/newsfirstlive-kannada/media/post_attachments/wp-content/uploads/2024/06/darshan2-1.jpg)
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 4 ದಿನಗಳು ಕಳೆದಿವೆ. ಜೈಲಿಗೆ ಹೋದಾಗಿನಿಂದ ದರ್ಶನ್ ಅವರಿಗೆ ಚಿಂತೆ ಆವರಿಸಿದೆ. ಜೈಲಿನಲ್ಲಿ ಯಾರೊಂದಿಗೂ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ. ಜೈಲೊಳಗೆ ಕೂತು ಚಿಂತೆಯಲ್ಲಿ ಮುಳುಗಿದ್ದಾರೆ. ಈ ಮಧ್ಯೆ ಲೋಕಸಭಾ ಚುನಾವಣೆ ಹೊತ್ತಲ್ಲೂ ನಟ ದರ್ಶನ್ ಹಾಗೂ ಆರೋಪಿ ಪ್ರದೂಶ್ಗೆ ಪಿಸ್ತೂಲ್ ವಿನಾಯ್ತಿ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು?
ಪಟ್ಟಣಗೆರೆ ಶೆಡ್ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಮಾಡಿ ಕೊಂದ ಡಿ ಗ್ಯಾಂಗ್ ಈಗ ಕಂಬಿ ಎಣಿಸ್ತಿದೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಈಗಾಗಲೇ ಜೈಲಿನಲ್ಲಿ 4 ದಿನಗಳನ್ನು ಕಳೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ನಟ ದರ್ಶನ್ ಫುಲ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸ್ಟೇಷನ್ನಲ್ಲಿ ಓಡಾಡಿಕೊಂಡಿದ್ದ ದರ್ಶನ್ ಮೌನಕ್ಕೆ ಜಾರಿದ್ದಾರೆ. ಯಾರೊಂದಿಗೂ ಮಾತನಾಡದೇ ಮೌನಂ ಶರಣಂ ಗಚ್ಛಾಮಿ ಮಂತ್ರ ಜಪಿಸ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್ನಿಂದ ನಟ ದರ್ಶನ್ ಕುಗ್ಗಿ ಹೋದಂತೆ ಕಾಣಿಸ್ತಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಮೌನಕ್ಕೆ ಜಾರಿದ್ದಾರೆ. ಜೈಲಿನಲ್ಲಿ ಬೆಳಗ್ಗೆ 6:30ರಿಂದ ಸಂಜೆ 6ರವರೆಗೆ ಸೆಲ್ ಓಪನ್ ಇರುತ್ತೆ, ಆದ್ರೆ ಜೈಲು ಸೇರಿದಾಗಿನಿಂದ ನಟ ಹೊರಗೆ ಬಾರದೇ ಜೈಲಲ್ಲೇ ಕುಳಿತಿದ್ದಾರೆ. ಬೇರೆ ಕೈದಿಗಳಿಗೂ ಮುಖ ತೋರಿಸಲು ದರ್ಶನ್ಗೆ ಮುಜುಗರ ಉಂಟಾಗಿದ್ದು ದಿನ ಪೂರ್ತಿ ಜೈಲಿನ ಸೆಲ್ನಲ್ಲೇ ಕುಳಿತು ದರ್ಶನ್ ಯೋಚನೆಯಲ್ಲಿ ಮುಳುಗಿದ್ದಾರೆ. ನಡೆದಿರುವ ಘಟನೆಗೆ ಪರಾಮರ್ಶೆ ಮಾಡಿಕೊಳ್ತಿದ್ದು ಆತನ ನೋಡಲು ಬೇರೆ ಕೈದಿಗಳು ಬಂದರೂ ಸಹ ‘ದರ್ಶನ’ ನೀಡುತ್ತಿಲ್ಲ.
ಇದನ್ನೂ ಓದಿ: ‘ಅತ್ತಿಗೆ ನಿಮ್ಮ ಜೊತೆ ನಾವಿದ್ದೇವೆ’; ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧೈರ್ಯ ತುಂಬಿದ ಅಭಿಮಾನಿಗಳು
ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜೈಲು ಸೇರಿರೋ ನಟ ದರ್ಶನ್ ಹಾಗೂ ಪ್ರದೂಶ್ನ ಪ್ರದೋಷ್ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದೆ. ದರ್ಶನ್ ಬಳಿ ಎರಡು ಯುಎಸ್ ಮೇಡ್ ಪಿಸ್ತೂಲ್ಗಳು, ಪ್ರದೂಶ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್ ಇದೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಆದ್ರೆ ದರ್ಶನ್-ಪ್ರದೂಷ್ ಸೇರಿ 277 ಮಂದಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು ಅಂತ ಹೇಳಲಾಗ್ತಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರೇ ಖುದ್ದು ವಿನಾಯಿತಿ ನೀಡಿ ಅದೇಶ ಹೊರಡಿಸಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ನಟ ದರ್ಶನ್ ಹಾಗೂ ಪ್ರದೂಶ್ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದು ಗನ್ ವಾಪಸ್ ಪಡೆಯುವ ಸಾಧ್ಯತೆ ಇದೆ.
ಯಾರಾರಿಗೆಲ್ಲಾ ಗನ್ ವಿನಾಯ್ತಿ ನೀಡಲಾಗುತ್ತೆ?
1.ನಿವೃತ್ತ ನ್ಯಾಯಾಧೀಶರು
2.IAS, IPS ಅಧಿಕಾರಿಗಳು
3.ಬ್ಯಾಂಕ್ ಮ್ಯಾನೇಜರ್ಗಳು
4. ಬ್ಯುಸಿನೆಸ್ ಮೆನ್ಗಳು
5. ಶಾಸಕರು, ಎಂಎಲ್ಸಿಗಳು
6. ಹಿರಿಯ ರಾಜಕಾರಣಿಗಳು
7. ಅತಿ ಗಣ್ಯವ್ಯಕ್ತಿಗಳು
ಒಟ್ಟಿನಲ್ಲಿ ಒಳ್ಳೆಯ ಕರ್ಮದಿಂದ ಒಳ್ಳೆಯ ಫಲ. ಆದ್ರೆ ನಟ ದರ್ಶನ್ ಪರಿಸ್ಥಿತಿ ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ. ಹೆಸರಾಂತ ನಟನಾಗಿ ಕೊಲೆ ಕೇಸ್ನಲ್ಲಿ ಜೈಲುಪಾಲಾಗಿರೋದು ಕರ್ಮ ಈಸ್ ಬ್ಯಾಕ್ ಎನ್ನುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ