newsfirstkannada.com

ಓಲಾ, ಊಬರ್​​ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಹೊಸ ಅಸ್ತ್ರ; ಈ ಪ್ಲಾನ್ ಜಾರಿಯಾದ್ರೆ ಸಮಸ್ಯೆಗೆ ಮುಕ್ತಿ ಸಿಗೋದಂತೂ ಪಕ್ಕಾ

Share :

Published February 4, 2024 at 6:34am

  ಕಳ್ಳಾಟ ತಡೆಗೆ ಸರ್ಕಾರದಿಂದ ಏಕರೂಪ ದರದ ಅಸ್ತ್ರ

  ಟ್ಯಾಕ್ಸಿ ಌಪ್‌ಗಳ ದರೋಡೆಗೆ ಪ್ರಯಾಣಿಕರಿಗೆ ಸಂಕಷ್ಟ

  ಟ್ಯಾಕ್ಸಿ ಚಾಲಕರ ದರೋಡೆಗೆ ಬ್ರೇಕ್ ಹಾಕಲಿದೆ ಸರ್ಕಾರ

ಬೆಂಗಳೂರಿನ ಆ್ಯಪ್ ಆಧಾರಿತ ಟ್ಯಾಕ್ಸಿ ಅಗ್ರಿಗೇಟರ್​​ಗಳ ಹಗಲು ದರೋಡೆಗೆ ಲಂಗು ಲಗಾಮ್ ಇಲ್ಲದಂತಾಗಿದೆ. ಮನಸಿಗೆ ಬಂದಂತೆ ದರ ಏರಿಕೆ ಮಾಡಿ ಜನರಿಂದ ನಿರಂತರ ಸುಲಿಗೆ‌ ಮಾಡ್ತಿದ್ದಾರೆ. ಈ ಕಳ್ಳಾಟಕ್ಕೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಹೊಸದೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.‌ ಈ ಪ್ಲಾನ್ ಜಾರಿಯಾದ್ರೆ ಜನರ ಬಹುಕಾಲದ ಸಮಸ್ಯೆಗೆ ಮುಕ್ತಿ ಸಿಗೋದಂತು ಪಕ್ಕಾ.

ಪೀಕ್​ ಅವರ್​ನಲ್ಲಿ ಡಬಲ್ ರೇಟ್. ಮಳೆ ಬಂದ್ರೆ ಬೇಕಾಬಿಟ್ಟಿ ದರ ಏರಿಕೆ. ಈಗಿದ್ದ ರೇಟ್ ಮರುಕ್ಷಣದಲ್ಲಿ ದುಪ್ಪಟಾಗಿರುತ್ತೆ. ಇದು ಬೆಂಗಳೂರಿನ ಓಲಾ-ಉಬರ್ ಸೇರಿದಂತೆ ಟ್ಯಾಕ್ಸಿ ಆ್ಯಪ್​ಗಳ ಹಗಲು ದರೋಡೆಯ ಕಥೆ. ಈಗ ಕೊನೆಗೂ‌ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಕಳ್ಳಾಟಕ್ಕೆ ಫುಲ್ ಸ್ಟಾಪ್ ಹಾಕಲು ಮಾಸ್ಟರ್ ಪ್ಲಾನ್‌ ಒಂದನ್ನ ಸರ್ಕಾರದ ಮುಂದಿಟ್ಟಿದೆ.‌ ಬೆಂಗಳೂರಿನಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ, ಓಲಾ ಮತ್ತು ಉಬರ್, ಱಪಿಡೋ ಸೇವೆ ನೀಡ್ತಿವೆ.

ಬೆಂಗಳೂರಿನಲ್ಲಿ ಸುಮಾರು 2.22 ಲಕ್ಷ ಕ್ಯಾಬ್​ಳಿದ್ದು, ನಿತ್ಯ 80 ಸಾವಿರಕ್ಕೂ ಹೆಚ್ಚು ಟ್ರಿಪ್‌ ಮಾಡ್ತಿದೆ. ಆದರೆ ಈ ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಪ್ರಯಾಣ ದರವು ದಿನದ 24 ಗಂಟೆಯೂ ಒಂದೇ ರೀತಿ ಇರುವುದಿಲ್ಲ. ಡಿಮ್ಯಾಂಡ್ ಹೆಚ್ಚಾಗ್ತಿದ್ದಂತೆ ಏಕಾಏಕಿ ಏರಿಕೆಯಾಗುತ್ತೆ.‌ ಬುಕ್ಕಿಂಗ್‌ ಬೇಡಿಕೆ, ತಲುಪಬೇಕಾದ ಸ್ಥಳ ಮತ್ತು ಸಮಯದ ಆಧಾರದಲ್ಲಿ ದರ ನಿಗದಿಪಡಿಸಬಾರದೆಂಬ ನಿಯಮವಿದ್ದರೂ ಇದನ್ನು ಲೆಕ್ಕಿಸದೆ ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗ್ತಿದೆ.‌ ಹೀಗಾಗಿ, ಸಾರಿಗೆ ಇಲಾಖೆ ಏಕರೂಪ ಪ್ರಯಾಣ ದರದ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ.

16 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಎ ವರ್ಗದ ವಾಹನಗಳಿಗೆ 4 ಕಿ.ಮೀ ವರೆಗೆ ಕನಿಷ್ಠ ₹150 ನಿಗದಿ ಪಡಿಸಲಾಗಿದೆ.‌ 4 ಕಿ.ಮೀ ನಂತರ ಪ್ರತಿ ಕಿಲೋ ಮೀಟರ್​ಗೆ ಹೆಚ್ಚುವರಿ 32 ರೂಪಾಯಿ ಫಿಕ್ಸ್ ಮಾಡಲು ಪ್ರಸ್ತಾಪನೆ ಸಲ್ಲಿಸಲಾಗಿದೆ. 1೦ ಲಕ್ಷದಿಂದ 16 ಲಕ್ಷ ಮೌಲ್ಯದ ಬಿ ವರ್ಗದ ವಾಹನಗಳಿಗೆ 4 ಕಿ.ಮೀವರೆಗೆ ಕನಿಷ್ಠ ₹120 ನಿಗದಿ ಮಾಡುತ್ತಿದ್ದು, 4 ಕಿ.ಮೀ ನಂತರ ಪ್ರತಿ ಕಿಲೋ ಮೀಟರ್​ಗೆ ಹೆಚ್ಚುವರಿ 28 ರೂಪಾಯಿ ಫಿಕ್ಸ್ ಮಾಡಲು ಸಿದ್ಧತೆ ನಡೆದಿದೆ. 5ಲಕ್ಷದಿಂದ 10 ಲಕ್ಷ ಮೌಲ್ಯದ ಸಿ ವರ್ಗದ ವಾಹನಗಳಿಗೆ 4 ಕಿ.ಮೀ ವರೆಗೆ ಕನಿಷ್ಠ 100 ರೂಪಾಯಿ ನಿಗದಿಗೆ ಮುಂದಾಗಿದ್ದು, 4 ಕಿ.ಮೀ ನಂತರ ಪ್ರತಿ ಕಿಲೋ ಮೀಟರ್​ಗೆ ಹೆಚ್ಚುವರಿ 24 ರೂಪಾಯಿ ಪಡೆಯಲಾಗುತ್ತದೆ.‌

ಇನ್ನೂ 5ಲಕ್ಷವರೆಗಿನ ಮೌಲ್ಯದ ವಾಹನಗಳಿಗೆ 4 ಕಿ.ಮೀವರೆಗೆ ಕನಿಷ್ಠ 75 ರೂಪಾಯಿ ಫಿಕ್ಸ್ ಮಾಡ್ತಿದ್ದು. 4 ಕಿ.ಮೀ ನಂತರ ಪ್ರತಿ ಕಿಲೋ ಮೀಟರ್​ಗೆ ಹೆಚ್ಚುವರಿ 22 ರೂಪಾಯಿ ನಿಗದಿ‌ ಮಾಡುವಂತೆ ಪ್ರಸ್ತಾವನೆ‌ ಸಲ್ಲಿಕೆಯಾಗಿದೆ. ಒಟ್ಟಿನಲ್ಲಿ ಹಗಲು ದರೋಡೆಗೆ ಇಳಿದ ಚಾಲಕರಿಗೆ ಸಾರಿಗೆ ಇಲಾಖೆಯ ಈ ಒಂದು ನಿರ್ಧಾರ ತಕ್ಕ ಶಾಸ್ತಿಯಾಗಿದ್ದು, ಆದಷ್ಟು ಬೇಗ, ಸರ್ಕಾರದಿಂದ‌‌ ಒಪ್ಪಿಗೆ ಸಿಕ್ಕಿ ಶೀಘ್ರದಲ್ಲಿ ಏಕರೂಪ ದರ ನಿಗದಿಯಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓಲಾ, ಊಬರ್​​ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಹೊಸ ಅಸ್ತ್ರ; ಈ ಪ್ಲಾನ್ ಜಾರಿಯಾದ್ರೆ ಸಮಸ್ಯೆಗೆ ಮುಕ್ತಿ ಸಿಗೋದಂತೂ ಪಕ್ಕಾ

https://newsfirstlive.com/wp-content/uploads/2024/02/uber.jpg

Load More