newsfirstkannada.com

ಮತ್ತೆ ಅಶ್ರುವಾಯು ಪ್ರಯೋಗ.. ಪಂಜಾಬ್-ಹರಿಯಾಣ ಗಡಿಯಲ್ಲಿ ದಿಕ್ಕಾಪಾಲಾಗಿ ಓಡಿದ ರೈತರು

Share :

Published February 21, 2024 at 1:48pm

  ಪಂಜಾಬ್, ಹರಿಯಾಣದಿಂದ ದೆಹಲಿ ಚಲೋಗೆ ನುಗ್ಗಿದ ರೈತರು

  ಶಂಭು ಗಡಿಯಲ್ಲಿ ರೈತರನ್ನು ತಡೆಯಲು ಪೊಲೀಸರ ಹರಸಾಹಸ

  ಗ್ಯಾಸ್ ಮಾಸ್ಕ್‌, ಹಿಟಾಚಿ, ಜೆಸಿಬಿ, ಕ್ರೇನ್‌ಗಳನ್ನು ತಂದಿರುವ ರೈತರು

ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಕೇಂದ್ರ ಸರ್ಕಾರದ ವಿರುದ್ಧ ಹೋರಾಡಲು ದೆಹಲಿ ಚಲೋಗೆ ಕರೆ ನೀಡಿರುವ ರೈತರು ಪಂಜಾಬ್, ಹರಿಯಾಣ ಭಾಗದಿಂದ ದೆಹಲಿಯತ್ತ ನುಗ್ಗುತ್ತಿದ್ದಾರೆ. ಶಂಭು ಗಡಿಯಲ್ಲಿ ರೈತರನ್ನು ತಡೆಯಲು ಪೊಲೀಸರು ಮತ್ತೊಮ್ಮೆ ಅಶ್ರುವಾಯು ಸಿಡಿಸಿದ್ದು, ಪ್ರತಿಭಟನಾ ನಿರತ ರೈತರು ದಿಕ್ಕಾಪಾಲಾಗಿ ಓಡಿದ್ದಾರೆ.

ಕೇಂದ್ರ ಸರ್ಕಾರದ ಜೊತೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಇಂದು ಮತ್ತೆ ಸಾವಿರಾರು ರೈತರು ದೆಹಲಿ ಚಲೋ ಹಮ್ಮಿಕೊಂಡಿದ್ದರು. ಪಂಜಾಬ್, ಹರಿಯಾಣದಿಂದ ಸುಮಾರು 1200 ಟ್ರ್ಯಾಕ್ಟರ್‌ಗಳ ಮೂಲಕ 14 ಸಾವಿರಕ್ಕೂ ಹೆಚ್ಚು ರೈತರು ದೆಹಲಿಯತ್ತ ಸಾಗುತ್ತಿದ್ದಾರೆ. ಗ್ಯಾಸ್ ಮಾಸ್ಕ್‌, ಹಿಟಾಚಿ, ಜೆಸಿಬಿ, ಕ್ರೇನ್,‌ ಪ್ರೋಕ್ಷೈನ್ ಮೆಷಿನ್‌ಗಳನ್ನು ತಂದಿರುವ ರೈತರು ದೆಹಲಿಯತ್ತ ಹೊರಟಿದ್ದರು. ಇದರ ಜೊತೆಗೆ ಟ್ರಾಕ್ಟರ್ ಚಾಲಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡದಂತೆ ತಡೆಯೋ ರಕ್ಷಣಾ ಪರದೆಯನ್ನು ನಿರ್ಮಾಣ ಮಾಡಲಾಗಿದೆ.

ರೈತರ ಟ್ರ್ಯಾಕ್ಟರ್‌ಗಳು ಶಂಭು ಗಡಿಗೆ ಆಗಮಿಸುತ್ತಿದ್ದಂತೆ ಪಂಜಾಬ್ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಪಂಜಾಬ್-ಹರಿಯಾಣ ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಪ್ರಯೋಗದಿಂದ ರೈತರು ದಿಕ್ಕಾಪಾಲಾಗಿ ಓಡಿದ್ದಾರೆ. ರೈತರನ್ನು ತಡೆಯಲು ಪೊಲೀಸರು ಭದ್ರಕೋಟೆಯನ್ನೇ ನಿರ್ಮಿಸಿದ್ದಾರೆ. ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಅಶ್ರುವಾಯು ಪ್ರಯೋಗ.. ಪಂಜಾಬ್-ಹರಿಯಾಣ ಗಡಿಯಲ್ಲಿ ದಿಕ್ಕಾಪಾಲಾಗಿ ಓಡಿದ ರೈತರು

https://newsfirstlive.com/wp-content/uploads/2024/02/Tear-Gas-Farmers.jpg

Load More