/newsfirstlive-kannada/media/post_attachments/wp-content/uploads/2024/11/rachitha-ram.jpg)
ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್, ನಟ ಶ್ರೀನಗರ ಕಿಟ್ಟಿ ಅವರು ಕಂಪ್ಲೇಂಟ್ ಕೊಟ್ಟಿದ್ದಾರೆ. ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟ ನಿರ್ದೇಶಕ ನಾಗಶೇಖರ್, ರಮ್ಯಾ, ತಮನ್ನಾ ಎಲ್ಲರಿಗೂ ನಾನು ಸಿನಿಮಾ ಮಾಡಿದ್ದೀನಿ. ಆದ್ರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದರು.
ಇದನ್ನೂ ಓದಿ:ಸಿನಿಮಾವನ್ನೂ ಮೀರಿಸುವಂತಿದೆ ಸೋನಂ ಪ್ಲಾನ್.. ತನಿಖೆಯಲ್ಲಿ ಪ್ರತಿ ಸನ್ನಿವೇಶಗಳೂ ಮರುಸೃಷ್ಟಿ..
ಇದೀಗ ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಸಿನಿಮಾದಲ್ಲಿ ನಟಿಸುವುದಾಗಿ ಅಡ್ವಾನ್ಸ್ ಪಡೆದಿದ್ದರಂತೆ. ಆದ್ರೆ ಸಿನಿಮಾದಲ್ಲಿ ನಟಿಸದೇ ದೂರ ಉಳಿದುಕೊಂಡು, ಅಡ್ವಾನ್ಸ್ ವಾಪಸ್ ಕೊಡದೇ ಮೋಸ ಮಾಡಿದ್ದಾರೆಂದು ಹಿರಿಯ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರು ಆರೋಪ ಮಾಡಿದ್ದಾರೆ. ಇನ್ನೂ, ಈ ಈ ವಿಚಾರವಾಗಿ 10 ತಿಂಗಳ ಹಿಂದೆಯೂ ಗಲಾಟೆ ನಡೆದಿತ್ತಂತೆ. ಇದೀಗ ಮತ್ತೊಮ್ಮೆ ಆರೋಪ ಮಾಡಿದ್ದಾರೆ.
ಹೌದು, 8 ವರ್ಷಗಳ ಹಿಂದೆ ನಟ ಉಪೇಂದ್ರ ಮತ್ತು ರಚಿತಾ ನಟನೆಯಲ್ಲಿ ಸಿನಿಮಾ ಮೂಡಿ ಬರಬೇಕಿತ್ತು. ಉಪ್ಪಿ ರುಪ್ಪಿ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ನಟಿ ರಚಿತಾ ರಾಮ್ ಒಪ್ಪಿಕೊಂಡಿದ್ದರಂತೆ. ವಿಜಯಲಕ್ಷ್ಮಿ ಅರಸ್ ನಿರ್ಮಾಣದಲ್ಲಿ ಕೆ. ಮಾದೇಶ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಬೇಕಿತ್ತು. ಆದ್ರೆ, 23 ಲಕ್ಷ ಸಂಭಾವನೆಗೆ ಕಮಿಟ್ ಆಗಿದ್ದ ರಚಿತಾ ಮುಂಗಡವಾಗಿ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರಂತೆ. ಅಲ್ಲದೇ ಚಿತ್ರತಂಡ 2017ರಲ್ಲಿ ಬ್ಯಾಂಕಾಕ್ನಲ್ಲಿ ಶೂಟಿಂಗ್ ಮಾಡೋದಕ್ಕೆ ಪ್ಲಾನ್ ಕೂಡ ಮಾಡಿತ್ತು. ಅವರಿಗೆ ಬರುವುದಾಗಿ ಒಪ್ಪಿಕೊಂಡು ಆಮೇಲೆ ಟಿಕೆಟ್ ಬುಕ್ ಮಾಡಿದ್ರು ರಚಿತಾ ರಾಮ್ ಬಂದಿಲ್ಲವಂತೆ. 15 ದಿನಗಳ ಕಾಲ ಈಗ ಬರ್ತೀನಿ, ಆಗ ಬರ್ತೀನಿ ಅಂತ ಆಟ ಆಡಿಸುತ್ತಿದ್ದರಂತೆ. ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರು 15 ದಿನ ಟಿಕೆಟ್ ಬುಕ್ ಮಾಡಿ ರೂಮ್ ಬುಕ್ ಮಾಡಿಕೊಂಡು ಕಾದಿದ್ದರಂತೆ. ಆದ್ರೆ ರಚಿತಾ ರಾಮ್ ಬರದಿದ್ದಕ್ಕೇ ಹೀರೋ ಪೋರ್ಷನ್ ಶೂಟ್ ಮಾಡಿಕೊಂಡು ವಾಪಾಸ್ ಆಗಿತ್ತಂತೆ ಚಿತ್ರತಂಡ. ಒಂದು ದಿನ ಮಾತ್ರ ಮೈಸೂರಿನಲ್ಲಿ ನಡೆದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರಂತೆ. ಹೀಗಾಗಿ ನಿರ್ಮಾಪಕಿ ರಚಿತಾ ರಾಮ್ನಿಂದ ಒಂದುವರೆ ಕೋಟಿ ಕಳೆದುಕೊಂಡಿದ್ದೇನೆ. ಅವತ್ತಿನಿಂದ ಸಂಪರ್ಕಕ್ಕೆ ಸಿಗದೇ ನಟಿ ಸತಾಯಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ