/newsfirstlive-kannada/media/post_attachments/wp-content/uploads/2025/06/Iran-military-Chiefs.jpg)
ಇಸ್ರೇಲ್​​ ಮತ್ತು ಇರಾನ್​ ನಡುವಿನ ಕದನ 5ನೇ ದಿನವೂ ಮುಂದುವರಿದಿದೆ. ಇಸ್ರೇಲ್, ಇರಾನ್‌ನ ಟೆಹ್ರಾನ್​ ಮೇಲೆ ಕ್ಷಿಪಣಿಗಳ ಸುರಿಮಳೆಗೈಯುತ್ತಿದೆ. ಪಶ್ಚಿಮ ಇರಾನ್​ನಿಂದ ಟೆಹರಾನ್ ಕಡೆಗೆ ಸಾಗುತ್ತಿದ್ದ ಶಸ್ತ್ರಾಸ್ತ್ರ ತುಂಬಿದ ಟ್ರಕ್‌ಗಳನ್ನ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ಇರಾನ್ ಮಿಲಿಟರಿ ಮೂಲಸೌಕರ್ಯ ನಾಶಪಡಿಸುವ ನಿಟ್ಟಿನಲ್ಲಿ ಈ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಇರಾನ್ ಸುಪ್ರೀಂ ನಾಯಕ ಅಲಿ ಖಮೇನಿ ಅಜ್ಞಾತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. ಇಸ್ರೇಲ್​ ​ಮೊಸಾದ್ ಖಮೇನಿ ಅಡಗುತಾಣವನ್ನು ಕಂಡು ಹಿಡಿದಿದ್ದಾರೆ ಎಂದು ವರದಿಯಾಗಿದೆ. ಇದ್ರಿಂದ ಅಲಿ ಖಮೇನಿ ತುಂಬಾ ಭಯಭೀತರಾಗಿ ಅಲಿ ಖಮೇನಿ ಅಜ್ಞಾತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/06/Israil-iran-leader-Ali-Khamenei.jpg)
ಸಂಘರ್ಷ ಮುಂದುವರಿದಿದ್ದು, ಇಸ್ರೇಲ್ ದಾಳಿಯಲ್ಲಿ ಮತ್ತೊಬ್ಬ ಇರಾನ್ ಸೇನಾ ಮುಖ್ಯಸ್ಥನ ಹತ್ಯೆ ಮಾಡಲಾಗಿದೆ. ಟೆಹ್ರಾನ್​ನಲ್ಲಿ ನಡೆದ ಇಸ್ರೇಲ್ ವಾಯುದಾಳಿಯಲ್ಲಿ ಇರಾನ್ ಸೇನಾ ಮುಖ್ಯಸ್ಥ ಅಲಿ ಶದ್ಮಾನಿಯನ್ನು ಹತ್ಯೆಗೈದಿದ್ದಾರೆ. ಇಸ್ರೇಲ್ ಸೇನೆ ಅಲಿ ಶಾದ್ಮಾನಿ ಹತ್ಯೆಯನ್ನು ದೃಢಪಡಿಸಿದೆ.
ಇದನ್ನೂ ಓದಿ: ಇರಾನ್‌ನ ಸರ್ವೋಚ್ಛ ನಾಯಕ ಅಜ್ಞಾತ ಸ್ಥಳಕ್ಕೆ ಶಿಫ್ಟ್.. ಟೆಹ್ರಾನ್ ನಗರ ಖಾಲಿ ಖಾಲಿ..
/newsfirstlive-kannada/media/post_attachments/wp-content/uploads/2025/06/iran-israel-missile-attack-2.jpg)
ಅಲಿ ಶದಮಾನಿಯು ಇರಾನ್ ದೇಶದ ಮತ್ತೊಬ್ಬ ಟಾಪ್ ಕಮ್ಯಾಂಡರ್ ಆಗಿದ್ದರು. ಇತ್ತೀಚೆಗೆ ಅಲಿ ಶದಮಾನಿರನ್ನು ಇರಾನ್ ಸೇನಾ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. ಕಳೆದ 5 ದಿನದಲ್ಲೇ 2ನೇ ಇರಾನ್ ಸೇನಾ ಮುಖ್ಯಸ್ಥನ ಹತ್ಯೆಗೈಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us