newsfirstkannada.com

ಆತನಿಗಾಗಿ ಮಂಟಪದಲ್ಲಿ ಕಾದು ಕುಳಿತ ವಧು! ಜೈಲಿನಿಂದ ಪೆರೋಲ್​ ಮೂಲಕ ಬಂದು ತಾಳಿಕಟ್ಟಿದ್ದ ಮತ್ತೊಬ್ಬ ಗ್ಯಾಂಗ್​ಸ್ಟರ್​!

Share :

Published March 16, 2024 at 10:42am

Update March 16, 2024 at 10:43am

    ಪ್ರೇಯಸಿ ಜೊತೆ ನಡೆಯಿತು ತುಂಡಾನ ಅದ್ಧೂರಿ ಮದುವೆ

    ಪೆರೋಲ್​ ಮೂಲಕ ಹೊರಬಂದು ಮದುವೆಯಾದ ಕ್ರಿಮಿನಲ್​

    ಈತನ ಮೇಲಿದೆ ಕೊಲೆ, ದರೋಡೆ, ಸುಲಿಗೆ ಸೇರಿದಂತೆ ಹತ್ತಾರು ಕೇಸ್​

ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕುಖ್ಯಾತ ಕ್ರಿಮಿನಲ್​ಗಳ ವಿವಾಹಗಳ ಸದ್ದು ಜೋರಾಗಿ ಕೇಳಿಬರುತ್ತಿವೆ. ಸಂದೀಪ್​ಕಲಾ ಜತೇಡಿ ಎಂಬ ಗ್ಯಾಂಗ್​ಸ್ಟರ್​ ಪೆರೋಲ್​ ಮೂಲಕ ಹೊರಬಂದು ತನ್ನ ಲೇಡಿ ಡಾನ್​ ಅನುರಾಧಳನ್ನು ವಿವಾಹವಾಗುತ್ತಾನೆ. ಈತನ ವಿವಾಹಕ್ಕೆ 3 ರಾಜ್ಯ ಪೊಲೀಸರು ಕಣ್ಗಾವಲಿತ್ತು. 250ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಜೊತೆಗೆ ಸಿಸಿ ಕ್ಯಾಮೆರಾ, ಡ್ರೋನ್​ ಮೂಲಕ ಎಚ್ಚರವಹಿಸಿ ಮದುವೆ ನಡೆದಿತ್ತು. ಇದೀಗ ಅದರ ಬೆನ್ನಲ್ಲೇ ಮತ್ತೋರ್ವ ಗ್ಯಾಂಗ್​ಸ್ಟರ್​ ವಿವಾಹವಾಗಿದ್ದಾನೆ.

ಯೊಗೇಶ್​​ ದಬಿಯಾ ಅಲಿಯಾಸ್ ತುಂಡಾ ಎಂಬಾತ ವಿವಾಹವಾಗಿದ್ದಾನೆ. ಪಶ್ಚಿಮ ದೆಹಲಿಯ ವಿಕಾಸಪುರಿ ಪ್ರದೇಶದ ದೇವಸ್ಥಾನದಲ್ಲಿ ಪೊಲೀಸ್​ ಸಿಬ್ಬಂದಿ ಸಹಾಯ ಪಡೆದು ಮದುವೆಯಾಗಿದ್ದಾನೆ.

ತುಂಡಾ ಹರಿಯಾಣ ಸೋನಿಯತ್​ ಮೂಲದವನಾಗಿದ್ದು, ಆತನ ಮದುವೆಗಾಗಿ ದೆಹಲಿ ಹೈಕೋರ್ಟ್​ ಮಧ್ಯಾಹ್ನ 12ರಿಂದ ಸಂಜೆ 6 ಗಂಟೆವರೆಗೆ ಪೆರೋಲ್ ನೀಡಿತ್ತು. ಹೀಗಾಗಿ ಪೊಲೀಸ್​ ಸಿಬ್ಬಂದಿಯ ಕಣ್ಗಾವಲಿನಲ್ಲಿ ಆತ ವಿವಾಹವಾಗಿದ್ದಾನೆ.

ತುಂಡಾ ಗೋಗಿ ಗ್ಯಾಂಗ್​ನ ಪ್ರಮುಖ ಸಹಾಯಕರಲ್ಲಿ ಒಬ್ಬನಾಗಿದ್ದಾನೆ. ಮೇ, 2023ರಲ್ಲಿ ಈತ ತಿಹಾರ್​ ಜೈಲಿನಲ್ಲಿದ್ದ ಗ್ಯಾಂಗ್​ಸ್ಟರ್​​ ಸುನಿಲ್​ ಮಾನ್​​​ ಅಲಿಯಾಸ್​ ಟಿಲ್ಲು ತಾಜ್​ಪುರಿ ಕೊಲೆಯಲ್ಲಿ ಭಾಗಿಯಾಗಿದ್ದನು. ಇದಲ್ಲದೆ, ಈತನ ಮೇಲೆ ದೆಹಲಿಯಲ್ಲಿ ಕೊಲೆ, ದರೋಡೆ, ಸುಲಿಗೆ ಸೇರಿದಂತೆ ಹತ್ತಾರು ಕೇಸ್​ಗಳಿವೆ.

ತುಂಡಾನನ್ನು ಬಿಗಿ ಭದ್ರತೆಯಲ್ಲಿ ದೇವಸ್ಥಾನಕ್ಕೆ ಕರೆದೊಯ್ಯಲಾಗಿದೆ. ಈ ವೇಳೆ ಆತನನಿಗಾಗಿ ವಧು ದೇವಸ್ಥಾನದಲ್ಲಿ ಕಾಯುತ್ತಿದ್ದಳು. ಇನ್ನು ಈ ಜೋಡಿಯ ಒಟ್ಟು ಎಂಟು ಅತಿಥಿಗಳಿಗೆ ಮದುವೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಅವರೆಲ್ಲ ಪರಿಶೀಲಿಸಿದ ಐಡಿಗಳ ಜೊತೆಗೆ ವಿವಾಹಕ್ಕೆ ಹಾಜರಾಗುವಂತೆ ಅವಕಾಶ ನೀಡಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆತನಿಗಾಗಿ ಮಂಟಪದಲ್ಲಿ ಕಾದು ಕುಳಿತ ವಧು! ಜೈಲಿನಿಂದ ಪೆರೋಲ್​ ಮೂಲಕ ಬಂದು ತಾಳಿಕಟ್ಟಿದ್ದ ಮತ್ತೊಬ್ಬ ಗ್ಯಾಂಗ್​ಸ್ಟರ್​!

https://newsfirstlive.com/wp-content/uploads/2024/03/Tunda.jpg

Load More