/newsfirstlive-kannada/media/post_attachments/wp-content/uploads/2025/06/Thanviya-Naik.jpg)
ಕನ್ನಡ ಕಿರುತೆರೆಯಲ್ಲಿ ಹಲವು ಹೊಸ ಹೊಸ ಧಾರಾವಾಹಿಗಳ ಬರುತ್ತಲೇ ಇರುತ್ತವೆ. ವೀಕ್ಷಕರು ಎಲ್ಲಾ ಧಾರಾವಾಹಿಗಳನ್ನ ಮನಸಾರೆ ಅಪ್ಪಿಕೊಳ್ಳುತ್ತ ಬಂದಿದ್ದಾರೆ.
ಆ ಲಿಸ್ಟ್​ನಲ್ಲಿ ವೀಕ್ಷಕರ ನೆಚ್ಚಿನ ಸೀರಿಯಲ್​ಗಳಲ್ಲಿ ಅಂತರಪಟ ಧಾರಾವಾಹಿ ಕೂಡ ಒಂದಾಗಿತ್ತು. ತಮ್ಮ ಅದ್ಭುತ ನಟನೆಯ ಮೂಲಕವೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ನಟಿ ತನ್ವಿಯಾ ಬಾಲರಾಜ್.
ಅಂತರಪಟ ಸೀರಿಯಲ್​ನಲ್ಲಿ ಆರಾಧನಾ ಪಾತ್ರದಲ್ಲಿ ನಟಿಸುತ್ತಿರುವ ತನ್ವಿಯಾ ಬಾಲರಾಜ್ ಸಖತ್​ ಖುಷಿಯಲ್ಲಿದ್ದಾರೆ. ಹೌದು, ಅಂತರಪಟ ಸೀರಿಯಲ್​ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿರೋ ತನ್ವಿಯಾ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ.
ಸದ್ಯ ಬರ್ತ್​ ಡೇ ಗ್ರ್ಯಾಂಡ್​ ಆಗಿ ಆಚರಿಸಿಕೊಂಡಿರೋ ಫೋಟೋಗಳನ್ನು ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಕಪ್ಪು ಬಣ್ಣದ ಗೌನ್​ನಲ್ಲಿ ಬ್ಯೂಟಿಫುಲ್​ ಆಗಿ ಕಾಣಿಸಿಕೊಂಡಿದ್ದಾರೆ.
ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಇನ್ನೂ, ನಟಿ ತನ್ವಿಯಾ ಈ ಹಿಂದೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ಸಫಾರಿ ಪಾರ್ಕ್​ಗೆ ಭೇಟಿ ಕೊಟ್ಟಿದ್ದರು.
View this post on Instagram
ಸಫಾರಿ ಪಾರ್ಕ್​ಗೆ ಭೇಟಿ ಕೊಟ್ಟ ನಟಿ ಗರುಡನನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದು, ತಮ್ಮ ​ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ