/newsfirstlive-kannada/media/post_attachments/wp-content/uploads/2023/09/anubandha.jpg)
ಕಲರ್ಸ್​​ ಕನ್ನಡದಲ್ಲಿ ಕಳೆದ ಮೂರು ದಿನಗಳಿಂದ ಪ್ರಸಾರವಾಗುತ್ತಿದ್ದ ಅನುಬಂಧ ಅವಾರ್ಡ್ಸ್​ಗೆ ಕೊನೆಗೂ ಹಬ್ಬದ ರೀತಿಯಲ್ಲಿ ಅಂತ್ಯ ಕಂಡಿದೆ. ಈ ಬಾರಿಯ ಅನುಬಂಧ ಅವಾರ್ಡ್ಸ್ 2023ರಲ್ಲಿ ಜನ ಮೆಚ್ಚಿದ ನಾಯಕಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ ನಟಿ ಮೌನಾ ಗುಡ್ಡೆಮನೆ. ಹೌದು ನಟಿ ಮೌನಾ ಗುಡ್ಡೆಮನೆ ರಾಮಾಚಾರಿ ಸೀರಿಯಲ್​ನಲ್ಲಿ ಚಾರು ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2023/09/anubandha-1.jpg)
ಇದನ್ನು ಓದಿ: ಪ್ರತಿಭಟನೆ ಹೆಸರಲ್ಲಿ ಬೆಂಗಳೂರು ಹೋಟೆಲ್‌ಗಳಿಗೆ ನುಗ್ಗಿ ದಾಂಧಲೆ; ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಹೀಗಾಗಿ ಕರುನಾಡೇ ಮೆಚ್ಚಿ ಕೊಟ್ಟ ಅವಾರ್ಡ್ ಇದಾಗಿದೆ. ಇದಲ್ಲದೆ ಸ್ವತಃ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರಿಂದ ಈ ಪ್ರಶಸ್ತಿ ಸಿಕ್ಕಿರೋದು ಇನ್ನೂ ವಿಶೇಷ. ಇನ್ನೂ ಅನುಬಂಧ 2023ರ ಜನ ಮೆಚ್ಚಿದ ನಾಯಕ ರಾಮಾಚಾರಿಯಿಂದ ನಟ ರುತ್ವಿಕ್ ಕೃಪಾಕರ್​ಗೆ ಸೇರ್ಪಡೆಯಾಗಿದೆ. ರಾಮಾಚಾರಿ ಸೀರಿಯಲ್​​ನಲ್ಲಿ ತಂದೆಗೆ ತಕ್ಕ ಮಗನ ಹಾಗೇ ತಮ್ಮ ಖಡಕ್​ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2023/09/anubandha-2.jpg)
ಇದೀಗ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರಿಂದ ಜನ ಮೆಚ್ಚಿದ ನಾಯಕ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ. ಇನ್ನೂ ಈ ಭಾರೀ ಜನ ಮೆಚ್ಚಿದ ಸಂಸಾರ ಕೂಡ ರಾಮಾಚಾರಿ ಧಾರಾವಾಹಿ ತಂಡಕ್ಕೆ ಒಲಿದು ಬಂದಿದೆ. ಈ ಪ್ರಶಸ್ತಿಯನ್ನ ಅಧಿಕೃತವಾಗಿ ಕಲರ್ಸ್ ವಾಹಿನಿಯ ಹಾಲಿ ಹೆಡ್ ಪ್ರಶಾಂತ್ ನಾಯಕ್.ಬಿ ಅವರು ವಿತರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us