newsfirstkannada.com

ಬೇಸಿಗೆ ಮಳೆಗೆ ಬೆಚ್ಚಿ ಬಿದ್ದ ವಿಜಯಪುರ ಜಿಲ್ಲೆ.. ಸಿಡಿಲು ಬಡಿದು ಮತ್ತೋರ್ವ ಮಹಿಳೆ ಸಾವು!

Share :

Published April 12, 2024 at 9:20pm

Update April 12, 2024 at 9:22pm

    ಜಮೀನಿನಲ್ಲಿದ್ದ ವೇಳೆ ಸಿಡಿಲು ಬಡಿದು ಪ್ರಾಣ ಬಿಟ್ಟ ಭಾರತಿ ಕೆಂಗನಾಳ

    ವಿಜಯಪುರದ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ದಾರುಣ ಘಟನೆ

    ನಿನ್ನೆಯಷ್ಟೇ ಇಂಡಿ ತಾಲೂಕಿನಲ್ಲಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದರು‌‌

ವಿಜಯಪುರ: ಬಿಸಿಲಿನ ಬೇಗೆಗೆ ಬೆವೆತು ಹೋಗಿದ್ದ ವಿಜಯಪುರದ ಜನ ಮೊದಲ ಮಳೆಯ ಅಬ್ಬರಕ್ಕೆ ಬೆಚ್ಚಿ ಬಿದ್ದಿದ್ದಾರೆ. ವಿಜಯಪುರ ಜಿಲ್ಲೆಯಾದ್ಯಂತ ಸಿಡಿಲಿನ ಅಬ್ಬರಕ್ಕೆ ಎರಡೇ ದಿನದಲ್ಲಿ ಮೂವರು ಬಲಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿರುವ ಘಟನೆ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ನಡೆದಿದೆ. 40 ವರ್ಷದ ಭಾರತಿ ಕೆಂಗನಾಳ ಸಿಡಿಲಿಗೆ ಬಲಿಯಾದ ಮಹಿಳೆ. ಭಾರತಿ ಕೆಂಗನಾಳ ಜಮೀನಿನಲ್ಲಿದ್ದ ವೇಳೆ ಸಿಡಿಲು ಬಡಿದು ಪ್ರಾಣ ಬಿಟ್ಟಿದ್ದಾರೆ. ನಿನ್ನೆಯಷ್ಟೇ ಇಂಡಿ ತಾಲೂಕಿನಲ್ಲಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದರು‌‌. ಇಂದು ಮತ್ತೆ ಓರ್ವ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ಬಿಸಿಲಿಗೆ ಕೃಪೆ ತೋರಿ ಕಣ್ಣು ಮುಚ್ಚಿಸಿದ ಮಳೆರಾಯ.. ಸಿಡಿಲು ಬಡಿದು ಒಂದೇ ಜಿಲ್ಲೆಯಲ್ಲಿ ಇಬ್ಬರು ಸಾವು

ಜಿಲ್ಲೆಯಲ್ಲಿ ಮನುಷ್ಯರು ಸಿಡಿಲಿಗೆ ಬಲಿಯಾಗಿದ್ದರೆ ಮೇಕೆಗಳು ಕೂಡ ಸಾವನ್ನಪ್ಪಿವೆ. ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ದಂದರಗಿ ಗ್ರಾಮದಲ್ಲಿ ಸಿಡಿಲಿಗೆ ಮೂರು ಮೇಕೆಗಳು ಪ್ರಾಣ ಬಿಟ್ಟಿವೆ. ಕುಮಾರ್ ಗೊಳಸಂಗಿ ಎಂಬುವರಿಗೆ ಸೇರಿದ ಮೇಕೆಗಳು ಇದಾಗಿದ್ದು, ಜಮೀನಿನಲ್ಲಿ ಮರದ ಕೆಳಗೆ ಕಟ್ಟಿದ್ದ ವೇಳೆ ಸಿಡಿಲು ಬಡಿದಿದೆ. ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇಸಿಗೆ ಮಳೆಗೆ ಬೆಚ್ಚಿ ಬಿದ್ದ ವಿಜಯಪುರ ಜಿಲ್ಲೆ.. ಸಿಡಿಲು ಬಡಿದು ಮತ್ತೋರ್ವ ಮಹಿಳೆ ಸಾವು!

https://newsfirstlive.com/wp-content/uploads/2024/04/Vijayapura-Rain.jpg

Load More