newsfirstkannada.com

ಪ್ರಭಾಸ್​ಗೆ ಬಂತು ಆನೆ ಬಲ! ‘ಆದಿ ಪುರುಷ್​’ ಜೊತೆ ಕೈ ಜೋಡಿಸಿದ ಮತ್ತೊಬ್ಬ ಖ್ಯಾತ ನಟ

Share :

13-06-2023

    ಪ್ರಭಾಸ್​ ಜೊತೆ ಕೈ ಜೋಡಿಸಿದ ಮತ್ತೊಬ್ಬ ಸ್ಟಾರ್​ ನಟ

    ಆದಿಪುರುಷನಿಗೆ ಬಂತು ಆನೆ ಬಲ

    ಜೂನ್ 16ಕ್ಕೆ ವರ್ಲ್ಡ್​ವೈಡ್​ ರಿಲೀಸ್

ಅಲ್ಲು ಅರ್ಜುನ್ ಮತ್ತು ಪ್ರಭಾಸ್ ಇಬ್ಬರು ಪ್ಯಾನ್ ಇಂಡಿಯಾ ಸೂಪರ್​ಸ್ಟಾರ್ಸ್​. ಈ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದ್ರೆ ಹೇಗಿರುತ್ತೆ ಅಲ್ವಾ?. ಹೋಗ್ಲಿ ಬಿಡಿ ಸದ್ಯಕ್ಕೆ ಇದು ಬರೀ ಕನಸಷ್ಟೇ, ಈ ಕನಸು ನನಸಾಗೋ ಟೈಮ್​ ಅದ್ಯಾವಾಗ ಬರುತ್ತೋ ಏನೋ. ಈಗ ವಿಷ್ಯ ಏನಪ್ಪಾ ಅಂದ್ರೆ ಅಲ್ಲು ಅರ್ಜುನ್ ಮತ್ತು ಪ್ರಭಾಸ್​​ ಒಂದಾಗಿದ್ದಾರೆ. ಆದ್ರೆ ಅದು ಆನ್​ ಸ್ಕ್ರೀನ್​ನಲ್ಲಲ್ಲ ಆಫ್​ ಸ್ಕ್ರೀನ್​ನಲ್ಲಿ.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಚಿತ್ರೀಕರಣದಲ್ಲಿದ್ದಾರೆ. ಪುಷ್ಪ ಹಿಟ್ ಕೊಟ್ಟ ನಂತರ ಅದನ್ನ ಮೀರಿಸೋ ಬ್ಲಾಕ್​ಬಸ್ಟರ್​ ಹಿಟ್ ಕೊಡ್ಬೇಕು ಅನ್ನೋ ಗುರಿಯಿಂದ ಕೆಲಸ ಮಾಡ್ತಿರೋ ಅಲ್ಲು ಕನಸು ಮನಸಲ್ಲೂ ಪುಷ್ಪ ಬಗ್ಗೆ ಯೋಚಿಸ್ತಿದ್ದಾರೆ. ಈ ಕಡೆ ಪ್ರಭಾಸ್​ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿದ್ದು, ಒಂದಕ್ಕಿಂತ ಒಂದು ದೊಡ್ಡ ಸಿನಿಮಾ ಕೊಡೋ ಹಾದಿಯಲ್ಲಿದ್ದಾರೆ. ಇಬ್ಬರು ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಿದ್ದರೂ ಈಗ ಆದಿಪುರುಷ್ ಚಿತ್ರಕ್ಕಾಗಿ ಒಂದಾಗಿದ್ದಾರೆ.

ಪ್ರಭಾಸ್​ ಅಡ್ವೆಂಚರ್​ಗೆ ಐಕಾನ್ ಸ್ಟಾರ್​ ಸಾಥ್!

ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಜೂನ್ 16ಕ್ಕೆ ವರ್ಲ್ಡ್​ವೈಡ್​ ರಿಲೀಸ್ ಆಗ್ತಿದೆ. ತೆಲುಗು, ಹಿಂದಿ, ಕನ್ನಡ ಸೇರಿ ಐದು ಭಾಷೆಯಲ್ಲಿ ಪ್ರಪಂಚಾದ್ಯಂತ ಥಿಯೇಟರ್​ಗೆ ಬರ್ತಿದ್ದು, 3ಡಿಯಲ್ಲಿ ರಾಮಾಯಣ ದರ್ಶನವಾಗಲಿದೆ. ಇಂಥಾ ಮೆಗಾ ಸಿನಿಮಾ ಅಲ್ಲು ಅರ್ಜುನ್​ ಹೊಸ ಕನಸಿಗೆ ಮೊದಲ ಶಕ್ತಿಯಾಗಿ ನಿಲ್ಲುತ್ತಿದೆ.

ಅರ್ಜುನ್ ಥಿಯೇಟರ್​ ಲಾಂಚ್

ಹೌದು, ಅಲ್ಲು ಅರ್ಜುನ್ ನಟನೆ, ನಿರ್ಮಾಣ ಜೊತೆಗೆ ಈಗ ಪ್ರದರ್ಶನವನ್ನ ಆರಂಭಿಸಿದ್ದಾರೆ. ಹೈದರಾಬಾದ್​ನ ಪ್ರತಿಷ್ಠಿತ ರಸ್ತೆಯಲ್ಲಿ AAA ಸಿನಿಮಾಸ್ ಎಂಬ ಮಲ್ಟಿಪ್ಲೆಕ್ಸ್​ ಓಪನ್ ಮಾಡಿದ್ದಾರೆ. ಟಾಲಿವುಡ್ ಇಂಡಸ್ಟ್ರಿಯಲ್ಲಿ ಈಗಾಗಲೇ ಮಹೇಶ್ ಬಾಬು, ವೆಂಕಟೇಶ್, ವಿಜಯ್ ದೇವರಕೊಂಡ ಸೇರಿ ಬಹಳಷ್ಟು ಜನ ಸ್ವಂಥ ಥಿಯೇಟರ್​ ರನ್ ಮಾಡ್ತಿದ್ದಾರೆ. ಈಗ ಅಲ್ಲು ಅರ್ಜುನ್ ಕೂಡ ಸ್ವತಂತ್ರವಾಗಿ ಥಿಯೇಟರ್ ಬ್ಯುಸಿನೆಸ್​ ಕೈ ಹಾಕಿದ್ದು, ಜೂನ್ 15ಕ್ಕೆ ಅಲ್ಲು ಅರ್ಜುನ್ ಥಿಯೇಟರ್​ ಲಾಂಚ್ ಆಗುತ್ತಿದೆ.

ಲೇಟೆಸ್ಟ್​ ತಂತ್ರಜ್ಞಾನದೊಂದಿಗೆ ಅಲ್ಲು ಅರ್ಜುನ್ ಥಿಯೇಟರ್​ ಸಿದ್ಧವಾಗಿದ್ದು, ತೆಲುಗು ಇಂಡಸ್ಟ್ರಿಗೆ ಹೊಸ ಭರವಸೆ ಮೂಡಿಸಿದೆ. ಇದೀಗ ಜೂನ್ 15ಕ್ಕೆ ಥಿಯೇಟರ್ ಸಾರ್ವಜನಿಕ ವೀಕ್ಷಣೆ ಲಭ್ಯವಾಗ್ತಿದ್ದು, ಥಿಯೇಟರ್​ನಲ್ಲಿ ಮೊದಲ ಸಿನಿಮಾ ಆಗಿ ಪ್ರಭಾಸ್​ ನಟನೆಯ ಆದಿಪುರುಷ್ ಬಿಡುಗಡೆಯಾಗಲಿದೆ ಎಂಬ ವಿಚಾರ ಹೊರಬಿದ್ದಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪ್ರಭಾಸ್​ಗೆ ಬಂತು ಆನೆ ಬಲ! ‘ಆದಿ ಪುರುಷ್​’ ಜೊತೆ ಕೈ ಜೋಡಿಸಿದ ಮತ್ತೊಬ್ಬ ಖ್ಯಾತ ನಟ

https://newsfirstlive.com/wp-content/uploads/2023/06/Adi-purush.jpg

Load More