/newsfirstlive-kannada/media/post_attachments/wp-content/uploads/2024/12/bbk1112.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದರೆ ಹಿಂದಿನ ಸಂಚಿಕೆಯ ಕೊನೆಯಲ್ಲಿ ವೀಕ್ಷಕರು ವೋಟ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿರಲಿಲ್ಲ.
ಇದನ್ನೂ ಓದಿ:ಇದು ಪರೋಪಕಾರ ಅಂದ್ರೆ.. ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚೆಂದವೋ!
ನಾಮಿನೇಟ್ ಆದ ವಾರದ ಕಾರ್ಯಕ್ರಮದ ಕೊನೆಯಲ್ಲಿ ನಾಮಿನೇಟ್ ಆದ ಸ್ಪರ್ಧಿಗಳ ಹೆಸರನ್ನು ಬಿಗ್ಬಾಸ್ ಘೋಷಣೆ ಮಾಡುತ್ತಿದ್ದರು. ಆದರೆ ಈ ಬಾರಿಯೂ ಮಾಡಿಲ್ಲ. ಜೊತೆಗೆ ವೋಟಿಂಗ್ ಲೈನ್ಸ್ ಕೂಡ ಓಪನ್ ಆಗಿಲ್ಲ. ಹೀಗಾಗಿ ಈ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಕಾರ್ಯಕ್ರಮದ ಕೊನೆಯಲ್ಲಿ ಬಿಗ್ಬಾಸ್ ಮನೆ ಮಂದಿಗೆ ಶಾಕ್ ಕೊಟ್ಟಿದ್ದಾರೆ.
ಹೌದು, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಇಲ್ಲ ಎಂಬ ವಿಚಾರ ಮನೆಯಲ್ಲಿರೋ ಸ್ಪರ್ಧಿಗಳಿಗೆ ಗೊತ್ತಿಲ್ಲ. ಹೀಗಾಗಿ 4 ಮಂದಿ ನಾಮಿನೇಷನ್ ಟೆನ್ಷನ್ನಲ್ಲೇ ಇದ್ದರು. ಆದರೆ ಇಂದಿನ ಸಂಚಿಕೆಯ ಕೊನೆಯಲ್ಲಿ ಕಿಚ್ಚ ಸುದೀಪ್ ಮಾತು ಮನೆ ಮಂದಿಗೆ ಶಾಕ್ ನೀಡಿದೆ. ಈ ಹಿಂದೆ ಭವ್ಯಾ ಗೌಡಗೂ ಕಿಚ್ಚ ಸುದೀಪ್ ಇದೇ ರೀತಿಯಲ್ಲಿ ಶಾಕ್ ನೀಡಿದ್ದರು. ಇದೀಗ ತ್ರಿವಿಕ್ರಮ್ಗೆ ಶಾಕ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ತ್ರಿವಿಕ್ರಮ್ ಹೆಸರು ಹೇಳುತ್ತಿದ್ದಂತೆ ಮನೆ ಮಂದಿ ಶಾಕ್ ಆಗಿದ್ದಾರೆ.
84ದಿನಕ್ಕೆ ಕಾಲಿಟ್ಟಿರೋ ಬಿಗ್ಬಾಸ್ನಲ್ಲಿ 4 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಇದೇ ಮೊದಲ ಬಾರಿಗೆ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಸ್ಟ್ರಾಂಗ್ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ತ್ರಿವಿಕ್ರಮ್, ರಜತ್, ಮೋಕ್ಷಿತಾ ಹಾಗೂ ಹನುಮಂತ ಈ 4 ಮಂದಿ 13ನೇ ವಾರಕ್ಕೆ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದರು. ಸದ್ಯ ಈ ನಾಲ್ವರಲ್ಲಿ ಯಾರು ಕೂಡ ಬಿಗ್ಬಾಸ್ ಮನೆಯಿಂದ ಆಚೆ ಹೋಗಿಲ್ಲ. ಈಗ 10 ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ