/newsfirstlive-kannada/media/post_attachments/wp-content/uploads/2024/06/Pradosh-2.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆ ನಟ ದರ್ಶನ್​, ನಟಿ ಪವಿತ್ರಾ ಗೌಡ ಮತ್ತು ಗ್ಯಾಂಗ್​ ಅರೆಸ್ಟ್​ ಆಗಿದ್ದಾರೆ. ಆದರೀಗ ಅವರ ಜೊತೆಗೆ ಮತ್ತೋರ್ವ ಸ್ಯಾಂಡಲ್​ವುಡ್​ ನಟನ ಹೆಸರು ತಳುಕು ಹಾಕಿಕೊಂಡಿದೆ. ಆತ ಯಾರು ಗೊತ್ತಾ?.
ಇದನ್ನೂ ಓದಿ: ಅಭಿಮಾನಕ್ಕಾಗಿ ದರ್ಶನ್​ ಹಿಂದೆ ಹೋದನಾ ರಾಚಯ್ಯ.. ಪೊಲೀಸರ ಮುಂದೆ ಕಣ್ಣೀರು ಹಾಕ್ತಿರುವುದೇಕೆ?
ದರ್ಶನ್​ ಜೊತೆ ಒಡನಾಟ ಬೆಳೆಸಿದ್ದ ನಟ ಪ್ರದೋಶ್ ಸಹ ಅರೆಸ್ಟ್​ ಆಗಿದ್ದಾರೆ. ಪ್ರದೋಶ್​ ಸ್ಯಾಂಡಲ್​ವುಡ್ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಇಷ್ಟೆಲ್ಲಾ ಆಗಿದ್ದು ನನ್ನಿಂದ.. ಪೊಲೀಸ್​​ ಕಸ್ಟಡಿಯಲ್ಲಿ ಪಶ್ಚಾತಾಪ ಪಡುತ್ತಿರುವ ಪವಿತ್ರಾ
ದರ್ಶನ್ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ಬಿಜೆಪಿ ಮುಖಂಡರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಬಿಜೆಪಿ ಐಟಿ ವಿಭಾಗದಲ್ಲಿಯೂ ಕೆಲಸ ಮಾಡಿದ್ದರಂತೆ. ರವಿಸುಬ್ರಹ್ಮಣ್ಯ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ಸದ್ಯ ರೇಣುಕಾಸ್ವಾಮಿಯ ಕೊಲೆ ಕೇಸ್​ನ​ಲ್ಲಿ ಪ್ರದೋಶ್ ಅರೆಸ್ಟ್​ ಆಗಿದ್ದಾರೆ. ಈ ಕೊಲೆ ಕೇಸ್​​ನಲ್ಲಿ ಪ್ರದೋಶ್​ ಎ14 ಆರೋಪಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ