newsfirstkannada.com

ಚೈತ್ರಾ ಕುಂದಾಪುರ ಕೇಸ್​ ರೀತಿಯಲ್ಲೇ ಮತ್ತೊಂದು ಪ್ರಕರಣ.. ‘ಬಿಜೆಪಿ ಟಿಕೆಟ್ ಕೊಡಿಸ್ತೀನಿ’ ಎಂದು ದಂಪತಿಗೆ ಲಕ್ಷ ಲಕ್ಷ ನಾಮ..!

Share :

Published September 16, 2023 at 8:21am

    ಬಿಜೆಪಿ ಟಿಕೆಟ್ ಹೆಸರಲ್ಲಿ ಮತ್ತೊಂದು ದೋಖಾ!

    ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ಕೇಸ್

    ಮೂವರ ಗ್ಯಾಂಗ್​ ದೋಚಿದ್ದು ಎಷ್ಟು ಲಕ್ಷ ಹಣ..?

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸ್ತೀನಿ ಎಂದು ನಂಬಿಸಿ ಐದು ಕೋಟಿ ವಂಚಿಸಿದ ಆರೋಪ ಪ್ರಕರಣದಲ್ಲಿ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಜೈಲು ಸೇರಿದ್ದಾರೆ. ಇದೀಗ ಅದೇ ಮಾದರಿಯ ಮತ್ತೊಂದು ಪ್ರಕರಣ ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ದಾಖಲಾಗಿದೆ.

ಈ ಪ್ರಕರಣ ಕೂಡ ಬಿಜೆಪಿ ಟಿಕೆಟ್‌ ಡೀಲ್​ಗೆ ಸಂಬಂಧಿಸಿದ್ದಾಗಿದೆ. ಚೈತ್ರಾ ಕುಂದಾಪುರ ಕೇಸ್​ನ ಗೋವಿಂದ ಪೂಜಾರಿಗೆ ಆಗಿರುವ ರೀತಿಯಲ್ಲೆ ಕೊಪ್ಪಳದಲ್ಲಿ ಲಕ್ಷ ಲಕ್ಷ ರೂಪಾಯಿ ನಾಮ ಹಾಕಲಾಗಿದೆ ಎಂದು ದೂರಲಾಗಿದೆ. ತಮಗೆ ಅಮಿತ್ ಶಾ ಪರಿಚಯ ಇದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿ ಬರೋಬ್ಬರಿ ₹21 ಲಕ್ಷ ರೂಪಾಯಿ ಹಣವನ್ನು ದೋಚಿದ ಆರೋಪ ಇಲ್ಲಿ ಕೇಳಿಬಂದಿದೆ.

ಯಾರೆಲ್ಲ ವಿರುದ್ಧ ಆರೋಪ..?

ಕನಕಗಿರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡೋದಾಗಿ ಜಿ‌.ತಿಮ್ಮಾರೆಡ್ಡಿ ಗಿಲ್ಲೆಸೂಗುರ್​ಗೆ ಮೂವರು ವಂಚಿಸಿದ್ದಾರೆ. ದೆಹಲಿಯ ವಿಶಾಲ್ ನಾಗ್, ಬೆಂಗಳೂರಿನ ಜೀತು, ಗೌರವ್‌ ಎಂಬುವವರು ಮೋಸ ಮಾಡಿದ್ದಾರೆ ಎಂದು ಜಿ‌.ತಿಮ್ಮಾರೆಡ್ಡಿ ಆರೋಪಿಸಿದ್ದಾರೆ.

ಮತ್ತೊಂದು ‘ಕಮಲ’ ಟಿಕೆಟ್ ದೋಖಾ!

ಗಾಯತ್ರಿ ತಿಮ್ಮಾರೆಡ್ಡಿ ಅವರು ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ತಮ್ಮ ಪತ್ನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದ ಜಿ‌.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಮೋಸ ಹೋಗಿದ್ದಾರೆ. ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೇ ತಿಮ್ಮಾರೆಡ್ಡಿಗೆ 21 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

ಏನ್ ಹೇಳಿ ಮೋಸ..?

ನಮಗೆ ಕೇಂದ್ರ ಸಚಿವ ಅಮಿತ್ ಶಾ ಪರಿಚಯ. ಚುನಾವಣೆ ಸಂಬಂಧ ರಾಜ್ಯದಲ್ಲಿ ಸಮೀಕ್ಷೆ ಮಾಡ್ತಿದ್ದೇವೆ. ಸಮೀಕ್ಷೆ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನಾವು ಮುಂಚೂಣಿಗೆ ತರುತ್ತೇವೆ ಎಂದು ಪರಿಚಯಿಸಿಕೊಂಡಿದ್ದರು. ಅದರಲ್ಲಿ ವಿಶಾಲ್ ನಾಗ್ ತಾನು ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥ ಎಂದು ಹೇಳಿಕೊಂಡಿದ್ದ.

ವಿಶಾಲ್ ಮಾತು ನಂಬಿದ ತಿಮ್ಮಾರೆಡ್ಡಿ ಅವರ ಬ್ಯಾಂಕ್ ಖಾತೆಗೆ 19 ಲಕ್ಷ ರೂಪಾಯಿ ಹಾಕಿದ್ದರಂತೆ. ನಂತರ 2 ಲಕ್ಷ ರೂಪಾಯಿ ನಗದು ಹಣವನ್ನ ವಿಶಾಲ್ ಅಂಡ್ ಗ್ಯಾಂಗ್‌ಗೆ ಕೊಟ್ಟಿತ್ತು. ಕೊನೆಗೆ ಟಿಕೆಟ್ ಸಿಗದೇ ಹಣವೂ ವಾಪಸ್ ಬಾರದ ಹಿನ್ನಲೆ ಅಶೋಕನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ರೀತಿಯೇ ಬಹಳ ಜನರಿಗೆ ಮೋಸ ಮಾಡಿದ್ದಾನೆ ಎಂದ ತಿಮ್ಮಾರೆಡ್ಡಿ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ ಕೇಸ್​ ರೀತಿಯಲ್ಲೇ ಮತ್ತೊಂದು ಪ್ರಕರಣ.. ‘ಬಿಜೆಪಿ ಟಿಕೆಟ್ ಕೊಡಿಸ್ತೀನಿ’ ಎಂದು ದಂಪತಿಗೆ ಲಕ್ಷ ಲಕ್ಷ ನಾಮ..!

https://newsfirstlive.com/wp-content/uploads/2023/09/TIMMAREDDY.jpg

Load More