/newsfirstlive-kannada/media/post_attachments/wp-content/uploads/2024/08/apple-security-threat.jpg)
ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ Apple ಭಾರತದಲ್ಲಿ ತನ್ನ ಉತ್ಪಾದನೆಯನ್ನು 5 ಪಟ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ಮೂಲಕ ದೇಶದಲ್ಲಿ ಐದು ಲಕ್ಷ ಮಂದಿಗೆ ಉದ್ಯೋಗ ಸಿಗುವ ಭರವಸೆ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2023/11/Apple-watch.jpg)
ಆಪಲ್ ಮುಂದಿನ 2 ವರ್ಷಗಳಲ್ಲಿ ಸುಮಾರು 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ಪ್ರಸ್ತುತ, ಭಾರತದಲ್ಲಿ ಆಪಲ್‌ನ ಮಾರಾಟಗಾರರು ಮತ್ತು ಪೂರೈಕೆದಾರರು ಸೇರಿ 1.5 ಲಕ್ಷ ಜನ ಕೆಲಸ ಮಾಡ್ತಿದ್ದಾರೆ. ದೇಶದಲ್ಲಿ ಆಪಲ್ ನೇಮಕಾತಿ ಪ್ರಕ್ರಿಯೆ ವೇಗವಾಗಿ ಹೆಚ್ಚಿಸುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರು ವರ್ಷಗ ಹಿಂದೆ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಆಪಲ್ ಸಂಸ್ಥೆಗೆ ದೊಡ್ಡ ಹೊಡೆತ ಬಿದ್ದಿತ್ತು. ಚೀನಾದಲ್ಲಿ ಹೆಚ್ಚಿನ ಉತ್ಪಾದನಾ ಘಟಕಗಳಿದ್ದವು, ಆದರೆ ಕೊರೊನಾ ಉಲ್ಬಣಗೊಂಡಿದ್ದರಿಂದ ಆಪಲ್ ಸಂಕಷ್ಟಕ್ಕೆ ಸಿಲುಕಿತ್ತು. ಚೀನಾದಿಂದ ದೊಡ್ಡ ಆಘಾತ ಉಂಟಾದ ಹಿನ್ನೆಲೆಯಲ್ಲಿ ಕಂಪನಿಯು ಭಾರತದತ್ತ ಹೆಚ್ಚು ಗಮನ ಹರಿಸಿದೆ. 2024ರಲ್ಲಿ ಆಪಲ್ ಭಾರತದಿಂದ ಅತ್ಯಧಿಕ ಆದಾಯವನ್ನು ಗಳಿಸಲಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್ ಪಾಯಿಂಟ್ ಹೇಳಿದೆ. ಆಪಲ್ ಭಾರತದಿಂದ ಸುಮಾರು 1 ಕೋಟಿ ಫೋನ್‌ಗಳನ್ನು ರಫ್ತು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us