ಸೇವೆ ಸ್ಥಗಿತಗೊಳಿಸುತ್ತಿದೆ ‘ಅಪೊಲೊ ಟೈರ್ಸ್’ ಒಡೆತನದ ‘ಟ್ರುಮಿಗೋ’.. ಕಾರಣ?

author-image
AS Harshith
Updated On
ಸೇವೆ ಸ್ಥಗಿತಗೊಳಿಸುತ್ತಿದೆ ‘ಅಪೊಲೊ ಟೈರ್ಸ್’ ಒಡೆತನದ ‘ಟ್ರುಮಿಗೋ’.. ಕಾರಣ?
Advertisment
  • ಅಪೊಲೊ ಟೈರ್ಸ್ ಅಂತರಾಷ್ಟ್ರೀಯ ಟೈರ್​ ಉತ್ಪಾದನಾ ಕಂಪನಿ
  • ಫೆಬ್ರವರಿಯಲ್ಲಿ ಪ್ರಾರಂಭವಾದ ಕಂಪನಿ ಸ್ಥಗಿತಗೊಳ್ಳುತ್ತಿರೋದ್ದೇಕೆ?
  • ಮನೆ ಬಾಗಿಲಿಗೆ ಹೋಗಿ ಕಾರು ಸೇವೆಯನ್ನು ನೀಡುತ್ತಿದ್ದ ‘ಟ್ರುಮಿಗೊ‘

ಅಂತರಾಷ್ಟ್ರೀಯ ಟೈರ್​ ಉತ್ಪಾದನಾ ಕಂಪನಿ ಅಪೊಲೊ ಟೈರ್ಸ್​ ತನ್ನ ಒಡೆತನದ ಟ್ರುಮಿಗೋ ಕಾರು ಸೇವೆಯನ್ನು ಮುಚ್ಚಲು ಮುಂದಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ. ಟ್ರುಮಿಗೊ ಪ್ರಾರಂಭವಾಗಿ 6 ತಿಂಗಳಲ್ಲಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಟ್ರುಮಿಗೊ ಮನೆ ಬಾಗಿಲಿಗೆ ಹೋಗಿ ಕಾರು ಸೇವೆಯನ್ನು ನೀಡುವ ಕೆಲಸ ಮಾಡುತ್ತಿತ್ತು. ಅಪೊಲೊ ಟೈರ್ಸ್ ಗ್ರಾಹಕರಿಗೆ​ ವಿಶೇಷ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಕಂಪನಿಯನ್ನು ಪ್ರಾರಂಭಿಸಿತು. ಆದರೀಗ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದ ಕಾರಣ ಟ್ರುಮಿಗೋವನ್ನು ಸ್ಥಗಿತಗೊಳಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ 12 ವರ್ಷದ ಹೆಣ್ಣು ಮಗು.. 6 ಮಕ್ಕಳಿಗೆ ಅಂಗಾಂಗ ದಾನ ಮಾಡಿದ ಪುಟಾಣಿ

ಮಾಹಿತಿ ಪ್ರಕಾರ, ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾಗ ಟ್ರುಮಿಗೋ ಈಗಾಗಲೇ 100 ಉದ್ಯೋಗಿಗಳನ್ನು ವಜಾಗೊಳಿಸಿದೆ ಎನ್ನಲಾಗುತ್ತಿದೆ. ಪ್ರಾರಂಭದಲ್ಲಿ ಗುರುಗ್ರಾಮ್​​ನಲ್ಲಿ ಈ ಕಂಪನಿಯನ್ನು ಹುಟ್ಟುಹಾಕಲಾಯಿತು. ದೆಹಲಿ ಪೂರ್ತಿ ವಿಸ್ತರಿಸುವಲ್ಲಿ ಚಿಂತಿಸಿತ್ತು. ಆದರೀಗ ಮಾರುಕಟ್ಟೆಯಲ್ಲಿ ಪೈಪೋಟಿ ಮತ್ತು ಸ್ಪರ್ಧಿಸಲು ಸಾಧ್ಯವಾಗದ ಕಾರಣ ಸ್ಥಗಿತಗೊಳಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment