newsfirstkannada.com

ಭೂಮಿ ಹಗರಣ.. ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್‌ ಹೆಗಲೇರಿದ ED ಭೂತ

Share :

Published January 31, 2024 at 5:54am

    ನಿತೀಶ್ ಕೊಟ್ಟಿದ್ದ ಪೆಟ್ಟಿನ ಬೆನ್ನಲ್ಲೇ ತೇಜಸ್ವಿ ಯಾದವ್‌ಗೆ ಬಲು ಸಂಕಷ್ಟ

    ಅಪ್ಪ ಹಾಕಿದ ಅಕ್ರಮದ ಆಲದ ಮರಕ್ಕೆ ಮಗ ಕೊರಳೊಡ್ಡುವ ಪರಿಸ್ಥಿತಿ

    ಲಾಲು ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದಾಗ ನಡೆದಿದ್ದ ಹಗರಣ

ಅತ್ತ ಜಾರ್ಖಂಡ್‌ ಸಿಎಂಗೆ ಇ.ಡಿ. ಭೂತ ಬೆನ್ನುಬಿದ್ದಿದ್ರೆ, ಇತ್ತ ಬಿಹಾರ ಮಾಜಿ ಡಿಸಿಎಂಗೂ ಜಾರಿ ನಿರ್ದೇಶನಾಲಯದಿಂದ ಸಂಕಷ್ಟ ಎದುರಾಗಿದೆ. ಹಳೇ ಕೇಸ್‌ನಲ್ಲಿ ಲಾಲು ಪ್ರಸಾದ್ ಯಾದವ್ ಪುತ್ರನಿಗೆ ಹೊಸ ಉರುಳಾಗಿದೆ. ಲ್ಯಾಂಡ್ ಫಾರ್ ಜಾಬ್ ಕೇಸ್‌ನಲ್ಲಿ ಇವತ್ತು ತೇಜಸ್ವಿ ಯಾದವ್ ಇ.ಡಿ ಪ್ರಶ್ನೆಗಳನ್ನ ಎದುರಿಸಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿಗೆ ಮತ್ತೊಂದು ಶಾಕ್ ಎದುರಾಗಿದೆ. ನಿತೀಶ್ ಕುಮಾರ್ ಕೊಟ್ಟಿದ್ದ ಪೆಟ್ಟಿನ ಬೆನ್ನಲ್ಲೇ ತೇಜಸ್ವಿ ಯಾದವ್‌ಗೆ ಸಂಕಷ್ಟವೊಂದು ಎದುರಾಗಿದೆ. ಉದ್ಯೋಗಕ್ಕಾಗಿ ಭೂಮಿ ಹಗರಣ ಭೂತ ಬಿಹಾರ ಮಾಜಿ ಡಿಸಿಎಂ ಬೆನ್ನುಬಿದ್ದಿದೆ.

ಬಿಹಾರ ಮಾಜಿ ಡಿಸಿಎಂ ಹೆಗಲೇರಿದ ಇ.ಡಿ ಭೂತ!
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ವಿಚಾರಣೆ!

ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಬ್ರೇಕ್ ಬೀಳ್ತಿದ್ದಂತೆ ತೇಜಸ್ವಿ ಯಾದವ್‌ಗೆ ಇ.ಡಿ ಬಿಸಿ ತಟ್ಟಿದೆ. ಲಾಲು ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದಾಗ ನಡೆದಿದ್ದ ಹಗರಣವೀಗ ಅವರ ಪುತ್ರನಿಗೂ ಸುತ್ತಿಕೊಂಡಿದೆ. ಅಪ್ಪ ಹಾಕಿದ ಅಕ್ರಮದ ಆಲದ ಮರಕ್ಕೆ ಮಗ ಕೊರಳೊಡ್ಡುವ ಪರಿಸ್ಥಿತಿ ಎದುರಾಗಿದೆ. ಮೊದಲೇ ಅಧಿಕಾರ ಕಳೆದುಕೊಂಡು ಕಂಗಾಲಾಗಿರೋ ತೇಜಸ್ವಿ ಯಾದವ್‌ಗೆ ಜಾರಿ ನಿರ್ದೇಶನಾಲಯ ಸಂಕಷ್ಟಕ್ಕೆ ತಳ್ಳಿದೆ. 2008-09ರಲ್ಲಿ ಯುಪಿಎ ಸರ್ಕಾರದಲ್ಲಿ ಲಾಲು ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದರು. ಈ ವೇಳೆ ರೈಲ್ವೆಯಲ್ಲಿ ಡಿ ಗ್ರೂಪ್ ಉದ್ಯೋಗಕ್ಕಾಗಿ ಆಕಾಂಕ್ಷಿಗಳಿಂದ ಭೂಮಿ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆಗ ದುಬಾರಿ ಭೂಮಿಯನ್ನ ಅಲ್ಪ ಮೊತ್ತಕ್ಕೆ ಬರೆಸಿಕೊಂಡಿದ್ದಾರೆ ಎಂಬ ಕೇಸ್ ದಾಖಲಾಗಿತ್ತು.

ಅಲ್ಲದೇ ಲಾಲು ಪ್ರಸಾದ್ ಯಾದವ್ ತಮ್ಮ ಕುಟುಂಬಸ್ಥರ ಹೆಸರಿಗೆ ಬರೆಸಿಕೊಂಡು ಉದ್ಯೋಗ ಹಂಚಿಕೆ ಮಾಡಿದ್ದಾರೆ ಎನ್ನಲಾಗಿತ್ತು. ಈ ಕೇಸ್‌ನಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಜಾರಿ ನಿರ್ದೇಶನಾಲಯ 4,751 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಇದರ ಬೆನ್ನಲ್ಲೇ ರೂಸ್ ಅವೆನ್ಯೂ ಕೋರ್ಟ್‌ನಿಂದ ಲಾಲೂ ಕುಟುಂಬಕ್ಕೆ ಸಮನ್ಸ್ ಜಾರಿಯಾಗಿತ್ತು. ಒಟ್ಟು ಏಳು ಮಂದಿಯನ್ನು ಆರೋಪಿಗಳನ್ನಾಗಿ ಇ.ಡಿ ಹೆಸರಿಸಿದ್ದು, ಲಾಲು ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ, ಪುತ್ರಿ ಹೇಮಾ ಮತ್ತೊಬ್ಬ ಪುತ್ರಿ ಮಿಸಾ ಭಾರತಿ, ಹೃದಯಾನಂದ್ ಚೌಧರಿ, ಅಮಿತ್ ಕತ್ಯಾಲ್‌, ತೇಜಸ್ವಿ ಯಾದವ್‌ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು.

ಇ.ಡಿ. ವಿಚಾರಣೆಗೆ ಹಾಜರಾದ ತೇಜಸ್ವಿ ಯಾದವ್‌

ಬಿಹಾರದ ಪಾಟ್ನಾದಲ್ಲಿರೋ ತೇಜಸ್ವಿ ಯಾದವ್ ಮನೆಯ ಗೇಟ್‌ಗೆ ಇ.ಡಿ ಅಧಿಕಾರಿಗಳು ನೋಟಿಸ್ ಅಂಟಿಸಿ ಹೋಗಿದ್ರು. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕೊಟ್ಟಿದ್ರು. ಇದರ ಬೆನ್ನಲ್ಲೇ ಇವತ್ತು ತೇಜಸ್ವಿ ಯಾದವ್ ಪಾಟ್ನಾದ ಬ್ಯಾಂಕ್ ರಸ್ತೆಯಲ್ಲಿರೋ ಇ.ಡಿ ಕಚೇರಿಗೆ ಆಗಮಿಸಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಯಾದವ್‌ರನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ರು. ಜಾರಿ ನಿರ್ದೇಶನಾಲಯದ 12 ಅಧಿಕಾರಿಗಳ ತಂಡ ತೇಜಸ್ವಿ ಯಾದವ್‌ಗೆ ವಿಚಾರಣೆ ನಡೆಸಿದೆ. ಈ ವೇಳೆ ನೀವು ಕೋಟಿಗಟ್ಟಲೇ ಹಣವನ್ನ ಹೇಗೆ ಗಳಿಸಿದ್ದೀರಿ? ಉದ್ಯೋಗಕ್ಕಾಗಿ ಆಕಾಂಕ್ಷಿಗಳಿಂದ ಭೂಮಿ ಪಡೆದಿದ್ರಾ? ಲ್ಯಾಂಡ್ ಫಾರ್ ಜಾಬ್ ಪ್ರಕರಣದಲ್ಲಿ ನಿಮ್ಮ ಪಾತ್ರವೇನು? ಹೀಗೆ ಸುಮಾರು 50 ಪ್ರಶ್ನೆಗಳನ್ನ ಇ.ಡಿ. ಅಧಿಕಾರಿಗಳು ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ, ಅಪ್ಪನಿಂದ ಬಳುವಳಿಯಂತೆ ಬಂದಿರೋ ಹಳೇ ಕೇಸ್‌ ತೇಜಸ್ವಿ ಯಾದವ್‌ಗೆ ಈಗ ಸಂಕಷ್ಟಕ್ಕೆ ತಳ್ಳಿದೆ. ಆದ್ರೆ, ನಿತೀಶ್ ಕುಮಾರ್‌ ಜೊತೆಗಿನ ಮೈತ್ರಿ ಖತಂ ಆಗ್ತಿದ್ದಂತೆ ಇ.ಡಿ ವಿಚಾರಣೆ ನಡೆಸ್ತಿರೋದು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೂಮಿ ಹಗರಣ.. ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್‌ ಹೆಗಲೇರಿದ ED ಭೂತ

https://newsfirstlive.com/wp-content/uploads/2024/01/yadav-1.jpg

Load More