/newsfirstlive-kannada/media/post_attachments/wp-content/uploads/2023/11/Kohli-Anushka.jpg)
ಇತ್ತೀಚೆಗೆ ವೆಸ್ಟ್ ಇಂಡೀಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗೆದ್ದು 2024ರ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆದ ಭಾರತ ತಂಡ ತವರಿಗೆ ಬಂದಿಳಿದಿದೆ. ಟೀಮ್ ಇಂಡಿಯಾ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ರು.
ಇದಾದ ಬಳಿಕ ವಿಮಾನ ನಿಲ್ದಾಣದಿಂದ ಬಸ್ ಹತ್ತಿದ ಟೀಮ್ ಇಂಡಿಯಾ ಆಟಗಾರರು ಐಟಿಸಿ ಹೊಟೇಲ್ ಮೌರ್ಯ ತಲುಪಿದ್ರು. ಹೊಟೇಲ್ ತಲುಪಿದ ಇಡೀ ಭಾರತ ತಂಡಕ್ಕೆ ಅದ್ದೂರಿ ಸ್ವಾಗತ ಸಿಕ್ಕಿತ್ತು. ಬಸ್ನಿಂದ ಇಳಿಯುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸಿದರು.
ಕುಟುಂಬದೊಂದಿಗೆ ಕೊಹ್ಲಿ ವಿಜಯೋತ್ಸವ!
ಇನ್ನು, ತವರಿಗೆ ಬರುತ್ತಿದ್ದಂತೆಯೇ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೋಟೆಲ್ನಲ್ಲಿ ತಮ್ಮ ಕುಟುಂಬಸ್ಥರನ್ನು ಭೇಟಿಯಾದ್ರು. ಹೋಟೆಲ್ ಐಟಿಸಿ ಮೌರ್ಯದಲ್ಲೇ ಕುಟುಂಬದೊಂದಿಗೆ ಟಿ20 ವಿಶ್ವಕಪ್ 2024ರ ವಿಜಯೋತ್ಸವ ಆಚರಿಸಿದರು.
Virat Kohli's family with his Winning T20 World Cup Medal. ❤️ pic.twitter.com/KgUNBAhGus
— Tanuj Singh (@ImTanujSingh)
Virat Kohli's family with his Winning T20 World Cup Medal. ❤️ pic.twitter.com/KgUNBAhGus
— Tanuj (@ImTanujSingh) July 4, 2024
">July 4, 2024
ಕೊಹ್ಲಿ ಮೂಲತಃ ದೆಹಲಿಯವರು. ಹೋಟೆಲ್ನಲ್ಲಿ ಕೊಹ್ಲಿ ಅವರನ್ನು ಸಹೋದರಿ ಭಾವನಾ ಮತ್ತು ಸಹೋದರ ವಿಕಾಸ್ ಭೇಟಿಯಾಗಿ ಸಂತಸ ಹಂಚಿಕೊಂಡರು. ಈ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಅನುಷ್ಕಾ ಶರ್ಮಾ ಅವರು ಮುಂಬೈನಲ್ಲಿದ್ದು, ಕೊಹ್ಲಿ ಅವರನ್ನು ಇನ್ನೂ ಭೇಟಿಯಾಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ವಿಶ್ವಕಪ್ ಚಾಂಪಿಯನ್ ಟೀಂ ಇಂಡಿಯಾಗೆ ಪ್ರಧಾನಿ ಮೋದಿ ವಿಶೇಷ ಗೌರವ; ವಿಡಿಯೋ ವೈರಲ್!