/newsfirstlive-kannada/media/post_attachments/wp-content/uploads/2025/07/KERALA-WOMEN-2.jpg)
ಕೇರಳದ ಮತ್ತೊಬ್ಬ ಮಹಿಳೆ ಯುಎಇನಲ್ಲಿ (United Arab Emirates) ವರದಕ್ಷಿಣೆ ಕಿರುಕುಳದಿಂದ ಜೀವ ಕಳೆದುಕೊಂಡಿದ್ದಾಳೆ. 29 ವರ್ಷದ ಅತುಲ್ಯ (Athulya) ಎಂಬ ಮಹಿಳೆ ಪತಿ ಸತೀಶ್ ನೀಡಿದ ವರದಕ್ಷಿಣೆ ಕಿರುಕುಳದಿಂದ ಮೃತಪಟ್ಟಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾರ್ಜಾದ ಅಪಾರ್ಟ್ಮೆಂಟ್ನ ಪ್ಲ್ಯಾಟ್ನಲ್ಲಿ ಅತುಲ್ಯ ನಿಧನರಾಗಿದ್ದಾರೆ. 2014 ರಲ್ಲಿ ಸತೀಶ್ ಮತ್ತು ಅತುಲ್ಯ ವಿವಾಹ ನಡೆದಿತ್ತು.
ಅತುಲ್ಯ ತಾಯಿ ನೀಡಿರುವ ದೂರಿನಲ್ಲಿ ಸತೀಶ್, ತನ್ನ ಪತ್ನಿ ಅತುಲ್ಯಗೆ ಹೊಟ್ಟೆಗೆ ಒದಿದ್ದಾರೆ. ಪ್ಲೇಟ್ ನಿಂದ ತಲೆಗೆ ಹೊಡೆದಿದ್ದಾರೆ. ಜುಲೈ 19 ಮತ್ತು 19 ರಂದು ಹೀಗೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಅತುಲ್ಯ ಪ್ರಾಣಬಿಟ್ಟಿದ್ದಾರೆ. ವರದಕ್ಷಿಣೆ ತರುವಂತೆ ಅತುಲ್ಯಗೆ ಕಿರುಕುಳ ನೀಡಲಾಗಿತ್ತು. ಮದುವೆ ವೇಳೆ ಸತೀಶ್ಗೆ 40 ಸಾವರಿನ್ ಗೋಲ್ಡ್ ಮತ್ತು ಬೈಕ್ಅನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ಅತುಲ್ಯ ತಾಯಿ ದೂರಿನಲ್ಲಿ ಹೇಳಿದ್ದಾರೆ. ಸತೀಶ್ ತನ್ನ ಪತ್ನಿ ಅತುಲ್ಯಗೆ ವರದಕ್ಷಿಣೆಗಾಗಿ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ಜುಲೈ 19 ರಂದು ಅತುಲ್ಯ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆಗಿನ ಕಿತ್ತಾಟದ ಕಾರಣಕ್ಕೆ ಉಪರಾಷ್ಟ್ರಪತಿ ಸ್ಥಾನಕ್ಕೆ ಧನಕರ್ ರಾಜೀನಾಮೆ..!
ಅತುಲ್ಯ ತಂದೆ, ತಾಯಿ ನೀಡಿದ ದೂರಿನ ಆಧಾರದ ಮೇಲೆ ಈಗ ಸತೀಶ್ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ವರದಕ್ಷಿಣೆ ತಡೆ ಕಾಯಿದೆ 1961ರ ಸೆಕ್ಷನ್ 4 ಮತ್ತು 3 ರಡಿ ಕೇಸ್ ದಾಖಲಾಗಿದೆ. ಜೊತೆಗೆ ಬಿಎನ್‌ಎಸ್ ಕಾಯಿದೆಯ 85, 115(2), 118(1), 103(1) ರಡಿ ಕೇಸ್ ದಾಖಲಾಗಿದೆ. ಸತೀಶ್ ಮತ್ತು ಆತುಲ್ಯ ಇಬ್ಬರೂ ಕೊಲ್ಲಂ ಜಿಲ್ಲೆಯವರು. ತಮ್ಮ ಮಗಳು ಆತ್ಮ*ಹತ್ಯೆ ಮಾಡಿಕೊಂಡು ಸಾ*ವನ್ನಪ್ಪಿದ್ದಾಳೆ ಎಂಬುದನ್ನು ನಾನು ನಂಬಲ್ಲ. ಆಕೆಯ ಸಾವು ನಿಗೂಢವಾಗಿದೆ ಎಂದು ಅತುಲ್ಯ ತಂದೆ ರಾಜಶೇಖರ್ ಹೇಳಿದ್ದಾರೆ.
ಅತುಲ್ಯ ತಂದೆ, ತಮ್ಮ ಮಗಳು ಅತುಲ್ಯ ನಮ್ಮೊಂದಿಗೆ ಆತ್ಮೀಯವಾಗಿದ್ದಳು. ವಾಸ್ತವವಾಗಿ ಆಕೆಗೆ ಏನಾಯಿತು ಎಂಬುದನ್ನು ನಾವು ಪತ್ತೆ ಹಚ್ಚಬೇಕು. ಅತುಲ್ಯ ಗಂಡ ಅಲ್ಕೋಹಾಲ್ ಸೇವಿಸುತ್ತಿದ್ದ. ಆತ ಯಾವಾಗಲೂ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದ.
ಇದನ್ನೂ ಓದಿ: ಕಡೂರಿನಲ್ಲಿ ಜಲಯುದ್ಧ! 2 ಗ್ರಾಮಗಳ ಮಧ್ಯೆ ಭಯಾನಕ ಕೋಲ್ಡ್ವಾರ್.. ತಪ್ಪಿದ ಭಾರೀ ಅನಾಹುತ
ಅತುಲ್ಯ ಪ್ರತಿನಿತ್ಯ ನೀಡುತ್ತಿದ್ದ ಹಿಂಸೆಯನ್ನು ಸಹಿಸಿಕೊಂಡಿದ್ದಾಳೆ. ತನ್ನ ಮಗಳಿಗಾಗಿ ಆಕೆ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಈ ಮೊದಲು ಕೂಡ ಇಂಥ ಹಿಂಸೆಯ ಘಟನೆ ನಡೆದಿದೆ ಎಂದು ಆತುಲ್ಯ ತಂದೆ ರಾಜಶೇಖರ್ ಹೇಳಿದ್ದಾರೆ. ಹೆಂಡತಿಯ ಮೇಲೆ ಹಲ್ಲೆ ನಡೆಸಿರುವುದನ್ನು ಪತಿ ಸತೀಶ್ ನಿರಾಕರಿಸಿಲ್ಲ. ನಾನು ಮದ್ಯ ಸೇವಿಸಿದಾಗ, ಹಲ್ಲೆ ಮಾಡಿದ್ದಾನೆ. ಆದರೆ ಪ್ರತಿದಿನ ನಾನು ಹಲ್ಲೆ ನಡೆಸಿಲ್ಲ ಎಂದು ಪತಿ ಸತೀಶ್ ಹೇಳಿದ್ದಾನೆ. ನನ್ನ ಹೆಂಡತಿ ಕೂಡ ನನ್ನ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದಳು. ಆಕೆಗೆ ಕೋಪ ಬಂದಾಗ ಏನ್ ಮಾಡಬೇಕೆಂದು ಗೊತ್ತಾಗುತ್ತಿರಲಿಲ್ಲ. ಆಕೆಯೂ ನನಗೆ ಹೊಡೆಯುತ್ತಿದ್ದಳು. ಏಕೆಂದರೇ, ಆಕೆ ಕೋಪಗೊಂಡಿರುತ್ತಿದ್ದಳು. ಆಕೆಯೂ ನನ್ನನ್ನು ಪ್ರೀತಿಸುತ್ತಿದ್ದಳು ಎಂದು ಸತೀಶ್ ಹೇಳಿರುವುದಾಗಿ ಕೇರಳದ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:ರಾಯಚೂರಲ್ಲಿ ವಿದ್ರಾವಕ ಘಟನೆ.. ಊಟ ಮಾಡಿ ಮಲಗಿದ್ದ ತಂದೆ, ಇಬ್ಬರು ಹೆಣ್ಮಕ್ಕಳು ಇನ್ನಿಲ್ಲ
ಈ ತಿಂಗಳ ಪ್ರಾರಂಭದಲ್ಲಿ ಕೇರಳದ ಮತ್ತೊಬ್ಬ ಮಹಿಳೆ ವಿಪಂಚಿಕಾ ಮಣಿ ಕೂಡ ಇದೇ ರೀತಿ ವರದಕ್ಷಿಣೆ ಕಿರುಕುಳದಿಂದ ಶಾರ್ಜಾದಲ್ಲಿ ಸಾವನ್ನಪ್ಪಿದ್ದರು. ಆಕೆಯ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ, ಹತ್ಯೆ ಕೇಸ್ ಕೇರಳದ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಈಗ ಅತುಲ್ಯ ಅದೇ ಶಾರ್ಜಾದಲ್ಲಿ ವರದಕ್ಷಿಣೆ ಕಿರುಕುಳದಿಂದ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ವಿದೇಶಗಳಲ್ಲಿ ತಮ್ಮ ಮಗಳು ಸುಖವಾಗಿರುತ್ತಾರೆ ಎಂದು ಹೆಣ್ಣ ಹೆತ್ತ ಪೋಷಕರು, ವಿದೇಶದಲ್ಲಿರುವ ಹುಡುಗನಿಗೆ ಮದುವೆ ಮಾಡಿಕೊಡ್ತಾರೆ. ವಿದೇಶಕ್ಕೆ ಹೋದ ಮೇಲೆ, ಈ ರೀತಿಯ ವರದಕ್ಷಿಣೆ ಕಿರುಕುಳಗಳು ಧನದಾಹಿ ಗಂಡನಿಂದ ಶುರುವಾಗುತ್ತವೆ.
ಇದನ್ನೂ ಓದಿ: ನಟ ದರ್ಶನ್ ಪಾಲಿಗೆ ಇವತ್ತು ಬಿಗ್ ಡೇ.. ಮೊನ್ನೆ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ