Advertisment

ಬೆಂಗಳೂರಲ್ಲಿ 3 ವಾರಗಳ ಕಾಲ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

author-image
Veena Gangani
Updated On
ಬೆಂಗಳೂರಿಗರಿಗೆ ಬೆಳ್ಳಂಬೆಳಗ್ಗೆ ಮಳೆರಾಯ ಕಿರಿಕಿರಿ; ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಮಳೆ..?
Advertisment
  • ದಿನದಿಂದ ದಿನಕ್ಕೆ ಏರುತ್ತಿದ್ದ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿಗರು
  • ಮಳೆ ಬೀಳುತ್ತಿದ್ದಂತೆ ಈಗಿನಿಂದಲೇ ಎಚ್ಚೆತ್ತ ಬಿಬಿಎಂಪಿ ತಯಾರಿ ಶುರು
  • ಮುಂದಿನ 3 ವಾರಗಳ ಕಾಲ ಭಾರೀ ಮಳೆಯಾಗಲಿದೆ ಅಂತಾ ಮುನ್ಸೂಚನೆ ​

ಬೆಂಗಳೂರು: ಬಿಸಿಲ ಬೇಗೆಗೆ ಬಸವಳಿದಿದ್ದ ಬೆಂಗಳೂರಿಗೆ ವರುಣ ತಂಪೆರದ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಸಿಲಿಕಾನ್​ ಸಿಟಿಯಲ್ಲಿ ನಿರಂತರವಾಗಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.

Advertisment

publive-image

ಹೌದು, ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಮಳೆಯಾಗಿದೆ. ಬಿಸಿಲ ಹೊಡೆತಕ್ಕೆ ಅಬ್ಬಾಬ್ಬ ಅಂತ ಬೆವರು ಒರೆಸುತ್ತಾ ಮಂಕಾಗಿದ್ದ ಜನ. ಈಗ ಆಹಾ ಅಂತೂ ಇಂತು ಮಳೆ ಬಂತು ಅಂತ ಖುಷ್​ ಆಗಿದ್ದಾರೆ. 160 ದಿನಗಳ ಬಳಿಕ ಬೆಂಗಳೂರಲ್ಲಿ ಮೊನ್ನೆ ವರುಣ ಅಬ್ಬರಿಸಿದ್ದ. ಬಿಸಿಲ ಹೊಡೆತಕ್ಕೆ ಬಸವಳಿದಿದ್ದ ಬೆಂಗಳೂರು ಈಗ ಸ್ವಲ್ಪ ತಣ್ಣಗಾಗಿದೆ. ಈಗ ಇರೋ ಹೊಸ ಸಮಾಚಾರ ಏನಂದ್ರೆ, ನಗರದಲ್ಲಿ ನಿರಂತರ ಮೂರು ವಾರಗಳ ಕಾಲ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.

publive-image

ಗ್ಲೋಬಲ್ ಫಾರ್​ ಕಾಸ್ಟ್ ಸಿಸ್ಟಮ್ ಸಂಸ್ಥೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ ಮೂರು ವಾರಗಳ ಕಾಲ ನಿರಂತರ ಮಳೆಯಾಗುವ ಅಲರ್ಟ್ ನೀಡಿದೆ. ಈ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಟ್ವೀಟ್ ಮಾಡಿದ್ದು, ಮೂರು ವಾರಗಳ ಕಾಲ ಸತತವಾಗಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. ಇದರ ಜೊತೆಗೆ ಮೇ 8 ಹಾಗೂ 9ರಂದು ಬೆಂಗಳೂರಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಿದೆ.

ಇದನ್ನೂ ಓದಿ: Rain Alert: ಉದ್ಯಾನ ನಗರಿಯಲ್ಲಿ ಮುಂದಿನ 3 ದಿನ ಸಾಧಾರಣ ಮಳೆ.. ರಾಜ್ಯದಲ್ಲಿ ಎಲ್ಲೆಲ್ಲಿ?

Advertisment

ಮಳೆ ಬೀಳುತ್ತಿದ್ದಂತೆ ಬಿಬಿಎಂಪಿ ಮುಂಗಾರು ತಯಾರಿ ಶುರು

ಒಂದ್ಕಡೆ ಮಳೆಯ ಸಿಂಚನವಾಗಿದ್ರೆ, ಇನ್ನೊಂದ್ಕಡೆ ಬಿಬಿಎಂಪಿ ಮುಂಗಾರು ಸಿದ್ಧತೆಯನ್ನ ಶುರು ಮಾಡಿದೆ. ಈಗಾಗಲೇ ಸಮರೋಪಾದಿಯಲ್ಲಿ ರಾಜಕಾಲುವೆ ಹೂಳೆತ್ತುವ ಕಾರ್ಯದಲ್ಲಿ ಬಿಬಿಎಂಪಿ ನಿರತವಾಗಿದ್ದು, ಇದರ ಜೊತೆಗೆ ಪ್ರತಿ ವಾರ್ಡ್​ನಲ್ಲಿ ಅಧಿಕಾರಿಗಳನ್ನ ನೇಮಕ ಮಾಡಿದೆ. ಮುಖ್ಯವಾಗಿ ನಗರದಲ್ಲಿರುವ ಕೆಳ ಸೇತುವೆಯಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲಾಗಿದೆ ಅಂತ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

publive-image

ಈ ವರ್ಷ ಹವಾಮಾನ ಇಲಾಖೆ ನಮಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಸಾಮಾನ್ಯಕ್ಕಿಂತ ಈ ತಿಂಗಳು ಅಧಿಕ ಮಳೆ ಬರುತ್ತೆ ಅಂತಾ ಸೂಚನೆ ನೀಡಿದ್ದಾರೆ. ಇಷ್ಟು ದಿನ ಬಿಸಿಲಿನಿಂದ ಜನ ಬೇಸರಗೊಂಡಿದ್ದರು. ಆದರೆ ಈ ತಿಂಗಳು ಅಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸಿಲಿಕಾನ್​ ಸಿಟಿ ಜನರಿಗೆ ಈ ಸುದ್ದಿ ಖುಷಿ ನೀಡಿದೆ. ಕಳೆದ ವರ್ಷ ಸಿಕ್ಕಾಪಟ್ಟೆ ಮಳೆ ಬಂದು ಭಾರೀ ಅವಾಂತರ ಸೃಷ್ಟಿಯಾಗಿತ್ತು. ಹೀಗಾಗಿ ಈ ಬಾರಿ ಕೆಳ ಸೇತುವೆಯಲ್ಲಿ ನೀರು ಎಲ್ಲೂ ನಿಲ್ಲದಂತೆ ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳುತ್ತಿದ್ದೇವೆ.

- ತುಷಾರ್ ಗಿರಿನಾಥ್, ಬಿಬಿಎಂಪಿ ಚೀಫ್ ಕಮಿಷನರ್

publive-image

‘ಪಾಲಿಕೆ ಮುಂಗಾರು ತಯಾರಿ ಕೇವಲ ಮಾತಿಗೆ ಸೀಮಿತ’

ಸಿದ್ಧತೆಯೇನೋ ಆಗ್ತಾಯಿದೆ ಅಂತ ಹೇಳುವ ಬಿಬಿಎಂಪಿ, ಪ್ರತಿ ಬಾರಿಯೂ ವಿಫಲಗೊಳ್ಳುತ್ತಲೇ ಇದೆ. ನಿನ್ನೆ ಬೆಂಗಳೂರಲ್ಲಿ ಬಿದ್ದ ಸಾಮಾನ್ಯ ಮಳೆಗೂ ನಗರದಲ್ಲಿ ಸಾಲು ಸಾಲು ಅವಾಂತರ ಜರುಗಿದೆ. ಶೆಷಾದ್ರಿಪುರಂನ ಅಂಡರ್ ಪಾಸ್​ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ರು. ಮರಗಳ ರೆಂಬೆ ಕೊಂಬೆ ಬಿದ್ದು ಸುಮಾರು 35 ಕಡೆಗಳಲ್ಲಿ ಆಸ್ತಿಗಳಿಗೆ ಹಾನಿಯೂ ಆಗಿದೆ. ಹೀಗೆ ಮಳೆಗಾಲ ಆರಂಭಕ್ಕೂ ಮೊದಲೇ ಹೀಗಾದ್ರೆ, ಮುಂದೆ ಏನ್​ ಗತಿ ಅನ್ನೋ ಆತಂಕವೂ ಜನರನ್ನ ಕಾಡೋಕೆ ಶುರುವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment