ಮತ್ತೊಂದು ವಂಚನೆ ಕೇಸ್‌.. ಐಶ್ವರ್ಯಾ ಗೌಡ ಬಂಧನದ ಬೆನ್ನಲ್ಲೇ ಬಿಡುಗಡೆ; ಏನಿದು ಹೊಸ ಟಿಸ್ಟ್‌?

author-image
Veena Gangani
Updated On
ಮತ್ತೊಂದು ವಂಚನೆ ಕೇಸ್‌.. ಐಶ್ವರ್ಯಾ ಗೌಡ ಬಂಧನದ ಬೆನ್ನಲ್ಲೇ ಬಿಡುಗಡೆ; ಏನಿದು ಹೊಸ ಟಿಸ್ಟ್‌?
Advertisment
  • R.R ನಗರದ ಶಿಲ್ಪಾ ಗೌಡ ಎಂಬುವವರು ದಾಖಲಿಸಿದ್ದ ಹೊಸ ಕೇಸ್
  • 9 ಕೋಟಿ ಚಿನ್ನದ ಬಳಿಕ ಕೋಟಿ, ಕೋಟಿ ವಂಚನೆಯ ಆರೋಪ
  • ಬಂಧನ ಆಗುತ್ತಿದ್ದಂತೆ ಬಿಡುಗಡೆಗೆ ಐಶ್ವರ್ಯಾ ಗೌಡ ಸಖತ್ ಪ್ಲಾನ್!

ಬೆಂಗಳೂರು: 9 ಕೋಟಿ ಚಿನ್ನ ವಂಚನೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ಐಶ್ವರ್ಯಾ ಗೌಡ ಮೇಲೆ ಮತ್ತಷ್ಟು ದೂರುಗಳು ದಾಖಲಾಗುತ್ತಿದೆ. R.R ನಗರದ ಶಿಲ್ಪಾ ಗೌಡ ಎಂಬುವವರು ವಿರುದ್ಧ FIR ದಾಖಲಿಸಿದ್ದು, ಐಶ್ವರ್ಯಾ ಗೌಡ ವಂಚನೆ ಕೇಸ್‌ಗೆ ಹೊಸ ತಿರುವು ಸಿಕ್ಕಿದೆ.

ಮತ್ತೊಂದು ವಂಚನೆ ಕೇಸ್ ದಾಖಲಿಸಿದ್ದ R.R ನಗರ ಪೊಲೀಸರು ಇವತ್ತು ಐಶ್ವರ್ಯಾ ಗೌಡ ಹಾಗೂ ಪತಿ ಹರೀಶ್ ಅವರನ್ನ ಅರೆಸ್ಟ್ ಮಾಡಿದ್ದರು. ಬಂಧಿಸಿದ ಕೂಡಲೇ ಪೊಲೀಸರು ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ ಅಷ್ಟರಲ್ಲಾಗಲೇ ಐಶ್ವರ್ಯಾ ಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದರು.

publive-image

R.R ನಗರದಲ್ಲಿ ದಾಖಲಾಗಿದ್ದ ಕೇಸ್​ ಸಂಬಂಧ ಇವತ್ತು ಮಧ್ಯಾಹ್ನ ಪೊಲೀಸರು ಐಶ್ವರ್ಯಾ ಗೌಡ, ಪತಿ ಹರೀಶ್ ಅವರನ್ನ​ ಬಂಧಿಸಿದ್ದರು. R.R.ನಗರ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸುತ್ತಿದ್ದಂತೆ ಐಶ್ವರ್ಯಾ ಗೌಡ ಅವರಿಗೆ ಜಾಮೀನು ಸಿಕ್ಕಿತ್ತು.

ಇದನ್ನೂ ಓದಿ: ವಂಚನೆ ಕೇಸ್‌.. ಐಶ್ವರ್ಯಾಗೆ ಬಿಗ್ ಶಾಕ್ ಕೊಟ್ಟ ಪೊಲೀಸರು; Audi, BMW ಕಾರುಗಳು ಸೀಜ್! 

ಶಿಲ್ಪಾ ಗೌಡ ನೀಡಿದ ದೂರಿನನ್ವಯ ಆರೋಪಿಗಳನ್ನ ಬಂಧನ ಮಾಡಿದ ಪೊಲೀಸರು ಹೈಕೋರ್ಟ್‌ ಜಾಮೀನು ನೀಡಿದ ಹಿನ್ನೆಲೆಯಲ್ಲಿ ರಿಲೀಸ್ ಮಾಡಿದ್ದಾರೆ. 9 ಕೋಟಿ ಚಿನ್ನ ಖರೀದಿಸಿ ಮೋಸದ ಕೇಸ್ ಜೊತೆಗೆ ಐಶ್ವರ್ಯಾ ಗೌಡ ಅವರ ಮೇಲೆ ಒಂದಾದ ಮೇಲೆ ಒಂದರಂತೆ ಆರೋಪ ಕೇಳಿ ಬರುತ್ತಿದೆ. ಮೋಸ ಹೋದವರು ಐಶ್ವರ್ಯಾ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment