/newsfirstlive-kannada/media/post_attachments/wp-content/uploads/2024/09/Iphone-se4.jpg)
16 ಸೀರೀಸ್​​ ಬೆನ್ನಲ್ಲೇ ಐಫೋನ್​ SE4 (iPhone SE4) ಬಿಡುಗಡೆಗೆ ಸಜ್ಜಾಗಿದೆ. ಇಂದು ಐಫೋನ್​ SE4 ಲಾಂಚ್​​ ಆಗಲಿದ್ದು, ಇದು ಆ್ಯಪಲ್​ ಪ್ರಿಯರಿಗಾಗಿ ಮಾಡಲಾದ ಮಿಡ್​ ರೇಂಜ್​ ಫೋನ್​ ಆಗಿದೆ. ಸದ್ಯ ಹೊಸ ಐಫೋನ್​ SE4 ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಲಾಂಚ್​ಗೆ ಮುನ್ನವೇ ಮಹತ್ವದ ಮಾಹಿತಿ ಲೀಕ್​ ಆಗಿದೆ.
ಐಫೋನ್​ SE4 ಹಳೆಯ ಐಫೋನ್​ SE3ಯಂತೆ ಒಂದೇ ಕ್ಯಾಮೆರಾ ಲೆನ್ಸ್​ ಒಳಗೊಂಡಿದೆ. ಇದರ ಹೊರತಾಗಿ ಆ್ಯಪಲ್​ ಮ್ಯೂಟ್​​ ಸ್ವಿಚ್​​ ಮತ್ತು ವ್ಯಾಲೂಮ್​​ ಬಟನ್​ಗಳ ಸ್ಥಾನದಲ್ಲಿ ದೊಡ್ಡ ಬದಲಾವಣೆ ಮಾಡಲು ಹೋಗಲ್ಲ ಎಂದು ಸೂಚಿಸಿದೆ.
/newsfirstlive-kannada/media/post_attachments/wp-content/uploads/2024/10/IPHONESE4.jpg)
ಗಾತ್ರ ದೊಡ್ಡದು
ಹೊಸ ಐಫೋನ್​ SE4 ಕೊಂಚ ಗಾತ್ರದಲ್ಲಿ ದೊಡ್ಡದಿರಬಹುದು ಎಂದು ಹೇಳಲಾಗುತ್ತಿದೆ. ಮಾರ್ಚ್​ 2025ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಐಫೋನ್​ SE3ಗೆ ಹೋಲಿಸಿದರೆ 4.7 ಇಂಚಿನ ಬದಲಾಗಿ 6.06 ಇಂಚಿನ ಓಎಲ್​ಇಡಿ ಡಿಸ್​​ಪ್ಲೇಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
ರೇಟ್​ ಎಷ್ಟು?
ಅದರಂತೆ iPhone SE4 ಬೆಲೆ 499 ಡಾಲರ್​​ ಎಂದು ನಿರೀಕ್ಷಿಸಲಾಗುತ್ತಿದೆ. ಈ ಹಿಂದೆ ಬಿಡುಗಡೆಗೊಂಡ ಐಫೋನ್​ SE3 ಬೆಲೆ 429 ಡಾಲರಷ್ಟಿತ್ತು. ಆದರೀಗ ಬಜೆಟ್​ ಬೆಲೆಯ ಹೊಸ ಐಫೋನ್​ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.
ಐಫೋನ್​ SE4 ಯುಎಸ್​​ಬಿ ಸಿ ಪೋರ್ಟ್​​ ಅನ್ನು ಹೊಂದಲಿರುವ ಮೊದಲ ಮಧ್ಯಮ ಶ್ರೇಣಿಯ ಸ್ಮಾರ್ಟ್​ಫೋನ್​ ಆಗಿರಲಿದೆ. ಇನ್ನು ಆ್ಯಪಲ್​ ಇಂಟೆಲೆಜೆನ್ಸ್​​ ಕಾರ್ಯನಿರ್ವಹಿಸಲು 8ಜಿಬಿ ರ್ಯಾಮ್​ ಅವಶ್ಯಕವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us