ಬೆಂಗಳೂರು PES ಕಾಲೇಜಿನಲ್ಲಿ ಮತ್ತೊಂದು ದುರಂತ.. BE ವಿದ್ಯಾರ್ಥಿ ಆತ್ಮಹತ್ಯೆ? ಕಾರಣವೇನು?

author-image
admin
Updated On
ಬೆಂಗಳೂರು PES ಕಾಲೇಜಿನಲ್ಲಿ ಮತ್ತೊಂದು ದುರಂತ.. BE ವಿದ್ಯಾರ್ಥಿ ಆತ್ಮಹತ್ಯೆ? ಕಾರಣವೇನು?
Advertisment
  • PES ಕಾಲೇಜಿನ 6 ಅಂತಸ್ತಿನಿಂದ ಬಿದ್ದು BE ವಿದ್ಯಾರ್ಥಿ ಆತ್ಮಹತ್ಯೆ?
  • ಬಿ.ಇ 3ನೇ ಸೆಮಿಸ್ಟ್ರರ್‌ ವಿದ್ಯಾಭ್ಯಾಸ ಮಾಡುತ್ತಿದ್ದ ರಾಹುಲ್‌!
  • ಅವನು ಎಕ್ಸಾಂಗೆ ಯಾವತ್ತೂ ಲೇಟ್ ಆಗಿ ಹೋಗಿರ್ಲಿಲ್ಲ - ತಂದೆ ಕಣ್ಣೀರು

ಬೆಂಗಳೂರು: ಸಿಲಿಕಾನ್ ಸಿಟಿಯ PES ಕಾಲೇಜಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ PES ಯೂನಿವರ್ಸಿಟಿಯಲ್ಲಿ 21 ವರ್ಷದ ರಾಹುಲ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಕೋರಮಂಲಗದ ಸೇಂಟ್ ಜಾನ್ಸ್ ಆಸ್ಪತ್ರೆಗೆ ರಾಹುಲ್‌ ಮೃತದೇಹವನ್ನು ರವಾನೆ ಮಾಡಲಾಗಿದೆ. ಮಗನ ಸಾವಿನ ಸುದ್ದಿ ಕೇಳಿ ರಾಹುಲ್ ತಂದೆ ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ PES ಯೂನಿವರ್ಸಿಟಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಕಾಲೇಜಿನ 6 ಅಂತಸ್ತಿನಿಂದ ಬಿದ್ದು BE ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

21 ವರ್ಷದ ರಾಹುಲ್‌ ಬಿ.ಇ 3ನೇ ಸೆಮಿಸ್ಟ್ರರ್‌ ವಿದ್ಯಾಭ್ಯಾಸ ಮಾಡುತ್ತಿದ್ದ. ನಿನ್ನೆ ಪರೀಕ್ಷೆಯಿದ್ದ ಕಾರಣ ಕಾಲೇಜಿಗೆ ರಾಹುಲ್‌ ಬಂದಿದ್ದ. ಆದ್ರೆ ಕಾಲೇಜಿನ ಆರನೇ ಅಂತಸ್ತಿನ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:ಬೆಂಗಳೂರು: ವಿಪರೀತ ಶೋಕಿ.. ಸಾಲ ತೀರಿಸಲು ಮನೆ ಮಾಲಕಿಯನ್ನು ಕೊಂದಾಕೆ ಕೊನೆಗೂ ಅರೆಸ್ಟ್​ 

ಮಗನ ಸಾವಿನ ಸುದ್ದಿ ಕೇಳಿ ನಿನ್ನೆ ರಾತ್ರಿಯೇ ರಾಹುಲ್ ತಂದೆ ವಿದೇಶದಿಂದ ಬಂದಿದ್ದಾರೆ. ಮಗ ಓದಿನಲ್ಲಿ ಸದಾ ಮುಂದಿದ್ದ. ಕಾಲೇಜಿಗೆ ಟಾಪರ್ ಕೂಡ ಆಗಿದ್ದ. ಅವನು ಎಕ್ಸಾಂಗೆ ಯಾವತ್ತೂ ಲೇಟ್ ಆಗಿ ಹೋಗಿರ್ಲಿಲ್ಲ. ಆದ್ರೆ ಏನಾಯ್ತು ಅನ್ನೋದು ಗೊತ್ತಿಲ್ಲ. ನಾನು ವಿದೇಶದಲ್ಲಿರೋದು, ಡೈಲಿ ವಿಡಿಯೋ ಕಾಲ್ ಮಾಡ್ತಿದ್ದ ಎಂದು ಮಗನ ನೆನೆದು ತಂದೆ ಕಣ್ಣೀರು ಹಾಕಿದ್ದಾರೆ.

publive-image

ಕೆಲ ತಿಂಗಳ ಹಿಂದೆ ಹೊಸಕೆರೆಹಳ್ಳಿ ಬಳಿಯ ಪಿಇಎಸ್ ಕಾಲೇಜಿನಲ್ಲೂ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ‌ಮಾಡಿಕೊಂಡಿದ್ದ. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ವಿದ್ಯಾರ್ಥಿ ಪ್ರಾಣ ಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment