Advertisment

ರೇಣುಕಾಸ್ವಾಮಿ ಹತ್ಯೆ ಕೇಸ್ ಬಳಿಕ ಈಗ ಮತ್ತೊಂದು ಕೇಸ್: ದರ್ಶನ್​ ಬೆಂಬಿಡದ ಸಂಕಷ್ಟಗಳು

author-image
Gopal Kulkarni
Updated On
ರೇಣುಕಾಸ್ವಾಮಿ ಹತ್ಯೆ ಕೇಸ್ ಬಳಿಕ ಈಗ ಮತ್ತೊಂದು ಕೇಸ್: ದರ್ಶನ್​ ಬೆಂಬಿಡದ ಸಂಕಷ್ಟಗಳು
Advertisment
  • ಕೊಲೆ ಕೇಸ್ ಬಳಿಕ ಈಗ ಮತ್ತೊಂದರಲ್ಲಿ ತಗಲಾಕಿಕೊಂಡ ದರ್ಶನ್
  • ನಿರ್ಮಾಪಕ ಭರತ್​ಗೆ ಬೆದರಿಕೆ ಹಾಕಿದ ಕೇಸ್​ನಲ್ಲಿ ದರ್ಶನ್​ಗೆ ಸಂಕಷ್ಟ
  • ರೇಣುಕಾಸ್ವಾಮಿ ಕೇಸ್​ ಬಳಿಕ ಮತ್ತೆ ಮುನ್ನೆಲೆಗೆ ಬಂದ ಬೆದರಿಕೆ ಕೇಸ್

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಜೈಲು ಹಕ್ಕಿಯಾಗಿರೋ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ವಿರುದ್ಧದ ಮತ್ತೊಂದು ಕೇಸ್​ ಸದ್ದು ಮಾಡ್ತಿದೆ.. ಆ ಪ್ರಕರಣದ ವರದಿ ಡಿಸಿಪಿ ಕೈ ಸೇರಿದ್ದು, ದರ್ಶನ್​ಗೆ ರಿಲೀಫ್​ ಸಿಗುತ್ತಾ..? ಅಥವಾ ಮತ್ತೊಂದು ಸಂಕಷ್ಟ ಹೆಗಲೇರುತ್ತಾ ಅನ್ನೋ ಕುತೂಹಲವು ಮೂಡಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್ ಬಳಿಕ ದರ್ಶನ್​ಗೆ ಒಂದೊಂದೇ ಸಂಕಷ್ಟಗಳು ಹೆಗಲೇರುತ್ತಿವೆ ಈಗ ಆಡಿಯೋ ಸಂಬಂಧದ ಪ್ರಕರಣವೊಂದು ಮತ್ತೆ ಸದ್ದು ಮಾಡಿದ್ದು. ಈಗಾಗ್ಲೇ ಕೊಲೆ ಕೇಸ್​ನಲ್ಲಿ ಲಾಕ್​ ಆಗಿರೋ ದರ್ಶನ್​ ವಿರುದ್ಧದ ಬೆದರಿಕೆ ಪ್ರಕರಣದ ವರದಿ ರೆಡಿಯಾಗಿದೆ.

Advertisment

ಇದನ್ನೂ ಓದಿ:ಬಾಲಿವುಡ್​ ಸ್ಟಾರ್​ ಫ್ಯಾಷನಿಸ್ಟ್.. ನಟಿ ಮೌನಿ ರಾಯ್ ಬಗ್ಗೆ ನಿಮಗೆಷ್ಟು ಗೊತ್ತು?

ನಿರ್ಮಾಪಕ ಭರತ್​ಗೆ ಬೆದರಿಕೆ ಹಾಕಿದ ಕೇಸ್ ವಿಚಾರಣಾ ವರದಿ ಡಿಸಿಪಿ ಗಿರೀಶ್​ ಕೈ ಸೇರಿದೆ. ಕೆಂಗೇರಿ ಠಾಣೆ ಇನ್ಸ್ ಪೆಕ್ಟರ್ ಡಿಸಿಪಿಗೆ ವರದಿ ನೀಡಿದ್ದು, ಕೇಸ್​ ಕ್ಲೋಸ್​ ಮಾಡಲು ಅನುಮತಿ ಕೋರಿ ಪತ್ರ ಬರೆದಿದ್ದಾರೆ ಎನ್ನಲಾಗ್ತಿದೆ.
ಅಂದ್ಹಾಗೆ 2022ರಲ್ಲಿ ಕೊಲೆ ಬೆದರಿಕೆ ಸಂಬಂಧ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಎಸ್.ಸಿ.ಆರ್ ಹಾಕಿ, ವಿಚಾರಣೆ ನಡೆಸಿ ಕೇಸ್ ಕ್ಲೋಸ್ ಮಾಡಿದ್ರು. ಆದ್ರೆ, ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ದರ್ಶನ್ ಜೈಲು ಸೇರಿದ ಮೇಲೆ‌ ಮತ್ತೆ ಪ್ರಕರಣ ಮುನ್ನೆಲೆಗೆ ಬಂದಿತ್ತು.

publive-image

ನಿರ್ಮಾಪಕ ಭರತ್ ಕಳೆದ ಜುಲೈ 26ರಂದು ಮತ್ತೆ ಪೊಲೀಸರಿಗೆ ದೂರು ಅರ್ಜಿ ಸಲ್ಲಿಸಿದ್ದರು. ನಟ ದರ್ಶನ್, ನಾಗ, ಧ್ರುವನ್, ಅನೂಪ್ ಅಂಟೋನಿ ಸೇರಿ 5 ವಿರುದ್ಧ ಸೂಕ್ತ ಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ದೂರು ಅರ್ಜಿ ಸಲ್ಲಿಸಿದ ನಂತರ ಮತ್ತೆ ಆರೋಪಿಗಳ ವಿಚಾರಣೆ ನಡೆಸಿ ಡಿಸಿಪಿಗೆ ವರದಿ ಸಲ್ಲಿಸಲಾಗಿದೆ. ಇನ್ಸ್​ಪೆಕ್ಟರ್​ ಸಲ್ಲಿಸಿರೋ ವರದಿಯಲ್ಲಿ ಏನಿದೆ ಅಂತ ನೋಡೋದಾದ್ರೆ.?

Advertisment

publive-image

ಇದನ್ನೂ ಓದಿ:ಕಿಚ್ಚ ಸುದೀಪ್‌ ಆಪ್ತ, ಖ್ಯಾತ ನಿರ್ಮಾಪಕ ಜಾಕ್ ಮಂಜು ವಿರುದ್ಧ FIR; ಕಾರಣವೇನು?
ದೂರು ಅರ್ಜಿಯನ್ನ ಕೂಲಕುಂಷವಾಗಿ ವಿಚಾರಣೆ ನಡೆಸಲಾಗಿದೆ. ಅನೂಪ್ ಅಂಟೋನಿ, ಆರುಣ್ ಸುರೇಶ್ ಹೇಳಿಕೆಯನ್ನ ಪಡೆಯಲಾಗಿದೆ. ನಟ ಧ್ರುವನ್ ಅಲಿಯಾಸ್​ ಸೂರಜ್ ಅಪಘಾತವಾಗಿ ಬೆಡ್ ರೆಸ್ಟ್​ನಲ್ಲಿದ್ದಾರೆ. ಹೀಗಾಗಿ ಇಮೇಲ್ ಮೂಲಕ ಅವರ ಹೇಳಿಕೆಯನ್ನ ಪಡೆಯಲಾಗಿದೆ. ನಟ ದರ್ಶನ್, ನಾಗರಾಜು ಅಲಿಯಾಸ್​ ನಾಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಬ್ಬರೂ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಬಂಧನದಲ್ಲಿದ್ದು ಹೇಳಿಕೆ ಪಡೆಯಲಾಗಿಲ್ಲ.

ಇದನ್ನೂ ಓದಿ:ಪ್ರೇಕ್ಷಕರ ಮನ ಗೆದ್ದ ‘ಕೃಷ್ಣಂ ಪ್ರಣಯ ಸಖಿ’; ವೀಕೆಂಡಲ್ಲೂ ಗೋಲ್ಡನ್’ ಸಿನಿಮಾ​ ಹೌಸ್ ಫುಲ್

ಭರತ್ ಸಲ್ಲಿಸಿದ ದೂರು ಅರ್ಜಿ ಹಣಕಾಸಿಗೆ ಸಂಬಂಧಿತ ವಿಚಾರವಾಗಿದೆ. ಹೀಗಾಗಿ ಇದನ್ನ ಕೋರ್ಟ್​, ಸಕ್ಷಪ ಪ್ರಾಧಿಕಾರದ ಮುಂದೆ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಹಾಗಾಗಿ ಅರ್ಜಿ ವಿಚಾರಣೆ ಮುಕ್ತಾಯಕ್ಕೆ, ಕಡತದಲ್ಲಿ ಅಡಕಗೊಳಿಸಲು ಅನುಮತಿ ಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisment

ಒಟ್ನಲ್ಲಿ, ಕೊಲೆ ಕೇಸ್​ನಲ್ಲಿ ಲಾಕ್​ ಆಗಿರೋ ದರ್ಶನ್​ಗೆ ಬೆದರಿಕೆ ಪ್ರಕರಣ ಹೆಗಲೇರುತ್ತಾ? ಅಥವಾ ಅದ್ರಿಂದ ರಿಲೀಫ್​ ಸಿಗುತ್ತಾ ಅನ್ನೋ ಕುತೂಹಲ ಮೂಡಿದ್ದು, ಬೆದರಿಕೆ ಪ್ರಕರಣದ ಭವಿಷ್ಯ ಸದ್ಯ ಡಿಸಿಪಿ ಗಿರೀಶ್​ ಕೈಯಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment