದೆ. ಅಂತಿಮ ಚರ್ಚೆ ನಡೆಸಲು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೆಹಲಿಗೆ ತೆರಳಿ ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದಾರೆ. ಈ ವೇಳೆ ಜೆಡಿಎಸ್​ನ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಹಾಗೂ ಅನಸೂಯ ಮಂಜುನಾಥ್ ಸಾಥ್​ ಕೊಟ್ಟಿದ್ರು.

ಡಿಕೆ ಸುರೇಶ್ ಸೋಲಿಗೆ, ಡಾಕ್ಟರ್ ಮಂಜುನಾಥ್ ಗೆಲುವಿಗೆ ಚಾಣಕ್ಯ ತಂತ್ರ
ಬೆಂಗಳೂರು ಗ್ರಾಮಾಂತರ ಲೋಕಸಭೆಯ ಕ್ಷೇತ್ರದ ಬಗ್ಗೆ ಅಮಿತ್ ಶಾ ಜೊತೆ ದಳಪತಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಂಜುನಾಥ್ ಪರ ಬಂದು ಪ್ರಚಾರ ಮಾಡಬೇಕು ಅಂತ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಚಾಣಕ್ಯ, ನಾನೇ ವೈಯಕ್ತಿಕವಾಗಿ ಮಂಜುನಾಥ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಸೋಲಿಲ್ಲದ ಸರದಾರ ಡಿಕೆ ಸುರೇಶ್​ಗೆ ಸೋಲಿನ ರುಚಿ ತೋರಿಸಲು ಹಾಗೂ ಡಾಕ್ಟರ್ ಮಂಜುನಾಥ್ ಗೆಲುವಿಗೆ ಚಾಣಕ್ಯ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಈ ಚರ್ಚೆ ಮಧ್ಯೆ ಅಮಿತ್ ಶಾ ಅವರು ಹೆಚ್‌.ಡಿ ಕುಮಾರಸ್ವಾಮಿ ಅವರಿಗೆ ಬಿಗ್ ಆಫರ್ ನೀಡಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ; ಎರಡಲ್ಲ, ಮೂರಲ್ಲ, ಜೆಡಿಎಸ್​ಗೆ BJP ಬಿಗ್​ ಆಫರ್​​; ಎಷ್ಟು ಕ್ಷೇತ್ರ..?

ದಳಕ್ಕೆ ಚಿಕ್ಕಬಳ್ಳಾಪುರ ಆಫರ್​!
ಬಿಜೆಪಿ ಹೈಕಮಾಂಡ್‌ನಿಂದ ಹೆಚ್‍.ಡಿ ಕುಮಾರಸ್ವಾಮಿಗೆ ಬಿಗ್ ಆಫರ್

ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿದೆ
ಆದರೆ ಕುಮಾರಸ್ವಾಮಿ ಕಣಕ್ಕಿಳಿಯುವುದಾದರೆ ಕ್ಷೇತ್ರ ಬಿಟ್ಟುಕೊಡಲಾಗುವುದು
ಅನಾರೋಗ್ಯ ಸಮಸ್ಯೆಯಿಂದ ಚುನಾವಣೆ ಸ್ಪರ್ಧೆ ಕಷ್ಟ ಸಾಧ್ಯವೆಂದ ಹೆಚ್​ಡಿಕೆ

ಮುಂದಿನ 48 ಗಂಟೆಗಳಲ್ಲಿ ಜೆಡಿಎಸ್ ಟಿಕೆಟ್ ಘೋಷಣೆ!?
ಇನ್ನು ಮುಂದಿನ 48 ಗಂಟೆಯಲ್ಲಿ ಜೆಡಿಎಸ್ ಟಿಕೆಟ್ ಘೋಷಣೆ ಮಾಡಲಿದೆ. ಅಮಿತ್ ಶಾ ಭೇಟಿಗೆ ಕಾಯ್ದಿದ್ದ ಹೆಚ್​ಡಿ ಕುಮಾರಸ್ವಾಮಿ ಈಗ ಟಿಕೆಟ್ ಘೋಷಣೆಗೆ ಮುಂದಾಗಿದ್ದಾರೆ. ಮಂಡ್ಯ, ಹಾಸನ, ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳ ಹೆಸರನ್ನು ನಾಳೆ ಅಥವಾ ನಾಡಿದ್ದು ಹೆಚ್​ಡಿಕೆ ಘೋಷಿಸಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮಿತ್ ಶಾ ಜೊತೆ HDK ಫೈನಲ್ ಮೀಟಿಂಗ್‌.. ಜೆಡಿಎಸ್‌ಗೆ ಮತ್ತೊಂದು ಬಿಗ್ ಆಫರ್; ಏನದು?

https://newsfirstlive.com/wp-content/uploads/2024/03/HDK-Amith-Sha-1.jpg

Load More