ಕೊನೆಗೂ ಮಾರುಕಟ್ಟೆಗೆ ಬಂತು iPhone 16: ರೇಟ್​ ಎಷ್ಟು? ಸ್ಪೆಷಲ್​ ಫೀಚರ್ಸ್​ ಏನು?

author-image
Ganesh Nachikethu
Updated On
ಕೊನೆಗೂ ಮಾರುಕಟ್ಟೆಗೆ ಬಂತು iPhone 16: ರೇಟ್​ ಎಷ್ಟು? ಸ್ಪೆಷಲ್​ ಫೀಚರ್ಸ್​ ಏನು?
Advertisment
  • ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರೋ ಆ್ಯಪಲ್ ಕಂಪನಿ
  • ಆ್ಯಪಲ್​ ಕಂಪನಿಯಿಂದ ಇದೇ ತಿಂಗಳಲ್ಲಿ ಹೊಸ ಐಫೋನ್​​​ 16 ಸೀರೀಸ್​​​ ರಿಲೀಸ್​
  • ಎಂದಿನಂತೆಯೇ ಈ ಸಲ ಕೂಡ ಆ್ಯಪಲ್​​ ನಾಲ್ಕು ರೂಪಾಂತರದಲ್ಲಿ ಫೋನ್ ಲಾಂಚ್‌

ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರೋ ಟೆಕ್​ ಕಂಪನಿ ಎಂದರೆ ಆ್ಯಪಲ್​​. ಆ್ಯಪಲ್​ ಕಂಪನಿ ಈಗ ಹೊಸ ಐಫೋನ್​​​ 16 ಸೀರೀಸ್ ಲಾಂಚ್​​​​ ಮಾಡಿದೆ​. ಇದು ಹೈಫೈ ತಂತ್ರಜ್ಞಾನ ಹೊಂದಿದ್ದು, ಪ್ರೀಮಿಯಂ ಗ್ರಾಹಕರನ್ನು ಸೆಳೆಯಲಿದೆ. ಎಂದಿನಂತೆ ಈ ಸಲ ಕೂಡ ಆ್ಯಪಲ್​​ ನಾಲ್ಕು ರೂಪಾಂತರದಲ್ಲಿ ಫೋನ್ ರಿಲೀಸ್​​​ ಮಾಡಿದೆ. iPhone 16, iPhone 16 Plus, iPhone 16 Pro ಮತ್ತು iPhone 16 Pro Max ಏಕಕಾಲಕ್ಕೆ ಮಾರುಕಟ್ಟೆಗೆ ಬಂದಿವೆ​.

publive-image

ಐಫೋನ್​​ 16 ಬೆಲೆ ಎಷ್ಟು..?

ಐಫೋನ್‌ ಖರೀದಿಸುವುದು ಎಂದರೆ ಎಲ್ಲರೂ ಹಿಂದೆ ಮುಂದೆ ನೋಡುತ್ತಾರೆ. ಇದಕ್ಕೆ ಕಾರಣ ಇದರ ಬೆಲೆ ಬಹಳ ದುಬಾರಿ. ಸದ್ಯಕ್ಕೆ ಲಭ್ಯವಾಗಿರೋ ಮಾಹಿತಿ ಪ್ರಕಾರ ಇದರ ಬೇಸ್​ ಪ್ರೈಸ್​ 80 ಸಾವಿರ ಇದೆ ಎಂದು ತಿಳಿದು ಬಂದಿದೆ. ಈ ಬಾರಿ ಐಫೋನ್‌ 16ನಲ್ಲಿ ಸ್ವಲ್ಪ ಹೆಚ್ಚು ಅಪ್‌ಗ್ರೇಡ್‌ ಮಾಡಲಾಗಿದ್ದು, ಹಾಗಾಗಿ ಬೆಲೆ ದುಬಾರಿ ಆಗಿದೆ.

publive-image

publive-image

ಏನೆಲ್ಲಾ ಫೀಚರ್ಸ್​ ಹೊಂದಿದೆ?

ಆಪಲ್‌ 16 ಪ್ರೊ ಮೊಬೈಲ್‌ ಡಿಸ್‌ಪ್ಲೇ 6.3 ಇದೆ. 16 Pro Max ನ ಡಿಸ್‌ಪ್ಲೇ ಗಾತ್ರ 6.9 ಮತ್ತು ಐಫೋನ್‌ 16 ಡಿಸ್‌ಪ್ಲೇ ಹಳೆದ ಐಫೋನ್‌ 15ರಂತೆ ಡಿಸೈನ್​ ಮಾಡಲಾಗಿದೆ. ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆ ಇಲ್ಲ. ಈ ಫೋನ್‌ಗಾಗಿ ಹೊಸ A ಸರಣಿ ಚಿಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕೃತ AI ಫೀಚರ್ಸ್‌‌ಗಳು ಇರಲಿವೆ.

publive-image

ಬ್ಯಾಟರಿ ಕ್ಯಾಪಸಿಟಿ ಎಷ್ಟು?

ಐಫೋನ್‌ 16 3561mAh, ಐಫೋನ್‌ 16 ಪ್ಲಸ್‌ 4006mAh, ಐಫೋನ್‌ 16 ಪ್ರೊ 3355mAh ಮತ್ತು iPhone 16 ಪ್ರೊ ಮ್ಯಾಕ್ಸ್‌ 4676mAh ಬ್ಯಾಟರಿ ಕ್ಯಾಪಸಿಟಿ ಹೊಂದಿದೆ. ಆ್ಯಪಲ್​​ ಬಳಕೆದಾರರಿಗೆ ಕ್ಯಾಪ್ಚರ್‌ ಬಟನ್‌ ನೀಡಿದೆ. ಇದರಿಂದ ಸುಲಭವಾಗಿ ಫೋಟೋಗಳನ್ನು, ವಿಡಿಯೋಗಳನ್ನು ಶೂಟ್‌ ಮಾಡಬಹುದು. ಐಫೋನ್ 16 ಪ್ರೊ ತೂಕ 194 ಗ್ರಾಂ ಆಗಿದ್ದರೆ, ಐಫೋನ್ 16 ಪ್ರೊ ಮ್ಯಾಕ್ಸ್‌ನ ತೂಕ 225 ಗ್ರಾಮ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment