/newsfirstlive-kannada/media/post_attachments/wp-content/uploads/2024/10/APPLE.jpg)
ಸೇಬು ಹಣ್ಣು ಎನ್ನುವುದಕ್ಕಿಂತ ಆಪಲ್​ ಎಂದೇ ಎಲ್ಲರಿಗೂ ಗೊತ್ತಿರುವಂತ ಹಣ್ಣು. ಈ ಹಣ್ಣನ್ನು ನೋಡಿದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಮಾರ್ಕೆಟ್​ನಲ್ಲಿ ಈ ಹಣ್ಣು ಯಾವಾಗಲೂ ಭಾರೀ ಬೆಲೆಯಲ್ಲಿ ಮಾರಾಟ ಆಗುತ್ತಿರುತ್ತದೆ. ನೋಡುವುದಕ್ಕೂ ಅಂದವಾಗಿದ್ದು ತಿನ್ನುವುದಕ್ಕೂ ಬಲು ರುಚಿಯಾಗಿರುವ ಹಣ್ಣು ಎಂದರೆ ಅದು ಸೇಬು. ಎಲ್ಲರೂ ಇಷ್ಟಪಡುವ ಈ ಆಪಲ್​ ಆರೋಗ್ಯಕ್ಕೂ ಆಯುರ್ವೇದ. ರೋಗಿಗೆ, ಡಾಕ್ಟರ್ ಮೊದಲು ಸಜೆಸ್ಟ್ ಮಾಡೋ ಹಣ್ಣು ಆಪಲ್​, ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗಗಳಿವೆ ಗೊತ್ತಾ?.
ಯಾರೇ ಆಗಲಿ ನಿಯಮಿತವಾದ ಆಪಲ್​ ತಿನ್ನುತ್ತಿದ್ದರೇ ಮೊದಲು ಅವರ ದೇಹದ ಹೃದಯರಕ್ತನಾಳದ ಕಾಯಿಲೆಗಳಿಂದ ಮುಕ್ತಿ ಪಡೆಯುತ್ತಾರೆ. ಸೇಬಿನಲ್ಲಿ ಇರುವಂತ ಫೈಬರ್​ಗಳು ಕರಗಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಸೇಬು ಹಣ್ಣುಗಳು ಪಾಲಿಫಿನಾಲ್​ನಿಂದ ಸಮೃದ್ಧವಾಗಿವೆ. ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಕೂಡ ಸೇಬಿನಲ್ಲಿ ಇರುತ್ತದೆ.
ಹೃದಯದ ಆರೋಗ್ಯ ಕಾಪಾಡುವಲ್ಲಿ ಮೊದಲ ಹಣ್ಣು ಸೇಬು
ಆಪಲ್​ ಹೃದಯವನ್ನ ಹೇಗೆ ಕಾಪಾಡುತ್ತದೆ ಎಂದರೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನ ಕಡಿಮೆ ಮಾಡಿ ಉತ್ತಮ ಮಟ್ಟದ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇದರಿಂದ ಹೃದಯದ ಕಾಯಿಲೆಗಳನ್ನು ದೂರ ಮಾಡುತ್ತದೆ. ಇದು ಅಲ್ಲದೇ ಉತ್ತಮ ಪ್ರಮಾಣದ ಕರಗುವ ನಾರು ಹಾಗೂ ಪಾಲಿಫೆನಾಲ್ ಅಂಟಿ ಆಕ್ಸಿಡೆಂಟ್​ಗಳು ಸೇಬಿನಲ್ಲಿದ್ದು ಇದು ಹೃದಯದ ಆರೋಗ್ಯವನ್ನ ಉತ್ತಮವಾಗಿರುಸುತ್ತವೆ. ನಿರಂತರ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ.
ಮಧುಮೇಹಿಗಳು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬಾರದು. ಏಕೆಂದರೆ ಸಕ್ಕರೆ ಪ್ರಮಾಣ ಸೇಬಿನಲ್ಲಿ ಇರುವುದರಿಂದ ಮಧುಮೇಹಿಗೆ ಹಾನಿಯಾಗಬಹುದು.
ಸೇಬಿನಲ್ಲಿನ ಸಸ್ಯಜನ್ಯ ಅಂಶಗಳು ಕ್ಯಾನ್ಸರ್ ವಿರೋಧಿಯಾಗಿ ವರ್ತನೆ ಮಾಡುತ್ತವೆ. ಆಂಟಿಆಕ್ಸಿಡೆಂಟ್ ಮತ್ತು ಪೈಥೋನ್ಯೂಟ್ರಿಯಂಟ್​ಗಳು ಕರುಳು ಮತ್ತು ಶ್ವಾಸಕೋಶದ ಕ್ಯಾನ್ಸರ್ ಅನ್ನು ದೂರ ಮಾಡುತ್ತವೆ.
/newsfirstlive-kannada/media/post_attachments/wp-content/uploads/2024/10/APPLE_NEW.jpg)
ನಿತ್ಯ 1 ಆ್ಯಪಲ್ ತಿಂದರೆ ನಿಮಗೆ ಶೇಕಡಾ 20ರಷ್ಟು ಕರುಳಿನ ಕ್ಯಾನ್ಸರ್ ಅಪಾಯ ಕಡಿಮೆ ಆಗುತ್ತದೆ. ಇದರ ಜೊತೆಗೆ ಮಹಿಳೆರಿಗೆ ಸ್ತನದ ಕ್ಯಾನ್ಸರ್ ಅಪಾಯ ಶೇಕಡಾ18ರಷ್ಟು ಕಡಿಮೆ ಆಗಲಿದೆ.
ಆಪಲ್​ ನಿತ್ಯ ಸೇವನೆಯಿಂದ ಜನರ ಸಾವಿನ ಪ್ರಮಾಣವು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹೇಗೆಂದರೆ ಮಹಿಳೆಯರು ನಿತ್ಯ ಸೇಬು ತಿಂದರೆ ಹೃದಯ ಕಾಯಿಲೆಯಿಂದ ಸಾವಿನ ಪ್ರಮಾಣವು ಶೇಕಡಾ 43ರಷ್ಟು ಕಡಿಮೆ ಆಗುತ್ತದೆ. ಇದೇ ಪುರುಷರಲ್ಲಿ ಹೃದಯ ಕಾಯಿಲೆಯಿಂದ ಸಾವಿನ ಪ್ರಮಾಣ ಶೇಕಡಾ 19ರಷ್ಟು ಕಡಿಮೆ ಆಗಲಿದೆ.
ಸೇಬಿನ ರಸ ಮೆದುಳಿನ ಆರೋಗ್ಯ ಹೆಚ್ಚಿಸುತ್ತೆ
ಆಪಲ್​​ನಲ್ಲಿ ಆಂಟಿಆಕ್ಸಿಡೆಂಟುಗಳಲ್ಲಿ (Antioxidant) ಒಂದಾದ ಕ್ವೆರ್ಸಟಿನ್ (Quercetin) ನ್ಯೂರಾನ್ ಗಳಲ್ಲಿ ಉರಿಯೂತ ಮತ್ತು ಆಕ್ಸಿಡೀಕರಣದಿಂದ ಎದುರಾಗುವ ಜೀವಕೋಶಗಳ ಸಾವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ಭಾರತದ ಹಿತಕ್ಕಾಗಿ ದಂಪತಿ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬೇಕು- CM
ಸೇಬಿನ ರಸವನ್ನು ಸೇವಿಸುವ ಮೂಲಕ ಮೆದುಳಿನಲ್ಲಿ ಅಸಿಟೈಲ್ ಕೋಲೈನ್ ಎಂಬ ನ್ಯೂರೋಟ್ರಾನ್ಸ್ಮಿಟರ್ ಉತ್ಪಾದನೆ ಹೆಚ್ಚುತ್ತದೆ. ಇದರ ಮೂಲಕ ಮೆದುಳಿನಲ್ಲಿ ಸ್ಮರಣಶಕ್ತಿ ಹೆಚ್ಚುತ್ತದೆ. ಇದರ ಜೊತೆಗೆ ಬುದ್ಧಿಮಾಂದ್ಯತೆಯ ಸಾಮಾನ್ಯ ರೂಪವಾದ ಅಲ್ಜೀಮರ್ಸ್ ಕಾಯಿಲೆಯ ದೂರು ಮಾಡುತ್ತದೆ. ಹೀಗಾಗಿ ಪ್ರತಿಯೊಬ್ಬರು ದಿನ ಆಗಲಿ ಅಥವಾಗ ಆಗಾಗ ಆಗಲಿ ಆ್ಯಪಲ್ ತಿನ್ನುವುದನ್ನು ಮರೆಯಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us