ಮುಖದಲ್ಲಿ ನಗು, ಕಣ್ಣಲ್ಲಿ ನೀರು.. ಅನುಷ್ಕಾ ಶರ್ಮಾ ರಿಯಾಕ್ಷನ್​​ಗೆ ಕೊಹ್ಲಿ ಹೇಳಿದ್ದೇನು..?

author-image
Ganesh
Updated On
ಮುಖದಲ್ಲಿ ನಗು, ಕಣ್ಣಲ್ಲಿ ನೀರು.. ಅನುಷ್ಕಾ ಶರ್ಮಾ ರಿಯಾಕ್ಷನ್​​ಗೆ ಕೊಹ್ಲಿ ಹೇಳಿದ್ದೇನು..?
Advertisment
  • ಕ್ವಾಲಿಫೈಯರ್​ ಮ್ಯಾಚ್ ಗೆದ್ದು ಆರ್​ಸಿಬಿ ಫೈನಲ್​​ಗೆ
  • 9 ವರ್ಷಗಳ ನಂತರ ಫೈನಲ್ ಪ್ರವೇಶಿಸಿದ RCB
  • ಫೈನಲ್ ತಲುಪಲು ಪಂಜಾಬ್​ಗೆ ಇನ್ನೊಂದು ಅವಕಾಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ ತಲುಪಿದೆ. 2016ರ ನಂತರ ಆರ್‌ಸಿಬಿ ಫೈನಲ್ ಆಡುತ್ತಿರುವುದು ಇದೇ ಮೊದಲು.

ಎಂದಿನಂತೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನಿನ್ನೆಯ ಪಂದ್ಯ ವೀಕ್ಷಿಸಲು ಬಂದಿದ್ದರು. ರಜತ್ ಪಾಟೀದಾರ್​, ಸಿಕ್ಸರ್ ಬಾರಿಸಿ ಆರ್​ಸಿಬಿಯನ್ನು ಗೆಲ್ಲಿಸುತ್ತಿದ್ದಂತೆಯೇ ಅನುಷ್ಕಾ ಶರ್ಮಾ ಅವರ ಪ್ರತಿಕ್ರಿಯೆ ವೈರಲ್ ಆಗಿದೆ. ಆರ್‌ಸಿಬಿ ಗೆದ್ದಾಗ ಅನುಷ್ಕಾ ಶರ್ಮಾ ಸಂತೋಷಕ್ಕೆ ಪಾರವೇ ಇರಲಿಲ್ಲ.

ಇದನ್ನೂ ಓದಿ: ಆರ್​ಸಿಬಿಯ ಒಂದೊಂದು ಅಸ್ತ್ರವೂ ಬೆಂಕಿಯ ಚೆಂಡು.. ಕಪ್​​ ಗೆಲ್ಲಲು ಇನ್ನೊಂದೇ ಹೆಜ್ಜೆ..!

https://twitter.com/KillerCool13/status/1928139548191519044

ಅವರ ಕಣ್ಣುಗಳಲ್ಲಿ ಆನಂದಬಾಷ್ಪ ತುಂಬಿತ್ತು. ಇದೇ ವೇಳೆ ಕೊಹ್ಲಿ ಪ್ರತಿಕ್ರಿಯೆ ಕೂಡ ವೈರಲ್ ಆಗುತ್ತಿದೆ. ಆರ್​ಸಿಬಿ ಇತಿಹಾಸ ಸೃಷ್ಟಿಸಲು ಇನ್ನೊಂದೇ ಹೆಜ್ಜೆ ಇದೆ ಎಂದು ಬೆರಳು ತೋರಿಸುತ್ತಿರೋ ವಿಡಿಯೋ ಅದಾಗಿದೆ. ಕೊಹ್ಲಿಯ ರಿಯಾಕ್ಷನ್ ಗಮನಿಸಿದ ಅನುಷ್ಕಾ, ಮತ್ತಷ್ಟು ಖುಷಿಪಟ್ಟು ಚಪ್ಪಾಳೆ ತಟ್ಟಿದ್ದಾರೆ.

ಇತಿಹಾಸ ನಿರ್ಮಿಸಿದ ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಬಾರಿಗೆ 2016ರಲ್ಲಿ ಫೈನಲ್ ತಲುಪಿತ್ತು. 9 ವರ್ಷಗಳ ನಂತರ ರಜತ್ ಪಾಟೀದಾರ್ ನಾಯಕತ್ವದಲ್ಲಿ ಆರ್‌ಸಿಬಿ ಮತ್ತೆ ಫೈನಲ್ ತಲುಪಿದೆ. ಈ ಸೋಲು ಪಂಜಾಬ್ ಕಿಂಗ್ಸ್ ತಂಡಕ್ಕೆ ನಿರಾಶಾದಾಯಕವಾಗಿದೆ. ಅವರಿಗೆ ಫೈನಲ್ ತಲುಪಲು ಇನ್ನೊಂದು ಅವಕಾಶ ಇದೆ.

ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಸೋಲಿಗೆ ಮೂರು ಮುಖ್ಯ ಕಾರಣಗಳು.. ಇನ್ನೂ ಇದೆ ಒಂದು ಅವಕಾಶ

https://twitter.com/shekhardas22262/status/1928137912496902598

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment