Advertisment

ಅಪ್ಪಟ ಕನ್ನಡದ ಪ್ರತಿಭೆ.. ಕನ್ನಡಿಗರ ಹೃದಯ ತುಂಬಿದ್ದ ಭಾಷಾ ಪ್ರೇಮಿ ಅಪರ್ಣಾ ನಿಧನ; ಆಗಿದ್ದೇನು?

author-image
admin
Updated On
ಅಪರ್ಣಾ ‘ಮಜಾ ಟಾಕೀಸ್‌’ ಜರ್ನಿ ಶುರುವಾಗಿದ್ದು ಹೇಗೆ? ಕನ್ನಡಿಗರ ಮನಗೆದ್ದ ವರಲಕ್ಷ್ಮೀ ಇನ್ನು ನೆನಪು ಮಾತ್ರ
Advertisment
  • ಕನ್ನಡದ ಯಾವುದೇ ಕಾರ್ಯಕ್ರಮ ಆದರೂ ಥಟ್ ಅಂತ ನೆನಪಾಗುತ್ತಿದ್ದರು
  • ಅಪ್ಪಟ ಕನ್ನಡದ ಪ್ರತಿಭೆ, ಕನ್ನಡ ಭಾಷೆಯ ಅಪ್ಪಟ ಪ್ರೇಮಿ ಅಪರ್ಣಾ
  • ಇಂದು ರಾತ್ರಿ 9.15 ಸುಮಾರಿಗೆ ನಿಧನರಾಗಿದ ನಿರೂಪಕಿ ಅಪರ್ಣಾ

ಕನ್ನಡದ, ಕರ್ನಾಟಕ ಸರ್ಕಾರದ ಯಾವುದೇ ಕಾರ್ಯಕ್ರಮ ಆದರೂ ಥಟ್ ಅಂತ ನೆನಪಾಗುತ್ತಾ ಇದಿದ್ದು ನಿರೂಪಕಿ ಅಪರ್ಣಾ. ಅಪ್ಪಟ ಕನ್ನಡದ ಪ್ರತಿಭೆ, ಕನ್ನಡ ಭಾಷೆಯಲ್ಲೇ ಜೀವಿಸಿ, ಪ್ರೀತಿಸುತ್ತಿದ್ದ ಅಪರ್ಣಾ ಅವರು ಇನ್ನಿಲ್ಲ.

Advertisment

ಇದನ್ನೂ ಓದಿ: BIG BREAKING: ಖ್ಯಾತ ಕನ್ನಡದ ನಿರೂಪಕಿ ಅಪರ್ಣಾ ಇನ್ನಿಲ್ಲ 

ಖ್ಯಾತ ಕನ್ನಡದ ನಿರೂಪಕಿ ಅಪರ್ಣಾ ಅವರು ಇಂದು ರಾತ್ರಿ 9.15 ಸುಮಾರಿಗೆ ನಿಧನರಾಗಿದ್ದಾರೆ. ಅಪರ್ಣಾ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ ಅವರಿಗೆ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಅಪರ್ಣಾ ಅವರ ನಿವಾಸದತ್ತ ಚಿತ್ರರಂಗದ ಹಲವಾರು ಗಣ್ಯರು ಆಗಮಿಸುತ್ತಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅಪರ್ಣಾ ಅವರ ನಿಧನದ ಸುದ್ದಿಯನ್ನು ಸಹ ನಟ ರವಿಶಂಕರ್​​ಗೌಡ ಅವರು ಖಚಿತಪಡಿಸಿದ್ದಾರೆ.

publive-image

ಯಾರು ಈ ಅಪರ್ಣಾ?
ಅಪರ್ಣಾ 1989ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದ್ರು. ಇವರು 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್​ ಅವರ ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದವರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದರು.

90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದರು ಅಪರ್ಣಾ. ನಂತರ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 1998ರಲ್ಲೇ ದೀಪಾವಳಿ ಕಾರ್ಯಕ್ರಮದಲ್ಲಿ 8 ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.

Advertisment

ಇದನ್ನೂ ಓದಿ: ಘೋರ ದುರಂತ.. ಆಟವಾಡುತ್ತಿದ್ದಾಗ ವಿಸಿ ನಾಲೆಗೆ ಬಿದ್ದ 4 ವರ್ಷದ ಮಗು; ತೀವ್ರ ಹುಡುಕಾಟ 

ಅಪರ್ಣಾ ಅವರು ಮೂಡಲ ಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ರು. 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment