Advertisment

ನಿಮ್ಮ ನೆನಪು ನನ್ನ ಕೊನೆಯ ಉಸಿರಿನವರೆಗೂ ಶಾಶ್ವತ.. ಅಕ್ಕ ಅಪರ್ಣಾರನ್ನು ಕಳೆದುಕೊಂಡು ಶ್ವೇತಾ ಚೆಂಗಪ್ಪ ಭಾವುಕ

author-image
AS Harshith
Updated On
ನಿಮ್ಮ ನೆನಪು ನನ್ನ ಕೊನೆಯ ಉಸಿರಿನವರೆಗೂ ಶಾಶ್ವತ.. ಅಕ್ಕ ಅಪರ್ಣಾರನ್ನು ಕಳೆದುಕೊಂಡು ಶ್ವೇತಾ ಚೆಂಗಪ್ಪ ಭಾವುಕ
Advertisment
  • ನಿಮ್ಮನ್ನ ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಕರೆದಿಲ್ಲ
  • ತುಂಬಾ ಬೇಗ ಹೊರಟ್ ಬಿಟ್ರಿ.. ಹೋಗಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ
  • ಅಪರ್ಣಾ ಅವರ ಜೊತೆಗಿನ ನೆನಪನ್ನು ಮೆಲುಕು ಹಾಕಿದ ಶ್ವೇತಾ ಚೆಂಗಪ್ಪ

ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ಕೋಲ್ಮಿಂಚು ಮೂಡಿಸಿದ್ದ ನಟಿ, ಖ್ಯಾತ ನಿರೂಪಕಿ ಅಪರ್ಣಾ ವಿಧಿವಶರಾಗಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದ ಅಪರ್ಣಾ, ಮಜಾ ಟಾಕೀಸ್‌ 'ವರು' ಪಾತ್ರದಿಂದ ಜನರ ಅಪಾರ ಮೆಚ್ಚುಗೆ ಗಳಿಸಿದ್ದವರು. ಆದರಿಂದು ಕ್ಯಾನ್ಸರ್​ ಎಂಬ ಮಾರಕಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬನಿ ಸುರಿಸಿದ್ದಾರೆ. ಇವರನ್ನು ಮಜಾ ಟಾಕೀಸ್​ ವೇದಿಕೆ ಮೂಲಕ ಹತ್ತಿರದದಲ್ಲಿ ಕಂಟ ನಟಿ ಶ್ವೇತಾ ಚೆಂಗಪ್ಪರವರು ಅಪರ್ಣಾರ ಬಗ್ಗೆ ನೆನೆದುಕೊಂಡಿದ್ದಾರೆ.

Advertisment

ಇದನ್ನೂ ಓದಿ: ಬಂದಿತ್ತೊಂದು ಕರೆ, ಬದಲಾಯ್ತು ದಿಕ್ಕು.. ಇದು ಸಿನಿಮಾ ಪತ್ರಕರ್ತನ ಮಗಳು ‘ಅಪರ್ಣಾ’ಳ ಜೀವನಗಾಥೆ

ಇನ್​​ಸ್ಟಾಗ್ರಾಂನಲ್ಲಿ ಶ್ವೇತಾ ಚೆಂಗಪ್ಪರವರು, ಅಪರ್ಣಾ ಅಕ್ಕ RIP. ಬಹುಶಃ ನಿಮ್ಮನ್ನ ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಅಕ್ಕ ಅಂತ ಕರೆದಿಲ್ಲ. ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ. ಪ್ರತಿಯೊಂದು ನೆನಪು ನನ್ನ ಕೊನೆಯ ಉಸಿರಿನವರೆಗೂ ಶಾಶ್ವತವಾಗಿ ನನ್ನ ಜೊತೆ ಇರುತ್ತೆ. ತುಂಬಾ ಬೇಗ ಹೊರಟ್ ಬಿಟ್ರಿ. ಹೋಗಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ ಎಂದು ಬರೆದುಕೊಂಡಿದ್ದಾರೆ.

Advertisment

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ನದಿಗೆ ಬಿದ್ದ ಏಂಜೆಲ್​​ ಮತ್ತು ಗಣಪತಿ ಡಿಲಕ್ಸ್​ ಬಸ್.. 65 ಮಂದಿ ನಾಪತ್ತೆ!

ಅಪರ್ಣಾ ಸಾವಿಗೆ ಅನೇಕರು ಕಂಬನಿ ಸುರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದು ಹಾಕುವ ಮೂಲಕ ಅವರ ನೆನಪಿನ ಬುತ್ತಿ ತೆರೆದಿದ್ದಾರೆ. ಆದರೆ 57 ವರ್ಷದ ಅಪರ್ಣಾ ಅವರು ಶ್ವಾಸಕೋಶ ಕ್ಯಾನ್ಸರ್​​​ಗೆ ತುತ್ತಾಗಿರೋದು ವಿಪರ್ಯಾಸವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment