IPLನಲ್ಲಿ ಮತ್ತೊಂದು ಹೈಟೆನ್ಷನ್ ಪಂದ್ಯ.. ಲಾಸ್ಟ್ ಓವರ್‌ನಲ್ಲಿ RR ವಿರುದ್ಧ ಕೋಲ್ಕತ್ತಾಗೆ ರೋಚಕ ಜಯ

author-image
admin
Updated On
IPLನಲ್ಲಿ ಮತ್ತೊಂದು ಹೈಟೆನ್ಷನ್ ಪಂದ್ಯ.. ಲಾಸ್ಟ್ ಓವರ್‌ನಲ್ಲಿ RR ವಿರುದ್ಧ ಕೋಲ್ಕತ್ತಾಗೆ ರೋಚಕ ಜಯ
Advertisment
  • 207 ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನಕ್ಕೆ ಮತ್ತೆ ಕೈ ಕೊಟ್ಟ ಅದೃಷ್ಟ!
  • 8 ಸಿಕ್ಸರ್, 6 ಬೌಂಡರಿ ಸಿಡಿಸಿದ ರಿಯಾನ್ ಪರಾಗ್ ಹೋರಾಟ ವ್ಯರ್ಥ
  • ಕೋಲ್ಕತ್ತಾದಲ್ಲಿ ಸಂಕಷ್ಟದಲ್ಲಿರುವ RR ತಂಡಕ್ಕೆ ಮತ್ತೊಂದು ಆಘಾತ

ಐಪಿಎಲ್‌ ಸೀಸನ್ 18ರ ಮತ್ತೊಂದು ರೋಚಕ ಪಂದ್ಯಕ್ಕೆ ಕೋಲ್ಕತ್ತಾ ಈಡನ್ ಗಾರ್ಡನ್ ಸ್ಟೇಡಿಯಂ ಸಾಕ್ಷಿಯಾಗಿದೆ. ಕೊನೇ ಓವರ್‌ನ ಕೊನೆಯ ಬಾಲ್‌ನಲ್ಲಿ ಕೋಲ್ಕತ್ತಾ 1 ರನ್‌ನಿಂದ ಗೆಲುವು ಸಾಧಿಸಿದೆ. ರೋಚಕ ಹಣಾಹಣಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ವಿರೋಚಿತ ಸೋಲು ಅನುಭವಿಸಿದೆ.

publive-image

ಲಾಸ್ಟ್‌ ಓವರ್ ಮ್ಯಾಜಿಕ್‌ನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಅದೃಷ್ಟ ಕೈ ಕೊಟ್ಟಿದೆ. ಕೋಲ್ಕತ್ತಾ ತಂಡದ 207 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವಿಫಲವಾಗಿದೆ. ಯಶಸ್ವಿ ಜೈಸ್ವಾಲ್ 34 ರನ್‌ಗೆ ಔಟಾದ್ರೆ, ಶತಕದ ಬಾಲಕ ವೈಭವ್ ಸೂರ್ಯವಂಶಿ ಕೇವಲ 4 ರನ್‌ಗೆ ತನ್ನ ವಿಕೆಟ್ ಒಪ್ಪಿಸಿದರು.

publive-image

3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ RR ತಂಡಕ್ಕೆ ಮತ್ತೊಂದು ಆಘಾತ ಎದುರಾಯ್ತು. ನಂತರ ಕ್ರೀಸ್‌ಗೆ ಬಂದ ಮೂವರು ಆಟಗಾರರು ಶೂನ್ಯಕ್ಕೆ ಔಟಾದರು. ಕೊನೆಗೆ RR ನಾಯಕ ರಿಯಾನ್ ಪರಾಗ್ ಅವರು ಏಕಾಂಗಿಯಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 8 ಸಿಕ್ಸರ್, 6 ಬೌಂಡರಿ ಸಿಡಿಸಿದ ರಿಯಾನ್ ಪರಾಗ್ ಅವರು 95 ರನ್‌ಗಳಿಗೆ ತನ್ನ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: 6, 6, 6, 6, 6, 6.. ಕೋಲ್ಕತ್ತಾದಲ್ಲಿ ಆಂಡ್ರೆ ರಸೆಲ್ ಸಿಕ್ಸರ್‌ ಸುರಿಮಳೆ; ರಾಜಸ್ಥಾನಕ್ಕೆ ಬಿಗ್ ಶಾಕ್‌! 

ಕೊನೆಯ ಓವರ್‌ನಲ್ಲಿ ಶುಭಂ ದುಬೆ ಅವರು 2 ಸಿಕ್ಸ್ ಬಾರಿಸಿ RR ತಂಡಕ್ಕೆ ಭರವಸೆ ಮೂಡಿಸಿದರು. ಆದರೆ ಕೊನೆಯ 1 ಎಸೆತಕ್ಕೆ 3 ರನ್ ಬೇಕಾದಾಗ ರಾಜಸ್ಥಾನ ರಾಯಲ್ಸ್‌ ತಂಡ 1 ರನ್ ಅಂತರದಲ್ಲಿ ಸೋಲು ಕಂಡಿದೆ. ಪ್ಲೇ ಆಫ್‌ಗೆ ಹೋಗೋ ಉತ್ಸಾಹದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಈ ಗೆಲುವು ಬಹಳ ಮುಖ್ಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment