29ನೇ ವಯಸ್ಸಿನಲ್ಲೇ ವಿರಾಟ್​ ಕೊಹ್ಲಿನ ಮದುವೆ ಆಗಿದ್ದು ಏಕೆ.. ಕಾರಣ ಹೇಳಿದ ಪತ್ನಿ ಅನುಷ್ಕಾ ಶರ್ಮಾ!

author-image
Bheemappa
Updated On
ಲೀಡ್ಸ್​​ಗೆ ಹೋದ್ರೆ ಕೊಹ್ಲಿ ದಂಪತಿ ಈ ರೆಸ್ಟೋರೆಂಟ್​ಗೆ ವಿಸಿಟ್​ ಮಾಡೇ ಮಾಡ್ತಾರೆ.. ಕಾರಣವೇನು?
Advertisment
  • ವೃತ್ತಿಜೀವನದ ಉತ್ತುಂಗದಲ್ಲಿದ್ದರೂ ವಿರಾಟ್​ ಜೊತೆ ಮದುವೆ
  • ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿವಾಹ ಆಗಿದ್ದು ಯಾವಾಗ.?
  • ನಟಿ ಅನುಷ್ಕಾ ಶರ್ಮಾಗೆ ವಿರಾಟ್ ಪರಿಚಯ ಆಗಿದ್ದು ಹೇಗೆ?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್​ ಕೊನೆಗೂ 18ನೇ ಸೀಸನ್​​ನಲ್ಲಿ ಐಪಿಎಲ್ ಟ್ರೋಫಿ ಗೆದ್ದು ಸಂತಸದಲ್ಲಿದ್ದಾರೆ. ಟಿ20 ಹಾಗೂ ಟೆಸ್ಟ್​ ಕ್ರಿಕೆಟ್​​ನಿಂದ ದೂರ ಉಳಿದಿರುವ ಸ್ಟಾರ್​ ಕ್ರಿಕೆಟರ್​ ಸದ್ಯ ಕುಟುಂಬದ ಜೊತೆ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ಇದರ ನಡುವೆ ನಾನು 29ನೇ ವರ್ಷದಲ್ಲಿ ವಿರಾಟ್​ ಕೊಹ್ಲಿನ ಮದುವೆ ಆಗಿದ್ದು ಏಕೆ ಎಂದು ಪತ್ನಿ ಅನುಷ್ಕಾ ಶರ್ಮಾ ರಿವೀಲ್ ಮಾಡಿದ್ದಾರೆ.

ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿನ ಮದುವೆ ಆಗುವುದಕ್ಕೂ ಮೊದಲು ಬಾಲಿವುಡ್​ನಲ್ಲಿ ಟಾಪ್ ಹೀರೋಯಿನ್ ಆಗಿದ್ದರು. ದೊಡ್ಡ ಮಟ್ಟದ ಕರಿಯರ್​ ಇತ್ತು. ಅನುಷ್ಕಾ ಶರ್ಮಾ ನಟಿಸಿದ ಸಿನಿಮಾಗಳು ಬಿಗ್​ ಬಿಗ್​ ಹಿಟ್​ ಕಾಣುತ್ತಿದ್ದವು. ಇದೇ ಸಮಯದಲ್ಲಿ ಸ್ಟಾರ್​ ಕ್ರಿಕೆಟರ್ ವಿರಾಟ್ ಕೊಹ್ಲಿ ಪರಿಚಯ ಆಗುತ್ತೆ. ಬಾಲಿವುಡ್ ಸಿನಿಮಾಗಳಲ್ಲಿ ಒಳ್ಳೆಯ ಆಫರ್​ಗಳು ಬರುತ್ತಿದ್ದರೂ ಅನುಷ್ಕಾ ಶರ್ಮಾ, ಕೊಹ್ಲಿ ಜೊತೆ ಸಪ್ತಪದಿ ತುಳಿಯುತ್ತಾರೆ.

publive-image

ಈ ಬಗ್ಗೆ ಮಾತನಾಡಿರುವ ಅನುಷ್ಕಾ ಶರ್ಮಾ, ನಾನು ಸಿನಿಮಾಗಳಲ್ಲಿ ಒಳ್ಳೆಯ ಸ್ಥಾನದಲ್ಲಿ ಇರುವಾಗಲೇ ವಿರಾಟ್​ ಕೊಹ್ಲಿನ ವಿವಾಹ ಆಗಿದ್ದೇನೆ. ಬಾಲಿವುಡ್​ ನಟಿಯರು ಈ ಹಂತದಲ್ಲೇ ತಮ್ಮ ಕರಿಯರ್​ ಅನ್ನು ಇನ್ನಷ್ಟು ಚೆನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ನಾನು 29ನೇ ವಯಸ್ಸಿಗೆ ಮದುವೆ ಆಗಿರುವುದಕ್ಕೆ ಕಾರಣ ಪ್ರೀತಿ. ವೃತ್ತಿಜೀವನದ ಉತ್ತುಂಗದಲ್ಲಿದ್ದರೂ ಪ್ರೀತಿಗಾಗಿ ಬೇಗ ಮದುವೆಯಾದೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದೇಶದ ಸೆಲೆಬ್ರಿಟಿ ಕಪಲ್ಸ್​ಗಳಲ್ಲಿ ಈ ಜೋಡಿಯೂ ಒಂದು. 2017ರಲ್ಲಿ ಇಟಲಿಯಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯಾಗಿದ್ದರು. ಸದ್ಯ ಈ ಸ್ಟಾರ್​ ಜೋಡಿಗೆ ಈಗ ವಮಿಕಾ ಹಾಗೂ ಅಕಾಯ್ ಎನ್ನುವ ಎರಡು ಮಕ್ಕಳಿ ಇದ್ದಾರೆ. ಇದುವರೆಗೂ ಈ ಮಕ್ಕಳ ಮುಖವನ್ನು ಎಲ್ಲಿಯೂ ರವೀಲ್ ಮಾಡಿಲ್ಲ. ಇದು ಈಗಿರುವಾಗಲೇ ಇದಕ್ಕೂ ಮೊದಲು ಅಂದರೆ ಕೊಹ್ಲಿ, ಅನುಷ್ಕಾ ಮದುವೆಗೂ ಮೊದಲು ಪರಿಚಯ ಆಗಿರುವುದು ಎಲ್ಲಿ?.

ಇದನ್ನೂ ಓದಿ: ಯಂಗ್​ ಕ್ರಿಕೆಟರ್​ ಶ್ರೇಯಸ್​ ಅಯ್ಯರ್ 2 ಮಕ್ಕಳ ತಂದೆ..? ನನ್ನ ಗಂಡ ಎಂದ ಬ್ಯೂಟಿ ನಟಿ!

publive-image

ಅನುಷ್ಕಾ ಶರ್ಮಾ ಬಾಲಿವುಡ್ ನಟಿಯಾಗಿದ್ದರಿಂದ ಜಾಹೀರಾತು ಒಂದರ ಶೂಟಿಂಗ್​ಗೆ ಹೋಗಿರುತ್ತಾರೆ. ಇದೇ ಜಾಹೀರಾತು ಶೂಟ್​ಗೆ ಕೊಹ್ಲಿ ಕೂಡ ಬಂದಿರುತ್ತಾರೆ. ಇಲ್ಲೇ ಇಬ್ಬರಿಗೂ ಪರಿಚಯವಾಗಿ ಮುಂದೆ ಪ್ರೀತಿಯಲ್ಲಿ ಬೀಳುತ್ತಾರೆ. ಈ ಇಬ್ಬರ ನಡುವಿನ ಲವ್, ಓಡಾಟ, ಸುತ್ತಾಟ ಎಲ್ಲ ಆಗಾಗ ಮಾಧ್ಯಮಗಳಲ್ಲಿ ಸಖತ್​ ಪ್ರಚಾರ ಪಡೆಯುತ್ತಿದ್ದವು. ಈ ಎಲ್ಲದರ ಬೆನ್ನಲ್ಲೇ ಸ್ಟಾರ್ ಜೋಡಿ ಮದುವೆಯಾಗಿ ಎಲ್ಲದಕ್ಕೂ ಬ್ರೇಕ್ ಹಾಕುತ್ತಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment