BBK11: ಬಿಗ್​ಬಾಸ್​ ಖ್ಯಾತಿಯ ಅನುಷಾ ರೈಗೆ ವಿದ್ಯಾರ್ಥಿಗಳಿಂದ ಭರಪೂರ ಸ್ವಾಗತ​; ಹೋಗಿದ್ದೆಲ್ಲಿಗೆ?

author-image
Veena Gangani
Updated On
BBK11: ಬಿಗ್​ಬಾಸ್​ ಖ್ಯಾತಿಯ ಅನುಷಾ ರೈಗೆ ವಿದ್ಯಾರ್ಥಿಗಳಿಂದ ಭರಪೂರ ಸ್ವಾಗತ​; ಹೋಗಿದ್ದೆಲ್ಲಿಗೆ?
Advertisment
  • 7ನೇ ವಾರಕ್ಕೆ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಟಿ
  • ಬಿಗ್​ಬಾಸ್​ ಮನೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಅನುಷಾ ರೈ
  • ಬಿಗ್​ಬಾಸ್ ಮೂಲಕವೇ ಫ್ಯಾನ್ಸ್​ಗಳನ್ನು ಸಂಪಾದಿಸಿಕೊಂಡ ಸ್ಪರ್ಧಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 55ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 14 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇನ್ನೂ ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಅನುಷಾ ರೈ ಅವರು ಆಚೆ ಬಂದಿದ್ದರು.

ಇದನ್ನೂ ಓದಿ: ಹೇರ್ ಡ್ರೈಯರ್ ಭಯಾನಕ ಸ್ಫೋಟಕ್ಕೆ ಸಿನಿಮಾವನ್ನು ಮೀರಿಸಿದ ಸಂಚು; ಹುಚ್ಚು ಪ್ರೇಮಿ ಮಾಡಿದ್ದೇನು?

publive-image

ಬಿಗ್​ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ಬೇಸರ ಹೊರ ಹಾಕಿದ್ದರು. ನನಗೆ ಇಷ್ಟು ಬೇಗ ಬಿಗ್​ಬಾಸ್​ ಮನೆಯಿಂದ ಆಚೆ ಬರೋದಕ್ಕೆ ಇಷ್ಟ ಇರಲಿಲ್ಲ. ಇನ್ನೂ ಸಾಕಷ್ಟು ಟಾಸ್ಕ್​ಗಳನ್ನು ಆಡಬೇಕಿತ್ತು ಅಂತ ಹೇಳಿ ಕಣ್ಣೀರು ಹಾಕಿದ್ದರು. ಆದರೆ ವೀಕ್ಷಕರಿಂದ ಕಡಿಮೆ ವೋಟ್​ ಬಂದ ಕಾರಣಕ್ಕೆ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದರು ಅನುಷಾ ರೈ.

publive-image

ಆದರೆ ಬಿಗ್​ಬಾಸ್​ ಮನೆಯಿಂದ ಆಚೆ ಬರುತ್ತಿದ್ದಂತೆ ನಟಿ ಅನುಷಾ ರೈಗೆ ಅಭಿಮಾನಿಗಳು ಗ್ರ್ಯಾಂಡ್​ ಆಗಿ ವೆಲ್​ಕಮ್​ ಮಾಡಿದ್ದಾರೆ. ಹೌದು, ಬಿಗ್​ಬಾಸ್​ನಿಂದ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದನೇ ಮಾಡಿಕೊಂಡಿದ್ದಾರೆ ಅನುಷಾ ರೈ. ದೊಡ್ಮನೆಯಲ್ಲಿದ್ದಾಗ ಎಷ್ಟು ಸ್ಟ್ರಾಂಗ್ ಆಗಿ ಆಡಿದ್ದರು ಎಂದು ಅಭಿಮಾನಿಗಳಿಗೆ ಗೊತ್ತಿದೆ.

ಇದನ್ನೂ ಓದಿ:ಫಸ್ಟ್ ಕ್ರಶ್​ಗಳು ಫೇಲ್​ ಆಗೋದು ಏಕೆ ? ದೀರ್ಘಾವಧಿವರೆಗೂ ಪ್ರೀತಿ ಸಾಗಿದರೂ ಮುರಿದು ಬೀಳುವುದೇಕೆ?

publive-image

ಇದೀಗ ನಟಿ ಅನುಷಾ ರೈ ಸಾಕಷ್ಟು ಜನರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ನಟಿ ಎಲ್ಲಿಗೆ ಹೋದರು ಜನರು ಹೆಚ್ಚಾಗಿ ಪ್ರೀತಿ ತೋರಿಸಿತ್ತಿದ್ದಾರೆ. ಈಗ ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ನಟಿ ಸಿದ್ದಗಂಗಾ ಮಠದ ಪರಮ ಪೂಜ್ಯ ಶ್ರೀ ಶಿಲ್ಪಿ ಸಿದ್ದನ್ತಿ ಸಿದ್ದಲಿಂಗ ಸ್ವಾಮಿ ಗುರೂಜಿಯವರ ಆಶೀರ್ವಾದ ಪಡೆದು ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯವರು ಏರ್ಪಡಿಸಿದ ಸ್ಪಂದನ ಹಬ್ಬದಲ್ಲಿದಲ್ಲಿ ಭಾಗಿಯಾಗಿದ್ದಾರೆ.

publive-image

ಇನ್ನು ಆ ವಿಡಿಯೋದ ಜೊತೆಗೆ ನಟಿ ಸಿದ್ದಗಂಗಾ ಮಠದ ಪರಮ ಪೂಜ್ಯ ಶ್ರೀ ಶಿಲ್ಪಿ ಸಿದ್ದನ್ತಿ ಸಿದ್ದಲಿಂಗ ಸ್ವಾಮಿ ಗುರೂಜಿಯವರ ಆಶೀರ್ವಾದ ಪಡೆದು ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯವರು ಏರ್ಪಡಿಸಿದ ಸ್ಪಂದನ ಹಬ್ಬದಲ್ಲಿ ಆಹ್ವಾನದ ಮೇರೆಗೆ ವಿದ್ಯಾರ್ಥಿಗಳೊಂದಿಗೆ ಸಮಯವನ್ನು ಕಳೆದ ಸಂದರ್ಭ ಬಹಳ ಸಂತೋಷಕರವಾಗಿತ್ತು ಮತ್ತು ನನಗೆ ಗೌರವವನ್ನು ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೂ ಮತ್ತು ಕಾಲೇಜು ಮಂಡಳಿಗೂ ನಾನು ಹೃದಯತುಂಬಿದ ಧನ್ಯವಾದಗಳು ತಿಳಿಸುತ್ತೇನೆ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment