/newsfirstlive-kannada/media/post_attachments/wp-content/uploads/2024/12/Anvar-Mannippadi.jpg)
ಮಂಗಳೂರು: ರಾಜ್ಯಾದ್ಯಂತ ಸದ್ದು ಮಾಡಿರುವ ವಕ್ಫ್ ಆಸ್ತಿ ಕಬಳಿಕೆಯ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ವಕ್ಫ್ ಆಸ್ತಿ ಕಬಳಿಕೆಯಲ್ಲಿ ಕಾಂಗ್ರೆಸ್‌ನ ಖ್ಯಾತ ನಾಮರು ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆರೋಪದ ಜೊತೆಗೆ ಕಾಂಗ್ರೆಸ್ ಪಕ್ಷದ ಅತಿರಥ ನಾಯಕರ ಹೆಸರನ್ನು ಬಹಿರಂಗ ಪಡಿಸಿದ್ದಾರೆ.
ನ್ಯೂಸ್ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಮಾಣಿಪ್ಪಾಡಿ ಅವರು ವರದಿಯ ಎಕ್ಸ್‌ಕ್ಲೂಸಿವ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವಕ್ಫ್​ ಆಸ್ತಿ ಕಬಳಿಕೆಯಲ್ಲಿ ಕಾಂಗ್ರೆಸ್​ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಧರ್ಮ ಸಿಂಗ್, ಜಾಫರ್ ಶರೀಫ್, ತನ್ವೀರ್ ಸೇಠ್, ಸಿ.ಎಂ ಇಬ್ರಾಹಿಂ, ಎನ್.ಎ ಹ್ಯಾರಿಸ್ ಸೇರಿದಂತೆ ಹಲವರಿಂದ ಕಬಳಿಕೆ ಆಗಿದೆ ಅಂತಾ ವರದಿಯಲ್ಲಿ ಉಲ್ಲೇಖವಾಗಿದೆ ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2024/12/Anvar-Mannipadi.jpg)
ಮಾಣಿಪ್ಪಾಡಿ ವರದಿ ಸೀಕ್ರೆಟ್​!
1. ಖಮರೂಲ್ ಇಸ್ಲಾಂ 200 ಎಕರೆಯಷ್ಟು ವಕ್ಫ್​​ ಭೂಮಿ ಕಬಳಿಕೆ ಆರೋಪ
2. ಎನ್​.ಎ ಹ್ಯಾರೀಸ್ ಏರ್​ಪೋರ್ಟ್ ರಸ್ತೆಯಲ್ಲಿ 24 ಎಕರೆ ಭೂಮಿ ಕಬಳಿಕೆ
3. ಜಾಫರ್ ಶರೀಫ್ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜು ವಕ್ಫ್​ ಭೂಮಿ
4. ನರಸಿಂಹರಾವ್ ಸೂರ್ಯವಂಶಿ ಬೀದರ್​ನಲ್ಲಿ ಎಕರೆ ಗಟ್ಟಲೆ ವಕ್ಫ್ ಭೂಮಿ ಕಬಳಿಕೆ
5. ಮಲ್ಲಿಕಾರ್ಜುನ್ ಖರ್ಗೆ ಎಕರೆ ಗಟ್ಟಲೆ ವಕ್ಫ್ ಭೂಮಿ ಕಬಳಿಕೆ ಆರೋಪ
6. ಧರ್ಮ ಸಿಂಗ್ ಎಕರೆ ಗಟ್ಟಲೆ ವಕ್ಫ್ ಭೂಮಿ ಕಬಳಿಕೆ ಆರೋಪ
7. ಸಿ.ಎಂ ಇಬ್ರಾಹಿಂ ವಕ್ಫ್ ಸಚಿವರಾಗಿದ್ದಾಗ ವ್ಯವಸ್ಥಿತವಾಗಿ ಭೂ ಕಬಳಿಕೆ
8. ತನ್ವೀರ್ ಸೇಠ್ ತನ್ವೀರ್ ಕುಟುಂಬ ಮೈಸೂರಲ್ಲಿ ವಕ್ಪ್ ಭೂಮಿ ಕಬಳಿಕೆ
ಇದನ್ನೂ ಓದಿ: ಶಿವಣ್ಣನ ತಬ್ಬಿಕೊಂಡು ಭಾವುಕರಾದ ಕಿಚ್ಚ ಸುದೀಪ್.. ದಿಗ್ಗಜರ ಸಮಾಗಮ; ಫೋಟೋಗಳು ಇಲ್ಲಿವೆ!
ಬೆಂಗಳೂರಿನಲ್ಲಿರುವ ಜಾಫರ್ ಶರೀಫ್ ಅವರ ಎಂಜಿನಿಯರಿಂಗ್ ಕಾಲೇಜು ವಕ್ಫ್ ಭೂಮಿಯಲ್ಲಿದೆ. ಖಮರೂಲ್ ಇಸ್ಲಾಂ, ಮಲ್ಲಿಕಾರ್ಜುನ್ ಖರ್ಗೆ, ಧರ್ಮ ಸಿಂಗ್ ಅವರು ಎಕರೆ ಗಟ್ಟಲೆ ವಕ್ಫ್ ಭೂಮಿಯನ್ನು ಕಬಳಿಸಿದ್ದಾರೆ. ಎಲ್ಲಾ ಬೇನಾಮಿ ಹೆಸರಲ್ಲಿದೆ. ತನ್ವೀರ್ ಸೇಠ್ ಕುಟುಂಬ ಮೈಸೂರಿನಲ್ಲಿ ತಲತಲಾಂತರವಾಗಿ ವಕ್ಫ್ ಭೂಮಿ ಕಬಳಿಸಿದೆ. ರೆಹಮಾನ್ ಖಾನ್ ಇವರೆಲ್ಲರಿಗೂ ಗುರು ಇದ್ದ ಹಾಗೆ. ಇದು ದೇಶದ ಅತಿ ದೊಡ್ಡ ಭೂಹಗರಣ ಆಗಿದ್ದು ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಅನ್ವರ್ ಮಾಣಿಪ್ಪಾಡಿ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us