/newsfirstlive-kannada/media/post_attachments/wp-content/uploads/2024/07/Iphone-15-1.jpg)
ಕುಪರ್ಟಿನೋ ಮೂಲದ ದೈತ್ಯ ಕಂಪನಿ ಆ್ಯಪಲ್​ ತನ್ನ ಗ್ರಾಹಕರಿಗಾಗಿ ನೂತನ ಮಾದರಿಯಲ್ಲಿ ಐಫೋನ್​ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಗ್ರಾಹಕರ ಸದಾಭಿರುಚಿಯನ್ನು ಗಮನಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ಆ್ಯಂಡ್ರಾಯ್ಡ್​ಗೆ ಹೋಲಿಸಿದರೆ ಐಫೋನ್​ ಖರೀದಿಸುವವರ ಸಂಖ್ಯೆಯೇ ಬೇರೆಯೇ ಇದೆ. ಇನ್ನು ಹಲವರು ಐಫೋನ್​ ಖರೀದಿಸಲು ಪ್ಲಾನ್​ ಹಾಕಿಕೊಂಡಿರುತ್ತಾರೆ. ಆದರೆ ಅದರ ಬೆಲೆ ಇಳಿಕೆಗಾಗಿ ಕಾಯುತ್ತಿರುತ್ತಾರೆ. ಇದೀಗ ಅಂತವರಿಗೆ ಖರೀದಿಸುವ ಸಮಯ ಬಂದಿದೆ. ಕಡಿಮೆ ಬೆಲೆಗೆ ಐಫೋನ್​ 15 ಖರೀದಿಸಬಹುದಾಗಿದೆ.
ಜನಪ್ರಿಯ ಇ-ಕಾಮರ್ಸ್​ ಮಳಿಗೆಯಾದ ಅಮೆಜಾನ್​​ ಆ್ಯಪಲ್​ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು​ ಐಫೋನ್​ 15 ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. 79,900 ರೂಪಾಯಿ ಮುಖ ಬೆಲೆಯ ಐಫೋನ್​ ಮೇಲೆ ಶೇ.11 ರಷ್ಟು ರಿಯಾಯಿತಿ ನೀಡಿದೆ. ಹಾಗಾಗಿ 70,999 ರೂಪಾಯಿಗೆ ಸಿಗುತ್ತಿದೆ.
ಇದನ್ನೂ ಓದಿ: ಕಬಿನಿ ಭರ್ತಿಗೆ 1 ಅಡಿ ಬಾಕಿ! ಹೊರ ಹರಿಸಲಾಗುತ್ತಿದೆ 20000 ಕ್ಯೂಸೆಕ್​ ನೀರು
ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಫೋನನ್ನು ಎಕ್ಸ್​ಚೇಂಜ್​ ಮಾಡುವ ಮೂಲಕ ಐಫೋನ್​ 15 ಖರೀದಿಸಬಹುದಾಗಿದೆ. ಒಂದು ವೇಳೆ ಹಳೆಯ ಫೋನ್​ ಉತ್ತಮ ಸ್ಥಿತಿಯಲ್ಲಿದ್ದರೆ 44,925 ರೂಪಾಯಿವರೆಗೂ ಉಳಿಸಬಹುದಾಗಿದೆ. ಅಂದರೆ ಗ್ರಾಹಕರು 26.074 ರೂಪಾಯಿಗೆ ಐಫೋನ್​ 15 ಖರೀದಿಸಬಹುದಾಗಿದೆ.
ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ.. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈಯ್ದಿರೋ ಶಂಕೆ
ಇದಲ್ಲದೆ, ಅಮೆಜಾನ್​​ ಪೇ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​​ ಕಾರ್ಡ್​ ಹೊಂದಿರುವ ಗ್ರಾಹಕರು 5,924 ರೂಪಾಯಿವರೆಗಿನ ಹೆಚ್ಚಿನ ರಿಯಾಯಿತಿ ಪಡೆಯಬಹುದಾಗಿದೆ. ಹೀಗಾಗಿ ಐಫೋನ್​ 15ನನ್ನು 20,150ಗೆ ಖರೀದಿಸಬಹುದಾಗಿದೆ.
ಹಳೆಯ ಫೋನನ್ನು ಎಕ್ಸ್​ಚೇಂಜ್​ ಮಾಡುವ ಮುನ್ನ ಕೆಲವೊಂದು ವಿಚಾರಗಳು ಗ್ರಾಹಕರು ಗಮನದಲ್ಲಿರಬೇಕಿದೆ. ಎಕ್ಸ್​ಚೇಂಜ್​ ವೇಳೆ ಫೋನ್​​ ಕಾರ್ಯ ನಿರ್ವಹಿಸುತ್ತಿರಬೇಕು, ಐಎಮ್​​ಇಐ ಸಂಖ್ಯೆಯು ಹೊಂದಾಣಿಕೆಯಾಗಬೇಕು. ಸ್ಕ್ರೀನ್​ ಲಾಕ್​​, ಐಕ್ಲೌಡ್​​ ಕೆಲಸ ಮಾಡುವಂತಿರಬೇಕು. ಫೋನ್​ ಮೇಲ್ಭಾಗ ಯಾವುದೇ ಹಾನಿಯಾಗಿರಬಾರದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us