ಬೆಂಗಳೂರಲ್ಲಿ ಮತ್ತೊಂದು ದಾರುಣ ಘಟನೆ.. ಹೆಂಡತಿಯ ಟಾರ್ಚರ್‌ಗೆ ಟೆಕ್ಕಿ ಸಾವಿಗೆ ಶರಣು?

author-image
admin
Updated On
ಬೆಂಗಳೂರಲ್ಲಿ ಮತ್ತೊಂದು ದಾರುಣ ಘಟನೆ.. ಹೆಂಡತಿಯ ಟಾರ್ಚರ್‌ಗೆ ಟೆಕ್ಕಿ ಸಾವಿಗೆ ಶರಣು?
Advertisment
  • ಲೆನೊವೊ ಕಂಪನಿಯ ಹಿರಿಯ ಉದ್ಯೋಗಿ ಸಾವಿಗೆ ಶರಣು
  • 12 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ 8 ವರ್ಷದ ಮಗಳು
  • ಪ್ರಶಾಂತ್ ಹಾಗೂ ಪೂಜಾ ದಂಪತಿ ಮಧ್ಯೆ ಭಿನ್ನಾಭಿಪ್ರಾಯ!

ಬೆಂಗಳೂರಲ್ಲಿ ಮತ್ತೊಬ್ಬ ಸಾಫ್ಟ್‌ವೇರ್ ಉದ್ಯೋಗಿ ಹೆಂಡತಿಯ ಕಿರುಕುಳಕ್ಕೆ ಸಾವನ್ನಪ್ಪಿದ್ದಾರೆ ಎನ್ನಲಾದ ದೂರು ದಾಖಲಾಗಿದೆ. ಲೆನೊವೊ ಕಂಪನಿಯ ಹಿರಿಯ ಉದ್ಯೋಗಿ ಪ್ರಶಾಂತ್ ನಾಯರ್ ಮೃತ ದುರ್ದೈವಿ.
40 ವರ್ಷದ ಪ್ರಶಾಂತ್ ನಾಯರ್ ಅವರು ಚಿಕ್ಕಬಾಣಾವರದ ಡಿ.ಎಕ್ಸ್ ಸ್ಮಾರ್ಟ್ ನೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ.

ಪ್ರಶಾಂತ್‌ 12 ವರ್ಷದ ಹಿಂದೆ ಪೂಜಾ ಎಂಬಾಕೆಯನ್ನು ಮದುವೆಯಾಗಿದ್ದರು. ಪೂಜಾ ನಾಯರ್ ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ 8 ವರ್ಷದ ಮಗಳು ಸಹ ಇದ್ದಾಳೆ.

ಇತ್ತೀಚೆಗೆ ಪ್ರಶಾಂತ್ ಹಾಗೂ ಪೂಜಾ ದಂಪತಿ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯ ಉಂಟಾಗಿತ್ತು. ಪ್ರಶಾಂತ್‌ಗೆ ಪತ್ನಿ ಪೂಜಾ ಟಾರ್ಚರ್ ಕೊಟ್ಟಿರುವ ಆರೋಪ ಕೇಳಿ ಬಂದಿತ್ತು.

publive-image

ನಿನ್ನೆ ಪ್ರಶಾಂತ್‌ ನಾಯರ್‌ ತಂದೆ ಮಗನಿಗೆ ಹಲವು ಬಾರಿ ಕರೆ ಮಾಡಿದ್ರು ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಪ್ರಶಾಂತ್ ತಂದೆ ಮನೆ ಬಳಿ ಬಂದು ನೋಡಿದ್ದಾಗ ಈ ದುರಂತ ಬೆಳಕಿಗೆ‌‌ ಬಂದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭವ್ಯ ಗೌಡ ಒಬ್ಬರೇ ಅಲ್ಲ.. ಕಿರಣ್ ರಾಜ್​​ಗೆ ಜೋಡಿಯಾಗಿ ಮತ್ತೊಬ್ಬ ಸ್ಟಾರ್​ ನಟಿ ಅಚ್ಚರಿ ಎಂಟ್ರಿ! 

ಗಂಡನ ಸಾವಿಗೆ ಕಾರಣವೇನು?
ಮೃತ ಪ್ರಶಾಂತ್ ನಾಯರ್ ಅವರು ಲೆನೊವೊ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಕಳೆದ ಎರಡು ವರ್ಷಗಳಿಂದ ಪತ್ನಿ ಜೊತೆಗಿನ ಸಂಬಂಧ ಸರಿ ಇರಲಿಲ್ಲ. ಕೌಟುಂಬಿಕ ಕಲಹದಿಂದ ಗಂಡ-ಹೆಂಡತಿ ಬೇರೆ ಬೇರೆ ವಾಸ ಮಾಡುತ್ತಿದ್ದರು.

ಪ್ರಶಾಂತ್ ಹಾಗೂ ಪೂಜಾ 3 ತಿಂಗಳ ಹಿಂದೆ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಒಂಟಿಯಾಗಿ ಮನೆಯಲ್ಲಿ ಇರುತ್ತಿದ್ದ ಪ್ರಶಾಂತ್ ನಾಯರ್ ಅವರು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment