/newsfirstlive-kannada/media/post_attachments/wp-content/uploads/2025/04/antarapata.jpg)
ಕನ್ನಡ ಕಿರುತೆರೆ ನಟಿ ಶರ್ಮಿಳಾ ಚಂದ್ರಶೇಖರ್ ಅವರಿಗೆ ಕಿಡಿಗೇಡಿಗಳಿಂದ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 35 ಬಾಲ್ಗೆ ಸೆಂಚುರಿ ಹೊಡೆದ ವೈಭವ್ ಯಾರು? 14 ವರ್ಷದ ಈ ಪೋರನಿಗಾಗಿ ದ್ರಾವಿಡ್ ಪಟ್ಟು ಹಿಡಿದಿದ್ದರು..
ಸೀತೆ, ಪತ್ತೇದಾರಿ ಪ್ರತಿಭಾ, ಅಂತರಪಟ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದುಕೊಂಡಿರೋ ನಟಿಗೆ ಬೆದರಿಕೆ ಮೆಸೇಜ್ ಬರುತ್ತಿವೆಯಂತೆ. ಈ ಬಗ್ಗೆ ಖುದ್ದು ನಟಿ ಶರ್ಮಿಳಾ ಚಂದ್ರಶೇಖರ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದಾರೆ.
View this post on Instagram
ಇತ್ತೀಚೆಗೆ ಆನ್‌ಲೈನ್ ಮೋಸ ಜಾಸ್ತಿ ಆಗಿದೆ. ವೇವ್‌ಕ್ಯಾಶ್ ಲೋನ್ ಆಪ್‌ನಿಂದ ನಿಮಗೆ ಸಾಲ ಮಂಜೂರು ಆಗಿದೆ, ನೀವು ಸಾಲ ತೀರಿಸಿಲ್ಲ ಅಂದ್ರೆ ನನ್ನ ಫೋಟೋವನ್ನು ಬಳಸಿಕೊಂಡು, ಅಶ್ಲೀಲವಾಗಿ ಎಡಿಟ್ ಮಾಡಿ, ಎಲ್ಲ ವಾಟ್ಸಪ್ ಬಳಕೆದಾರರಿಗೂ ಕಳಿಸ್ತೀವಿ ಅಂತ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಸೋಶಿಯಲ್ ಮೀಡಿಯಾದಲ್ಲಿ ಎಡಿಟ್ ಆಗಿರುವ ಅಶ್ಲೀಲ ನನ್ನ ಫೋಟೋಗಳು ಕಂಡರೆ ಅದು ನನ್ನ ನಿಜವಾದ ಫೋಟೋ ಆಗಿರೋದಿಲ್ಲ. ದಯವಿಟ್ಟು ನಿಮಗೂ ಕೂಡ ಈ ರೀತಿ ಮೆಸೇಜ್, ಕಾಲ್ ಬಂದರೆ ರಿಪೋರ್ಟ್ ಮಾಡಿ, ಮೋಸ ಹೋಗಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ