ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಮೆಗೆ ಮತ್ತೊಂದು ಗರಿ; ಏನದು?

author-image
Veena Gangani
Updated On
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಮೆಗೆ ಮತ್ತೊಂದು ಗರಿ; ಏನದು?
Advertisment
  • ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ 3 ಭಾರತೀಯ ವಿಮಾನ ನಿಲ್ದಾಣಕ್ಕೆ ಸ್ಥಾನ
  • 3ನೇ ಱಂಕ್ ಪಡೆದುಕೊಂಡ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
  • ವಿಶ್ವದಲ್ಲೇ ಅತ್ಯಂತ ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ 3ನೇ ಸ್ಥಾನ ಪಡೆದ KIAL

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಕಷ್ಟು ವಿಚಾರಗಳಿಂದ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಇದೀಗ ಈ ಜನಪ್ರಿಯತೆಗೆ ಮತ್ತೊಂದು ಹೆಮ್ಮೆಯ ಗರಿ ಸೇರಿಕೊಂಡಿದ್ದು, ವಿಶ್ವದಲ್ಲೇ ಅತ್ಯಂತ ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಸಾಮಾನ್ಯವಾಗಿ ದೂರ ಪ್ರಯಾಣಕ್ಕೆ ನಾವು ಸಜ್ಜಾಗಿ ನಿಂತಾಗ ನಮ್ಮನ್ನ ಕಾಡೋ ಏಕೈಕ ಸಮಸ್ಯೆ ಅಂದ್ರೆ ಟ್ರಾನ್ಸ್​ಪೋರ್ಟ್​. ಅದರಲ್ಲೂ ಏರ್‌ಪೋರ್ಟ್‌ಗಳಲ್ಲಿ ಹವಮಾನ ಅಥವಾ ಇನ್ಯಾವುದೋ ತಾಂತ್ರಿಕ ದೋಷದಿಂದ ಪದೇ ಪದೇ ವಿಮಾನ ವಿಳಂಬವಾಗ್ತಿರುತ್ತೆ. ಆದ್ರೆ. ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕರೆಕ್ಟ್‌ ಟೈಮಿಗೆ ವಿಮಾನ ಹಾರಾಟವಾಗುತ್ತೆ.

publive-image

ಬೆಂಗಳೂರು ಏರ್​ಪೋರ್ಟ್​ಗೆ ​ಮತ್ತೊಂದು ಗರಿಮೆ 
ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ 3ನೇ ಸ್ಥಾನ ಪಡೆದ KIAL

ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸಮಯೋಚಿತ ಸೇವೆ ವಿಭಾಗದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕವಾಗಿ 3ನೇ ಱಂಕ್​ ಪಡೆದಿದೆ. ಏವಿಯೇಷನ್ ​​ಅನಾಲಿಟಿಕ್ಸ್ ಸಂಸ್ಥೆ ಸಿರಿಯಮ್‌, 2023ರ ಆನ್-ಟೈಮ್ ಪರ್ಫಾರ್ಮೆನ್ಸ್ ಆಧಾರದ ಮೇಲೆ ಸ್ಥಾನವನ್ನ ನೀಡಿದ್ದು, ಬೆಂಗಳೂರು ವಿಮಾನ ನಿಲ್ದಾಣ ಅತ್ಯಂತ ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ ಟಾಪ್​ 3 ಸ್ಥಾನ ಪಡೆದುಕೊಂಡಿದೆ. ಅತ್ಯಂತ ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ 3 ಭಾರತೀಯ ವಿಮಾನ ನಿಲ್ದಾಣಕ್ಕೆ ಸ್ಥಾನ ನೀಡಲಾಗಿದೆ.

publive-image

ಅದರಲ್ಲಿ ಶೇ 84.08 ರಷ್ಟು ಅಂಕ ಗಳಿಸುವ ಮೂಲಕ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂರನೇ ಸ್ಥಾನ ಪಡೆದುಕೊಂಡಿದೆ. ಆಗಮನ ಅಥವಾ ನಿರ್ಗಮನದಲ್ಲಿ 15 ನಿಮಿಷದ ವಿಳಂಬವನ್ನು ಸಮಯಪಾಲನೆಯ ಮೇಲೆ ಪರಿಣಾಮ ಬೀರುವ ಅಂಶವೆಂದು ಪರಿಗಣಿಸಿದೆ. ವಾಯುಯಾನ ಕಾರ್ಯಕ್ಷಮತೆಯನ್ನು ನಿರ್ಣಯಿಸುವಲ್ಲಿ ಅನ್ವಯಿಸಲಾದ ಕಠಿಣ ಮಾನದಂಡ ಎಂದು ಇದನ್ನ ಸಿರಿಯಮ್​ ಗುರುತಿಸಿದೆ. ಅತ್ಯಂತ ಪಂಕ್ಟುವಲ್‌ ಏರ್‌ಪೋರ್ಟ್‌ಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೊರೆತಿರುವ ಮೂರನೇ ಸ್ಥಾನವು ಸಿಲಿಕಾನ್​ ಸಿಟಿಯ ಗರಿಮೆಯನ್ನ ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಇದು ಉನ್ನತ-ಶ್ರೇಣಿಯ ವಾಯುಯಾನ ಕೇಂದ್ರ ಎನ್ನುವುದಕ್ಕೆ ಮಹತ್ವದ ಪುರಾವೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment