newsfirstkannada.com

ಅನುಷ್ಕಾ ಶರ್ಮಾಗೆ ಕಾಡ್ತಿದ್ಯಾ ಗಂಭೀರ ಅನಾರೋಗ್ಯ? ವದಂತಿ ಸುಳ್ಳಾಗಲಿ ಎಂದು ಪ್ರಾರ್ಥಿಸಿದ ಅಭಿಮಾನಿಗಳು

Share :

Published February 14, 2024 at 10:55am

    ಪತ್ನಿ ಪ್ರೆಗ್ನೆಂಟ್ ಅಲ್ಲ, 2ನೇ ಮಗುವಿನ ಸುದ್ದಿಯು ಸುಳ್ಳಾ?

    ವಿದೇಶದಲ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಟ್ರೀಟ್​ಮೆಂಟ್​​​​..?

    ನುರಿತ ವೈದ್ಯರನ್ನ ಸಂಪರ್ಕಿಸಿದ್ದಾರಾ ವಿರುಷ್ಕಾ ದಂಪತಿ?

ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಗೆ ಅಲಭ್ಯರಾಗಿದ್ದೇಕೆ? ಕ್ರಿಕೆಟ್ ಪ್ರೇಮಿಗಳನ್ನು ಕಾಡ್ತಿರೋ ಮಿಲಿಯನ್ ಡಾಲರ್ ಪ್ರಶ್ನೆಯಿದು. ಈವರೆಗೂ ಇದು ಸ್ಪಷ್ಟ ಉತ್ತರವಿಲ್ಲದೇ ಸಸ್ಪೆನ್ಸ್ ಆಗಿ ಉಳಿದಿದೆ. ಈ ವಿಚಾರದಲ್ಲಿ ಉಹಾಪೋಹಗಳು ಜೋರಾಗಿವೆ. ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಎಲ್ಲರಿಗೂ ಶಾಕ್​ ಕೊಟ್ಟಿದೆ.

ಸೂಪರ್ ಸ್ಟಾರ್ ವಿರಾಟ್​​​​ ಕೊಹ್ಲಿ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಎರಡು ಟೆಸ್ಟ್​​ ಪಂದ್ಯಗಳನ್ನು ಆಡಿದ್ದಾಗಿದೆ. ಉಳಿದ ಮೂರು ಟೆಸ್ಟ್​​ಗಳನ್ನ ಆಡುವುದಿಲ್ಲ ಎಂದು ಕೊಹ್ಲಿ ಬಿಸಿಸಿಐಗೆ ಹೇಳಿದ್ದಾಗಿದೆ. ಬಾಸ್​ಗಳು ಒಪ್ಪಿಗೆ ಕೊಟ್ಟಿದ್ದಾರೆ. ಕೊಹ್ಲಿ ಯಾಕಾಗಿ ತಂಡ ತೊರೆದಿದ್ದಾರೆ ಅನ್ನೋದು ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ. ಅಸಲಿ ರೀಸನ್ ಯಾರೊಬ್ಬರಿಗೂ ಗೊತ್ತಿಲ್ಲ. ಇಲ್ಲಿ ತನಕ ಗುಟ್ಟಾಗಿ ಉಳಿದಿದೆ.

ಆರಂಭದಲ್ಲಿ ತಾಯಿ ಅನಾರೋಗ್ಯದ ಹಿನ್ನಲೆ ಕೊಹ್ಲಿ ಇಂಗ್ಲೆಂಡ್​​ ಸರಣಿಗೆ ಅಲಭ್ಯರಾಗಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಕೊಹ್ಲಿ ಸಹೋದರ ವಿಕಾಸ್​​ ನಮ್ಮ ತಾಯಿ ಆರೋಗ್ಯವಾಗಿದ್ದಾರೆ ಎನ್ನುವ ಮೂಲಕ ಗಾಸಿಪ್​​ಗೆ ಪುಲ್​ಸ್ಟಾಪ್ ಹಾಕಿದ್ರು. ಬಳಿಕ ಕೊಹ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಸರಣಿಗೆ ಚಕ್ಕರ್​ ಹಾಕಿದ್ದಾರೆ ಎಂಬ ಮಾತು ಕೇಳಿ ಬಂತು. ಕೊನೆಗೆ ಈ ಸುದ್ದಿ ಕೂಡ ಸುಳ್ಳಾಯ್ತು.

ಸ್ವತಃ ಕೊಹ್ಲಿ ಬೆಸ್ಟ್​ ಫ್ರೆಂಡ್​​​ ಎಬಿ ಡಿವಿಲಿಯರ್ಸ್​ ವಿರಾಟ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿಲ್ಲ. ನಾನು ತಪ್ಪಾಗಿ ಹೇಳಿದೆ ಎನ್ನುವ ಮೂಲಕ ಎಲ್ಲದಕ್ಕೂ ಫುಲ್​ಸ್ಟಾಪ್ ಹಾಕಿದ್ದಾರೆ. ಹಾಗಾದ್ರೆ ಕಿಂಗ್ ಕೊಹ್ಲಿ ಇಂಗ್ಲೆಂಡ್​​ ಸರಣಿ ತಪ್ಪಿಸಿಕೊಳ್ಳಲು ಅಸಲಿ ಕಾರಣವೇನು? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇದೀಗ ಮತ್ತೊಂದು ಉತ್ತರ ಸಿಕ್ಕಿದೆ.

ಪತ್ನಿ ಪ್ರೆಗ್ನೆಂಟ್ ಅಲ್ಲ, ತಾಯಿ ಅನಾರೋಗ್ಯ ಸುದ್ದಿಯೂ ಸುಳ್ಳು
ವಿರಾಟ್ ಫ್ಯಾನ್ಸ್​ಗೆ ಇದು ಕೇಳೋಕೆ ಸ್ವಲ್ಪ ಬೇಸರ ಅನ್ನಿಸಿದ್ರೂ ಈ ತೆರನಾದ ಸುದ್ದಿ ಇದೀಗ ಹೊರಬಿದ್ದಿದೆ. ವಿರಾಟ್​ ಕೊಹ್ಲಿಯ ಮಡದಿ ಅನುಷ್ಕಾ ಶರ್ಮಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿಯೇ ವಿರಾಟ್​ ಇಂಗ್ಲೆಂಡ್ ಸರಣಿಗೆ ಗುಡ್​​ಬೈ ಹೇಳಿ, ಪತ್ನಿಯೊಂದಿಗೆ ಇದ್ದಾರೆ ಎಂಬ ಸುದ್ದಿ ಸದ್ಯ ಬಿರುಗಾಳಿಯಂತೆ ಹಬ್ಬಿದೆ. ಅನುಷ್ಕಾ ಯಾವ ತರಹದ ಆರೋಗ್ಯ ಬಳಲುತ್ತಿದ್ದಾರೆ ಎಂಬುದು ಮಾತ್ರ ತಿಳಿದು ಬಂದಿಲ್ಲ.

ವಿದೇಶದಲ್ಲಿ ಅನುಷ್ಕಾ ಶರ್ಮಾಗೆ ಟ್ರೀಟ್​ಮೆಂಟ್​​​​..?
ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗ್ತಿದ್ದು, ಅನುಷ್ಕಾ ಶರ್ಮಾ ಜೊತೆ ವಿರಾಟ್​ ಕೊಹ್ಲಿ ವಿದೇಶದಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಅಲ್ಲಿಯೇ ನುರಿತ ವೈದ್ಯರನ್ನ ಸಂಪರ್ಕಿಸಿದ್ದು, ಪತ್ನಿಗೆ ಚಿಕಿತ್ಸೆ ನೀಡಲಾಗ್ತಿದೆ. ವಿರಾಟ್​​​ ಕೊಹ್ಲಿ ಜೊತೆಗಿದ್ದು ಎಲ್ಲವನ್ನೂ ನೋಡಿಕೊಳ್ತಿದ್ದಾರೆ ಎನ್ನಲಾಗ್ತಿದೆ. ಆದ್ರೆ ಸಮಸ್ಯೆ ಮಾತ್ರ ನಿಗೂಢವಾಗಿದೆ.

ಈ ಹಿಂದೆಯೂ ಕೊಹ್ಲಿ ಕ್ರಿಕೆಟ್​ನಿಂದ ಬ್ರೇಕ್​ ಪಡೆದು ಫ್ಯಾಮಿಲಿಗೆ ಸಮಯ ಮೀಸಲಿಟ್ಟಿದ್ರು. ಅಟ್ಲೀಸ್ಟ್​​ ಸೋಷಿಯಲ್​ ಮೀಡಿಯಾದಲ್ಲಾದ್ರೂ ಆ್ಯಕ್ಟೀವ್​ ಇದ್ರು. ಏನಿಲ್ಲಾ ಅಂದ್ರೂ ಕಮರ್ಷಿಯಲ್​ ಪೋಸ್ಟ್​ಗಳನ್ನಾದ್ರೂ ಪೋಸ್ಟ್​ ಮಾಡ್ತಿದ್ರು. ಆದ್ರೀಗ, ಕೊಹ್ಲಿ ಎಲ್ಲದರಿಂದಲೂ ದೂರ ಸರಿದಿದ್ದಾರೆ. ಇದ್ರ ನಡುವೆ ಇದೀಗ ಪತ್ನಿಗೆ ಅನಾರೋಗ್ಯ ಅನ್ನೋ ಸುದ್ದಿ ಹಬ್ಬಿದೆ. ಇದು ವಿರಾಟ್ ಅಭಿಮಾನಿ ಬಳಗದಲ್ಲಿ ಆತಂಕ ಮೂಡಿಸಿದೆ.

ಕೊಹ್ಲಿ ಬ್ರೇಕ್​ ತೆಗೆದುಕೊಂಡಾಗಿನಿಂದ ಒಂದಲ್ಲ. ಒಂದು ಉಹಾಪೋಹಗಳು ಹರಿದಾಡ್ತಿವೆ. ಇದೀಗ ಪತ್ನಿ ಅನಾರೋಗ್ಯ ಸುದ್ದಿ ಹೊಸದಾಗಿ ವರದಿಯಾಗಿದೆ. ಈ ಸುದ್ದಿ ಸುಳ್ಳಾಗಲಿ ಅನ್ನೋದು ಫ್ಯಾನ್ಸ್​ ಆಶಯ. ಒಂದು ವೇಳೆ ನಿಜವೇ ಆಗಿದ್ರೂ, ಅನುಷ್ಕಾ ಬೇಗನೆ ಚೇತರಿಸಿಕೊಳ್ಳಲಿ. ಕೊಹ್ಲಿ ಆದಷ್ಟು ಬೇಗ ಮೈದಾನಕ್ಕೆ ಮರಳಲಿ ಅನ್ನೋದು ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅನುಷ್ಕಾ ಶರ್ಮಾಗೆ ಕಾಡ್ತಿದ್ಯಾ ಗಂಭೀರ ಅನಾರೋಗ್ಯ? ವದಂತಿ ಸುಳ್ಳಾಗಲಿ ಎಂದು ಪ್ರಾರ್ಥಿಸಿದ ಅಭಿಮಾನಿಗಳು

https://newsfirstlive.com/wp-content/uploads/2024/02/ANUSKA-SHARMA-1.jpg

Load More