/newsfirstlive-kannada/media/post_attachments/wp-content/uploads/2023/09/Iphone-15.jpg)
ಜಗತ್ತಿನಲ್ಲೇ ಹೆಚ್ಚು ಸೇಫೆಸ್ಟ್​ ಫೋನ್​ ಎಂದರೆ ಅದು ಐಫೋನ್​ ಎಂದು ಹೇಳಲಾಗುತ್ತಿತ್ತು. ಆ್ಯಪಲ್​​ ಸಂಸ್ಥೆಯ ಎಲ್ಲಾ ಉಪಕರಣಗಳು ಸೇಫ್​ ಅಷ್ಟೇ ಅಲ್ಲ ಸೆಕ್ಯೂರ್ಡ್​ ಫೀಲಿಂಗ್​ ನೀಡುತ್ತಿತ್ತು. ಈಗ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್‌ಬುಕ್ ಸೇರಿದಂತೆ ಆ್ಯಪಲ್ ಸಂಸ್ಥೆಯ ಎಲ್ಲಾ ಉಪಕರಣಗಳಲ್ಲೂ ಹೈ ರಿಸ್ಕ್​​​ ಇದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಏನಿದು ಎಚ್ಚರಿಕೆ?
ಇತ್ತೀಚೆಗೆ ಐಫೋನ್​​​, ಐಪ್ಯಾಂಡ್​ ಮತ್ತು ಮ್ಯಾಕ್​​ಬುಕ್​ನಲ್ಲೂ ಡೇಟಾ ಕಳವು, ಖಾಸಗಿ ಮಾಹಿತಿ ಸೋರಿಕೆ ಆಗುತ್ತಿದೆ. ಹ್ಯಾಕರ್ಸ್​ ಸೆಲೆಬ್ರಿಟಿಗಳನ್ನೇ ಟಾರ್ಗೆಟ್​ ಮಾಡಿ ಈ ಕೆಲಸ ಮಾಡುತ್ತಿದ್ದಾರೆ. ಈ ಅಪಾಯದಿಂದ ಪಾರಾಗಲು ನೀವು ಎಚ್ಚರ ವಹಿಸಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/02/NF_CYBER_CRIME_2.jpg)
ಹ್ಯಾಕರ್ಸ್​ನಿಂದ ದಾಳಿ
ಐಫೋನ್​​, ಐಪ್ಯಾಡ್​ ಮತ್ತು ಮ್ಯಾಕ್​ಬುಕ್​ನಲ್ಲಿ ಬಳಸಲಾದ ಹಾರ್ಡ್‌ವೇರ್ಸ್​ ಮತ್ತು ಐಒಎಸ್, ಸಫಾರಿ, ಮ್ಯಾಕ್ ಓಎಸ್ ವೆಂಚುರಾ, ಸೊನೊಮಾ ಸೇರಿ ಹಲವು ತಂತ್ರಾಂಶಗಳ ಮೇಲೆ ಹ್ಯಾಕರ್ಸ್​ಗಳ ದಾಳಿ ನಡೆಯುತ್ತಿದೆ. ಅಜ್ಞಾತ ಸ್ಥಳಗಳಿಂದಲೇ ಸೈಬರ್ ದಾಳಿಕೋರರು ಆ್ಯಪಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳ ದಾಳಿ ನಡೆಸಿ ಡೇಟಾ ಕಳವು ಮಾಡುತ್ತಿದ್ದಾರೆ ಎಂದು ಭದ್ರಾತಾ ಸಂಶೋಧಕರ ವರದಿಯಲ್ಲಿ ಬಹಿರಂಗವಾಗಿದೆ.
ನಕಲಿ ಆ್ಯಪ್​​ಗಳಿಂದಲೂ ಆಕ್ಸೆಸ್​​
ಐಫೋನ್​ನಲ್ಲೂ ಅಗತ್ಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲಾಗುತ್ತದೆ. ಗೂಗಲ್​ನಿಂದ ಡೌನ್​​ಲೋಡ್​ ಮಾಡುವ ಅಪ್ಲಿಕೇಶನ್‌ಗಳು ಅಸಲಿ ಎಂದು ನಾವು ಭಾವಿಸುತ್ತೇವೆ. ಇದು ಸೇಫ್​​ ಅಲ್ಲ. ಇದರಿಂದ ನೀವು ಕೋಟ್ಯಾಂತರ ರೂಪಾಯಿ ದುಡ್ಡು ಕಳೆದುಕೊಳ್ಳಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಜತೆಗೆ ಐಫೋನ್​​ನಲ್ಲಿ ಗೂಗಲ್​​ ಸರ್ಚ್​​ ಇಂಜಿನ್​​ನಿಂದ ಯಾವುದೇ ಆ್ಯಪ್​ ಡೌನ್​ಲೋಡ್​ ಮಾಡಬೇಡಿ ಎಂದು ಎಚ್ಚರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us