/newsfirstlive-kannada/media/post_attachments/wp-content/uploads/2025/07/Apache_Chopper_new.jpg)
ಭಾರತಕ್ಕೆ ಕೊನೆಗೂ ಅಮೆರಿಕಾದ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳು ಬಂದಿವೆ. ಕಳೆದ ಒಂದು ವರ್ಷದಿಂದ ಬೇರೆ ಬೇರೆ ಕಾರಣಗಳಿಂದ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳ ಡೆಲಿವರಿ ವಿಳಂಬವಾಗಿತ್ತು. ಇಂದು ಬೆಳಗ್ಗೆ ಭಾರತದ ಗಾಜಿಯಾಬಾದ್ನಲ್ಲಿರುವ ಹಿಂಡನ್ ಏರ್ಬೇಸ್ಗೆ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಸ್ ಮೊದಲ ಬ್ಯಾಚ್ ಬಂದಿಳಿದಿವೆ. ಅಮೆರಿಕಾ ಮೊದಲ ಬ್ಯಾಚ್ನಲ್ಲಿ 3 ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಸ್ ಭಾರತಕ್ಕೆ ರವಾನೆ ಮಾಡಿದೆ. ಅಮೆರಿಕಾದ ಸರಕು ಸಾಗಣೆ ವಿಮಾನದಲ್ಲಿ ಮೂರು ಹೆಲಿಕಾಪ್ಟರ್ಗಳು ಹಿಂಡನ್ ಏರ್ಬೇಸ್ಗೆ ಬಂದಿವೆ.
ಹೊಸದಾಗಿ ಭಾರತಕ್ಕೆ ಬಂದಿರುವ ಈ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳನ್ನು ಹಿಂಡನ್ ಏರ್ ಬೇಸ್ ನಲ್ಲೇ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುತ್ತೆ. ಆದಾದ ಬಳಿಕ ಭಾರತದ ಸೇನೆಯ ಏವಿಯೇಷನ್ ಕಾರ್ಪ್ಸ್ಗೆ ಹಸ್ತಾಂತರ ಮಾಡಲಾಗುತ್ತೆ. ಬಳಿಕ ಈ ಹೆಲಿಕಾಪ್ಟರ್ ರಾಜಸ್ಥಾನದ ಜೋಧಪುರದ ಏರ್ ಬೇಸ್‌ನಲ್ಲಿ ಹಾರಾಟ ನಡೆಸಲಿವೆ. ಪಾಕಿಸ್ತಾನದ ಗಡಿಯಲ್ಲಿ ಹದ್ದಿನ ಕಣ್ಣು ಇಡಲು ಈ ಹೆಲಿಕಾಪ್ಟರ್ಸ್ ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿರುವ ಜೋಧಪುರ ಏರ್ ಬೇಸ್ಗೆ ನಿಯೋಜನೆ ಮಾಡಲಾಗುತ್ತೆ.
ಹೆಲಿಕಾಪ್ಟರ್ ಖರೀದಿಗೆ 600 ಮಿಲಿಯನ್ ಡಾಲರ್
ಇದೊಂದು ಮೈಲಿಗಲ್ಲಿನ ಕ್ಷಣ, ಸ್ಟೇಟ್ ಆಫ್ ಆರ್ಟ್ ಸೌಲಭ್ಯ ಹೊಂದಿರುವ ಈ ಹೆಲಿಕಾಪ್ಟರ್ ಗಳಿಂದಾಗಿ ಭಾರತದ ಮಿಲಿಟರಿಯ ಶಕ್ತಿ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಇಂಡಿಯನ್ ಆರ್ಮಿ ಟ್ವೀಟ್ ಮಾಡಿದೆ. ಭಾರತದ ಮಿಲಿಟರಿಯಲ್ಲಿ ಏವಿಯೇಷನ್ ಕಾರ್ಪ್ಸ್ ಅನ್ನು 2024ರ ಮಾರ್ಚ್ ನಲ್ಲಿ ಜೋಧಪುರದಲ್ಲಿ ಸ್ಥಾಪಿಸಲಾಗಿದೆ. ಆಗಿನಿಂದಲೂ ಏವಿಯೇಷನ್ ಕಾರ್ಪ್ಸ್ ಈ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳಿಗಾಗಿ ಕಾಯುತ್ತಿತ್ತು.
ಪ್ರಾರಂಭದಲ್ಲಿ 2024ರ ಜೂನ್ ತಿಂಗಳಲ್ಲಿ ಈ ಅಪಾಚೆ ಹೆಲಿಕಾಪ್ಟರ್ ಡೆಲಿವರಿ ನೀಡಬೇಕೆಂದು ಸಮಯ ನಿಗದಿಪಡಿಸಲಾಗಿತ್ತು. ಬಳಿಕ 2024ರ ಡಿಸೆಂಬರ್ಗೆ ಸಮಯ ಮುಂದೂಡಿಕೆಯಾಯಿತು. 2020 ರಲ್ಲಿ ಭಾರತವು ಅಮೆರಿಕಾದಿಂದ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ ಖರೀದಿಗೆ 600 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. 2 ಬ್ಯಾಚ್ಗಳಲ್ಲಿ ತಲಾ ಮೂರರಂತೆ 6 ಹೆಲಿಕಾಪ್ಟರ್ ಪೂರೈಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗ ಮೊದಲ ಬ್ಯಾಚ್ನಲ್ಲಿ 3 ಹೆಲಿಕಾಪ್ಟರ್ ಪೂರೈಸಲಾಗಿದೆ. ಇಂಡಿಯನ್ ಏವಿಯೇಷನ್ ಕಾರ್ಪ್ಸ್ನ ಪೈಲಟ್ಗಳ ಈ ಅಪಾಚೆ ಹೆಲಿಕಾಪ್ಟರ್ ಹಾರಾಟದ ಟ್ರೇನಿಂಗ್ ಅನ್ನು ಕಳೆದ ವರ್ಷ ಪಡೆದಿದ್ದಾರೆ. ಅಪಾಚೆ ಹೆಲಿಕಾಪ್ಟರ್ಗಳು ದೇಶದ ಪಶ್ಚಿಮದ ಗಡಿಯಲ್ಲಿ ಮಹತ್ವದ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾವೆ. ಈ ಅಪಾಚೆ ಹೆಲಿಕಾಪ್ಟರ್ಗಳು ಅಡ್ವಾನ್ಸ್ ಟಾರ್ಗೆಟ್ ಸಿಸ್ಟಮ್ ಹೊಂದಿವೆ. ಹೆಚ್ಚಿನ ಶಕ್ತಿ, ಸಾಮರ್ಥ್ಯವನ್ನು ಹೊಂದಿವೆ. ಈಗ ಭಾರತದ ಭೂಸೇನೆಗೆ ಅಪಾಚೆ ಹೆಲಿಕಾಪ್ಟರ್ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.
ಆದರೇ, ಭಾರತದ ವಾಯುಪಡೆ ಬಳಿ ಈಗಾಗಲೇ 22 ಅಪಾಚೆ ಹೆಲಿಕಾಪ್ಟರ್ಗಳಿವೆ. ವಾಯುಪಡೆಗೆ ಅಪಾಚೆ ಹೆಲಿಕಾಪ್ಟರ್ ಖರೀದಿಗೆ 2015 ರಲ್ಲೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಪಾಕಿಸ್ತಾನದ ಗಡಿಯಲ್ಲಿ ಅಪರೇಷನ್ ಸಿಂಧೂರ್ನಂಥ ಕಾರ್ಯಾಚರಣೆ ವೇಳೆ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಸೇನೆಗೆ ಏರೀಯನ್ ಬೆಂಬಲ ನೀಡುತ್ತವೆ. ಆರ್ಮಿಯ ಅಪರೇಷನಲ್ ಟೀಮ್‌ಗೂ ಸಪೋರ್ಟ್ ಸಿಗುತ್ತೆ.
ಇದನ್ನೂ ಓದಿ:ಅಂಗನವಾಡಿಗೆ ಹೋಗಿದ್ದ ಅಣ್ಣನ ಮಗನ ಜೀವ ತೆಗೆದ ತಮ್ಮ.. 3 ವರ್ಷದ ಕಂದನ ಮುಗಿಸಿದ ಚಿಕ್ಕಪ್ಪ
ಈ ಹೆಲಿಕಾಪ್ಟರ್ಸ್ ಅನ್ನು ಬೋಯಿಂಗ್ ಕಂಪನಿ ನಿರ್ಮಿಸಿದೆ
ಜೋಧಪುರದ ಏವಿಯೇಷನ್ ಕಾರ್ಪ್ಸ್ನಲ್ಲಿ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳ ಒಂದು ಸ್ಕ್ವಾಡ್ರನ್ ನಿರ್ಮಾಣ ಮಾಡುವ ಉದ್ದೇಶ ಇದೆ. ಒಂದು ಸ್ಕ್ವಾಡ್ರನ್ ನಲ್ಲಿ 18 ಯುದ್ಧ ವಿಮಾನ ಇಲ್ಲವೇ ಹೆಲಿಕಾಪ್ಟರ್ ಗಳು ಇರುತ್ತವೆ. ಈ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳನ್ನು ಬೋಯಿಂಗ್ ಕಂಪನಿಯು ನಿರ್ಮಿಸಿದೆ. ಭಾರತದ ಬಳಿ ಸ್ವದೇಶಿ ನಿರ್ಮಿತ ಧ್ರುವ ರುದ್ರ, ಪ್ರಚಂಡ ಹೆಲಿಕಾಪ್ಟರ್ಗಳಿವೆ. ಇವುಗಳ ಜೊತೆಗೆ ಈಗ ಅಮೆರಿಕಾದ ಬೋಯಿಂಗ್ ನಿರ್ಮಿತ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳು ಸೇನೆಯ ಬತ್ತಳಿಕೆ ಸೇರಿವೆ.
ಭಾರತೀಯ ವಾಯುಪಡೆಯ ಅಪಾಚೆ ಹೆಲಿಕಾಪ್ಟರ್ಸ್ ಎರಡು ಸ್ಕ್ವಾಡ್ರನ್ಗಳನ್ನು ಪಠಾಣಕೋಟ್ ಮತ್ತು ಜೋರಹಟ್ನಲ್ಲಿ ಹೊಂದಿದೆ. ಪಠಾಣಕೋಟ್ಏರ್ ಬೇಸ್ ಮೂಲಕ ಉತ್ತರ ವಲಯ ಹಾಗೂ ಜೋರಹಟ್ ಏರ್ ಬೇಸ್ ಮೂಲಕ ಪಶ್ಚಿಮದ ವಲಯದ ಚೀನಾದ ಕಡಗೆ ಅಪಾಚೆ ಹೆಲಿಕಾಪ್ಟರ್ಸ್ ಹದ್ದಿನ ಕಣ್ಣು ಇಟ್ಟಿವೆ. ಅಪಾಚೆ ಹೆಲಿಕಾಪ್ಟರ್ ಅಲ್ಲಿ 30 ಎಂಎಂ ಎಂ230 ಚೈನ್ಗನ್ ಇದೆ. 70 ಎಂಎಂ ಹೈಡ್ರಾ ರಾಕೆಟ್ ವ್ಯವಸ್ಥೆ ಇದೆ. ಎಜಿಎಂ-114 ಹಿಲ್ ಫೈರ್ ಮಿಸೈಲ್ಗಳು ಭೂಮಿಯ ಮೇಲಿರುವ ಶಸ್ತ್ರಾಸ್ತ್ರ ವಾಹನ, ಯುದ್ಧ ಟ್ಯಾಂಕ್ಗಳನ್ನು 6 ಕಿ.ಮೀ. ದೂರದಿಂದಲೇ ನಾಶಪಡಿಸುವ ಸಾಮರ್ಥ್ಯ ಹೊಂದಿವೆ. ಈ ಅಪಾಚೆ ಹೆಲಿಕಾಪ್ಟರ್ ಮಿಲಿಮೀಟರ್ ವೇವ್ ರಾಡಾರ್, ಭೂಮಿಯ ಮೇಲಿನ 128 ಟಾರ್ಗೆಟ್ ಗಳನ್ನು ಟ್ರ್ಯಾಕ್ ಮಾಡುತ್ತೆ. ಆದ್ಯತೆ ಮೇಲೆ 16 ಅನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದೆ. ರಾಡಾರ್ ನಲ್ಲಿ ಅಡ್ವಾನ್ಸ್ ಸೆನ್ಸರ್, ಹೆಲ್ಮೆಟ್ ಮೌಂಟೇಡ್ ಡಿಸಪ್ಲೇ, ನೈಟ್ ವಿಸನ್ ಸಿಸ್ಟಮ್ ನಿಂದ ರಾತ್ರಿಯ ವೇಳೆಯೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಪಾಕಿಸ್ತಾನದ ಗಡಿಯಲ್ಲಿ ಪಾಕ್ ಸೇನೆಗೆ ಭಾರಿ ಭಯ ಸೃಷ್ಟಿಯಾಗಲಿದೆ.
ಟೆರರ್ ಕ್ಯಾಂಪ್ಗಳನ್ನು ಟಾರ್ಗೆಟ್ ಮಾಡಬಹುದು
ಎಎಚ್-64ಇ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಸ್ ಡ್ರೋನ್ಗಳಿಂದ ಲೈವ್ ಸೆನ್ಸಾರ್ ಫೀಡ್ಸ್ ಅನ್ನು ಪಡೆಯಲಿವೆ. ಇದರಿಂದಾಗಿ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಸ್ ಲೈವ್ ಮಾಹಿತಿಯೂ ಸಿಗಲಿದೆ. ಈ ಹಿಂದೆ ಭಾರತದ ವಾಯುಪಡೆ, ಮಿಲಿಟರಿ ಹೆಲಿಕಾಪ್ಟರ್ ಪೈಲಟ್ಗಳಿಗೆ ಈ ಮಾಹಿತಿ ಸಿಗುತ್ತಿರಲಿಲ್ಲ. ಇದರಿಂದಾಗಿ ಅಪಾಯವನ್ನು ಬೇಗನೇ ಪತ್ತೆ ಹಚ್ಚಿ, ಸಮನ್ವಯದಿಂದ ದಾಳಿ ನಡೆಸುವ ಹೆಚ್ಚಾಗುತ್ತೆ. ರಿಯಲ್ ಟೈಮ್ನಲ್ಲಿ ಟಾರ್ಗೆಟ್ ಡಾಟಾದ ಮಾಹಿತಿ ಕಮ್ಯಾಂಡರ್ಗಳ ಜೊತೆ ಹಂಚಿಕೊಳ್ಳಬಹುದು.
ಪಾಕಿಸ್ತಾನದ ಗಡಿಯಲ್ಲಿ ಅಪಾಚೆ ಹೆಲಿಕಾಪ್ಟರ್ಸ್ ನಿಯೋಜನೆ ಮಾಡುವುದರಿಂದ ಪರಿಸ್ಥಿತಿಯೇ ಭಾರಿ ಬದಲಾಗುತ್ತೆ. ವೈರಿಗಳ ಶಸ್ತ್ರಾಸ್ತ್ರ, ರಾಡಾರ್ ಪೋಸ್ಟ್, ಟೆರರ್ ಕ್ಯಾಂಪ್ಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವ ಸಾಮರ್ಥ್ಯ ಭಾರತಕ್ಕೆ ಇರುತ್ತೆ. ಸದ್ಯಕ್ಕೆ ಭಾರತವು 6 ಅಪಾಚೆ ಹೆಲಿಕಾಪ್ಟರ್ಸ್ ಪೂರೈಸಲು ಆರ್ಡರ್ ನೀಡಿದೆ. ಆದರೇ, ಒಂದು ಸ್ಕ್ವಾಡ್ರನ್ ನಿರ್ಮಾಣಕ್ಕೆ ಬೇಕಾದ 18 ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಸ್ ಮುಂದಿನ ದಿನಗಳಲ್ಲಿ ಭಾರತವು ಖರೀದಿಸಲಿದೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ