/newsfirstlive-kannada/media/post_attachments/wp-content/uploads/2024/07/Sandalwood-Director-Vinod.jpg)
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮೂರು ತಿಂಗಳ ಹಿಂದಷ್ಟೇ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಕಹಿ ಘಟನೆ ಮಾಸುವ ಮುನ್ನವೇ ಕಿರುತೆರೆಯ ಖ್ಯಾತ ನಿರ್ದೇಶಕ, ಸಿನಿಮಾ ನಿರ್ಮಾಪಕ ವಿನೋದ್ ದೋಂಡಳೆ ಅವರು ಅದೇ ರೀತಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಕೋಟಿ, ಕೋಟಿ ಸಾಲ ಮಾಡಿದ್ರಾ ಕರಿಮಣಿ ನಿರ್ದೇಶಕ; ವಿನೋದ್ ದೋಂಡಳೆ ಸಾವಿಗೆ ಅಸಲಿ ಕಾರಣವೇನು?
ಕಳೆದ ಏಪ್ರಿಲ್ 14 ಇದೇ ಸಮಯಕ್ಕೆ ಸ್ಯಾಂಡಲ್‌ವುಡ್ ಅಕ್ಷರಶಃ ಬೆಚ್ಚಿಬಿದ್ದಿತ್ತು. ಸರಿಯಾಗಿ ಮೂರು ತಿಂಗಳು ಕಳೆಯುವಷ್ಟರಲ್ಲೇ ಸ್ಯಾಂಡಲ್‌ವುಡ್, ಕನ್ನಡ ಕಿರುತೆರೆಯಲ್ಲಿ ಮತ್ತೊಂದು ಅಂತಹದೇ ಬ್ಯಾಡ್ ನ್ಯೂಸ್ ಬಂದಿದೆ. ಕೋಟಿ, ಕೋಟಿ ಸಾಲ, ಮಾನಸಿಕ ಒತ್ತಡ ತಾಳಲಾರದೇ ನಿರ್ಮಾಪಕ, ನಿರ್ದೇಶಕ ವಿನೋದ್ ದೋಂಡಳೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕರಿಮಣಿ ಸೀರಿಯಲ್ ನಿರ್ದೇಶಕ ವಿನೋದ್ ಅವರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಮನೆಯ ಮೇಲಿರೋ ಸಿಂಗಲ್ ರೂಂಗೆ ಹೋಗಿ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಟಿ.ಎನ್ ಸೀತಾರಾಮ್ ಸಂತಾಪ; ಹೇಳಿದ್ದೇನು?
ಕನ್ನಡದ ಹಲವು ಸೀರಿಯಲ್ ನಿರ್ದೇಶನದ ಜೊತೆಗೆ ವಿನೋದ್ ಅವರು ನಟ ನೀನಾಸಂ ಸತೀಶ್ ಅಭಿನಯದ ಅಶೋಕ ಬ್ಲೇಡ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ನಿರ್ದೇಶಕ ವಿನೋದ್ ದೋಂಡಳೆ ಅವರು ಸಿನಿಮಾ ಪ್ರೊಡಕ್ಷನ್‌ಗಾಗಿ ಸುಮಾರು ಎರಡು ಕೋಟಿಗೂ ಅಧಿಕ ಮೊತ್ತದ ಹಣ ಸಾಲ ಮಾಡಿಕೊಂಡಿದ್ದರಂತೆ. ಸಾಲಭಾದೆಗೆ ವಿನೋದ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ವಿನೋದ್ ದೋಂಡಳೆ ನಿವಾಸದಲ್ಲಿ ನೀರವ ಮೌನ ಆವರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ