/newsfirstlive-kannada/media/post_attachments/wp-content/uploads/2025/05/ANUSHKA-2-1.jpg)
ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಯ ಪ್ರೀತಿಯ ಪತ್ನಿ, ಬಾಲಿವುಡ್ ನಟಿ. ಕೊಹ್ಲಿ ಇರುವ ಯಾವುದೇ ಕ್ರಿಕೆಟ್ ಮ್ಯಾಚ್ ನಡೆದಾಗಲೂ ಅನುಷ್ಕಾ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಳ್ತಾರೆ.
ನೀವು ಗಮನಿಸಿರಬಹುದು ಅನುಷ್ಕಾ ಶರ್ಮಾ ಪಕ್ಕದಲ್ಲಿ ಓರ್ವ ಮಹಿಳೆ ಕೂತಿರುತ್ತಾರೆ. ಯಾರು ಅವರು ಅಂತಾ ಎಂದಾದರೂ ಯೋಚಿಸಿದ್ದೀರಾ? ಮೇ 27 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್ ನಡುವೆ ಮ್ಯಾಚ್ ನಡೆಯಿತು. LSG ನಾಯಕ ಪಂತ್ ಶತಕ ಬಾರಿಸಿ ತಮ್ಮದೇ ಶೈಲಿಯಲ್ಲಿ ಲಾಗಾಪಲ್ಟಿ ಹೊಡೆದು ಸಂಭ್ರಮಿಸಿದರು.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಸೋಲಿಗೆ ಮೂರು ಮುಖ್ಯ ಕಾರಣಗಳು.. ಇನ್ನೂ ಇದೆ ಒಂದು ಅವಕಾಶ
ಪಂತ್ ಸಂಭ್ರಮ ಬೆನ್ನಲ್ಲೇ ಈ ಮಹಿಳೆ ಹೆಚ್ಚು ಬೆಳಕಿಗೆ ಬಂದರು. ಪಂತ್ ಅವರನ್ನು ಇವರು ಮೂರ್ಖ ಎಂದು ಕರೆದಿದ್ದಾರೆ ಎಂದು ವರದಿಗಳು ಆಗಿದ್ದವು. ಅಲ್ಲಿಂದ ಇವರ ಬಗ್ಗೆ ಹೆಚ್ಚು ಹುಡುಕಾಟ ನಡೆದಿದೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ, ಅನುಷ್ಕಾ ಶರ್ಮಾ ಪಕ್ಕದಲ್ಲಿ ಕೂತಿರುವ ಮಹಿಳೆಯ ಹೆಸರು ಮಾಳವಿಕಾ ನಾಯಕ್.
ಈ ಮಹಿಳೆ ಯಾರು?
ಮಾಳವಿಕಾ ನಾಯಕ್, ವ್ಯಾಪಾರ ಕ್ಷೇತ್ರದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಜೊತೆಗೆ ಅಷ್ಟೇ ಅನುಭವ ಕೂಡ ಪಡೆದುಕೊಂಡಿದ್ದಾರೆ. ಐಟಿ ವಲಯದ ಪ್ರಸಿದ್ಧ ಕಂಪನಿಯಾದ ಇಂಟೆಲಿನೆಟ್‌ನೊಂದಿಗೆ (Intellinet) ಕೆಲಸ ಮಾಡಿದ್ದಾರೆ. ನಂತರ ಅವರು ಇನ್ನೋಸ್ ಟೆಕ್ನಾಲಜಿಯಲ್ಲೂ (innos technologies) ಕೆಲಸ ಮಾಡಿದ ಅನುಭವ ಇದೆ. ಬ್ಯುಸಿನೆಸ್ ಡೆವೆಲಪ್ಮೆಂಟ್, ಸೇಲ್ಸ್, ಪಾರ್ಟ್ನರ್ಶಿಪ್ ಅಂಡ್ ಮಾರ್ಕೆಟಿಂಗ್ ಬ್ಯುಸಿನೆಸ್ನಲ್ಲಿ ಗಣನೀಯ ಅನುಭವ ಪಡೆದುಕೊಂಡಿದ್ದಾರೆ. ದೊಡ್ಡ ದೊಡ್ಡ ಸಂಸ್ಥೆಗಳೊಂದಿಗೆ ಕೆಲಸ ಮಾಡಿರುವ ಮಾಳವಿಕಾ ನಾಯಕ್, ಉತ್ಪನ್ನ ಅಭಿವೃದ್ಧಿಯಲ್ಲೂ ಅನುಭವ ಹೊಂದಿದ್ದಾರೆ. ಎಂಬಿಎ ಓದಿದ್ದಾರೆ.
ಇದನ್ನೂ ಓದಿ: ಮುಖದಲ್ಲಿ ನಗು, ಕಣ್ಣಲ್ಲಿ ನೀರು.. ಅನುಷ್ಕಾ ಶರ್ಮಾ ರಿಯಾಕ್ಷನ್ಗೆ ಕೊಹ್ಲಿ ಹೇಳಿದ್ದೇನು..?
ಲೀಗ್ ಹಂತದಲ್ಲಿ ಅದ್ಭುತ ಆಟವನ್ನಾಡಿದ್ದ ಆರ್ಸಿಬಿ, ಕ್ವಾಲಿಫೈಯರ್ ಮ್ಯಾಚ್ನಲ್ಲೂ ಗೆಲುವು ಮುಂದುವರಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ಸೋಲಿಸುವ ಮೂಲಕ ಫೈನಲ್ ಪ್ರವೇಶ ಮಾಡಿದೆ. ಜೂನ್ 3 ರಂದು ಐಪಿಎಲ್ ಟ್ರೋಫಿಗಾಗಿ ಆರ್ಸಿಬಿ ಅಂತಿಮ ಹೋರಾಟ ನಡೆಸಲಿದೆ.
ಇದನ್ನೂ ಓದಿ: ಬದುಕಿದ ಕಂದಮ್ಮ.. ಮಂಗಳೂರಲ್ಲಿ ಮನೆಯ ಅವಶೇಷಗಳಡಿ ಸಿಲುಕಿದ್ದ 1 ವರ್ಷದ ಮಗು ರಕ್ಷಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ