ಚಳಿಗಾಲದಲ್ಲಿ ಮದ್ವೆಯಾಗಲು ಹೊರಟ ಅನುರಾಗ್​ ಕಶ್ಯಪ್​ ಮಗಳು! ವಿದೇಶಿ ಯುವಕನ ಜೊತೆ ಪಿಪಿ ಡುಂಡುಂ

author-image
AS Harshith
Updated On
ಚಳಿಗಾಲದಲ್ಲಿ ಮದ್ವೆಯಾಗಲು ಹೊರಟ ಅನುರಾಗ್​ ಕಶ್ಯಪ್​ ಮಗಳು! ವಿದೇಶಿ ಯುವಕನ ಜೊತೆ ಪಿಪಿ ಡುಂಡುಂ
Advertisment
  • ಅನುರಾಗ್​​ ಕಶ್ಯಪ್ ಮತ್ತು ಮಾಜಿ ಪತ್ನಿ ಆರ್ತಿ ಬಜಾಜ್ ಮಗಳು
  • ಆಲಿಯಾ ಪ್ರೀತಿಸುತ್ತಿರುವ ಯುವಕ ಏನು ಮಾಡುತ್ತಿದ್ದಾನೆ ಗೊತ್ತಾ?
  • ಚಳಿಗಾಲದಲ್ಲಿ ಮದುವೆಯಾಗಲು ಹೊರ ಅನುರಾಗ್​ ಕಶ್ಯಪ್​ ಮಗಳು!

ನಟ ಮತ್ತು ನಿರ್ದೇಶಕ ಅನುರಾಗ್​​ ಕಶ್ಯಪ್ ಮತ್ತು ಮಾಜಿ ಪತ್ನಿ ಆರ್ತಿ ಬಜಾಜ್​​ ಅವರ ಮಗಳು ಆಲಿಯಾ ಪ್ರೀತಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ವಿದೇಶಿ ಯುವಕನ ಜೊತೆಗೆ ಪ್ರೇಮಕ್ಕೆ ಬಿದ್ದಿರುವ ಸಂಗತಿಯನ್ನು ಆಕೆಯೇ ಹೇಳಿದ್ದಾಳೆ. ಮಾತ್ರವಲ್ಲದೆ ತಮ್ಮ ಸಂಬಂಧದ ಬಗ್ಗೆ ಹೇಳುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾಳೆ. ಆದರೀಗ ಸಿಹಿ ಸುದ್ದಿ ಏನೆಂದರೆ ಆಲಿಯಾ ವಿವಾಹವಾಗಲು ಮುಂದಾಗಿದ್ದಾಳೆ.

ಅನುರಾಗ್​ ಕಶ್ಯಪ್​ ಮಗಳು ಆಲಿಯಾ ಮತ್ತು ಶೇನ್​ ಗ್ರೆಗೊಯಿರ್​ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ವಿವಾಹವಾಗಲು ಬಯಸಿದ್ದಾರೆ. ಈ ಜೋಡಿ ಚಳಿಗಾಲದಲ್ಲಿ ಮದುವೆಯಾಗಲಿದ್ದಾರೆ. ಹೀಗಾಗಿ ಇಬ್ಬರ ಮದುವೆಗಾಗಿ ಭಾರೀ ಸಿದ್ಧತೆಯೂ ನಡೆಯುತ್ತಿದೆ.

ಇದನ್ನೂ ಓದಿ: ದುಬಾರಿ ಕಾರನ್ನು ಖರೀದಿಸಿದ ಗಿಚ್ಚಿ ಗಿಲಿಗಿಲಿ ಪ್ರಶಾಂತ್ ಗೌಡ; ಅದರ ಬೆಲೆ ಎಷ್ಟು ಗೊತ್ತಾ?

publive-image

ಆಲಿಯಾ ಮತ್ತು ಶೇನ್​ ಗ್ರೆಗೊಯಿರ್​​ ಡಿಸೆಂಬರ್​ 11ರಂದು ವಿವಾಹವಾಗುತ್ತಿದ್ದಾರೆ. ಮುಂಬೈನ ಮಹಾಲಕ್ಷ್ಮೀ ರೇಸ್​ ಕೋರ್ಸ್​​ನಲ್ಲಿರುವ ಬಾಂಬೆ ಕ್ಲಸ್​​ನಲ್ಲಿ ಇವರಿಬ್ಬರ ವಿವಾಹ ನಡೆಯಲಿಕ್ಕಿದೆ.

ಶೇನ್​ ಗ್ರೆಗೊಯಿರ್​ ಹಿನ್ನೆಲೆ ಏನು?

ಶೇನ್​ ಗ್ರೆಗೊಯಿರ್​ ರಾಕೆಟ್​​ ಪವರ್ಡ್​​​ ಸೌಂಡ್​ನ ಸಂಸ್ಥಾಪಕ. 23 ವರ್ಷದ ಈತ ಅಮೆರಿಕಾದ ಮೂಲದ ಉದ್ಯಮಿಯು ಹೌದು. ಆಲಿಯಾ ಮತ್ತು ಶೇನ್​ ನಡುವೆ ಇಂಡೋನೇಷ್ಯಾದ ಬಾಲಿಯಲ್ಲಿ ಪ್ರೀತಿ ಚಿಗುರೊಡೆಯಿತು. ಬಳಿಕ ಡೇಟಿಂಗ್​ ಮಾಡಲು ಪ್ರಾರಂಭಿಸುತ್ತಾರೆ. ಸದ್ಯ ಈ ಜೋಡಿ ವಿವಾಹವಾಗಲು ಬಯಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment