ಐಫೋನ್​ಗೆ ಈಗ iOS 26 ಸಪೋರ್ಟ್, ಲಿಕ್ವಿಡ್​​ ಗ್ಲಾಸ್​​ನಿಂದ ಇಂಟಲಿಜೆನ್ಸ್​ವರೆಗೆ.. ಅಪ್​​ಡೇಟ್ಸ್​ ಕೊಟ್ಟ ಆ್ಯಪಲ್..!

author-image
Ganesh
Updated On
ಐಫೋನ್​ಗೆ ಈಗ iOS 26 ಸಪೋರ್ಟ್, ಲಿಕ್ವಿಡ್​​ ಗ್ಲಾಸ್​​ನಿಂದ ಇಂಟಲಿಜೆನ್ಸ್​ವರೆಗೆ.. ಅಪ್​​ಡೇಟ್ಸ್​ ಕೊಟ್ಟ ಆ್ಯಪಲ್..!
Advertisment
  • ಆ್ಯಪಲ್ ಡೆವಲಪರ್ ಸಮ್ಮೇಳನದಲ್ಲಿ ಹೊಸ ಅಪ್​ಡೇಟ್ಸ್ ಪರಿಚಯ
  • ಬಳಕೆದಾರರಿಗೆ ಆ್ಯಪಲ್ AI ಎಷ್ಟೊಂದು ಸಹಾಯಕವಾಗಿದೆ..?
  • ಮ್ಯಾಕ್‌ಗಾಗಿ ಹೊಸ ಆಪರೇಟಿಂಗ್ ಸಿಸ್ಟಮ್ ಟಹೋ ಪರಿಚಯ

ಆ್ಯಪಲ್ WWDC-2025 ವಾರ್ಷಿಕ ಡೆವಲಪರ್ ಸಮ್ಮೇಳನ ಆರಂಭವಾಗಿದೆ. ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ನಿನ್ನೆಯ ದಿನ ಬಿಗ್​ ಅಪ್​ಡೇಟ್ಸ್ ಬಗ್ಗೆ ಮಾಹಿತಿ ನೀಡಿದೆ. ನೀವು ಐಫೋನ್, ಮ್ಯಾಕ್, ಐಪ್ಯಾಡ್ ಅಥವಾ ಆ್ಯಪಲ್ ವಾಚ್ ಹೊಂದಿದ್ದರೆ ಈ ಅಪ್​ಡೇಟ್ಸ್​ ತುಂಬಾನೇ ಮುಖ್ಯ.

ಸಾಫ್ಟ್‌ವೇರ್ ಸಿರೀಸ್ ಹೆಸರಿನಲ್ಲಿ ದೊಡ್ಡ ಬದಲಾವಣೆ ಮಾಡಿದೆ. iOS 19 ಬದಲಿಗೆ iOS 26 ಎಂಬ ಹೆಸರಿನೊಂದಿಗೆ ಪರಿಚಯಿಸಿದೆ. ಕೇವಲ ಹೆಸರು ಮಾತ್ರವಲ್ಲದೇ ಅದರ ಲುಕ್ ಸಂಪೂರ್ಣ ಬದಲಾಗಿದೆ. ಅದಕ್ಕಾಗಿ ಕಂಪನಿಯು ‘ಲಿಕ್ವಿಡ್ ಗ್ಲಾಸ್ ಡಿಸೈನ್’ (Liquid Glass) ಎಂದು ಹೆಸರಿಸಿದೆ. ಹೊಸ iOS 26 ಅಪ್​ಡೇಟ್​ನೊಂದಿಗೆ ಐಫೋನ್ ಲಿಕ್ವಿಡ್ ಗ್ಲಾಸ್​ ಇಂಟರ್ಫೇಸ್ ಪಡೆಯುತ್ತದೆ. ಅದರ ಮೂಲಕ ಬಳಕೆದಾರರು, ಹೆಚ್ಚು ಸ್ಪಷ್ಟ, ಪಾರದರ್ಶಕ ಸ್ವರೂಪದಲ್ಲಿ ಐಕಾನ್​ಗಳು ಕಾಣಲಿವೆ. ಅದೇ ವಿನ್ಯಾಸವು iPadOS, macOS, watchOS ಮತ್ತು tvOS ನ ಹೊಸ ಸೀರೀಸ್​​ಗಳಲ್ಲಿಯೂ ಲಭ್ಯವಿರಲಿದೆ.

ಇದನ್ನೂ ಓದಿ: ಏರ್​ಟೆಲ್​​ಗೆ ಟೆನ್ಷನ್ ಹೆಚ್ಚಿಸಿದ ಜಿಯೋ.. ಈ ಪ್ಲಾನ್​ನಲ್ಲಿ ಗ್ರಾಹಕರಿಗೆ ಹೆಚ್ಚು ಪ್ರಯೋಜನ..!

ಆ್ಯಪಲ್ AI

ಆ್ಯಪಲ್ AI ಅನ್ನು ಸಂಪೂರ್ಣವಾಗಿ ಹೊಸ ರೀತಿಯಲ್ಲಿ ಪರಿಚಯಿಸಲಾಗಿದೆ. ಆ್ಯಪಲ್ ಇಂಟೆಲಿಜೆನ್ಸ್ ಇದರ ವಿಶೇಷತೆ ಏನೆಂದರೆ ಬಳಕೆದಾರರ ಗೌಪ್ಯತೆ ಕಾಪಾಡುತ್ತದೆ. iMessage ನಲ್ಲಿ ಸರ್ವೆ ಮಾಡಬಹುದು. ಫೋನ್ ಕರೆಗಳ ಸಂದರ್ಭದಲ್ಲಿ ನಿಮಗೆ ಬೇಕಾದ ಭಾಷೆಯಲ್ಲಿ ನೇರವಾಗಿ ಟ್ರಾನ್ಸ್​​ಲೇಟ್ ಮತ್ತು ಟೆಸ್ಟ್​​ ರೂಪದಲ್ಲಿ ಶೀರ್ಷಿಕೆಗಳನ್ನ ಪಡೆಯುವ ಅವಕಾಶ ಇದೆ. AI ನಿಂದ ಧ್ವನಿಮೇಲ್‌ನ ಸ್ವಯಂಚಾಲಿತ ಸಮರಿ ಕೂಡ ಸಿಗಲಿದೆ. ನೀವು ಕರೆಯನ್ನು ಸ್ವೀಕರಿಸುವ ಮೊದಲೇ ಅದು ಯಾರಿಂದ ಬಂದಿದೆ ಅನ್ನೋದನ್ನು ಎಐ ಹೇಳಲಿದೆ.

MacOS 26 'Tahoe'

ಮ್ಯಾಕ್‌ಗಾಗಿ ಹೊಸ ಆಪರೇಟಿಂಗ್ ಸಿಸ್ಟಮ್ ಟಹೋ ಪರಿಚಯಿಸಿದೆ. ಹೊಸ ಗಾಜಿನಂತಹ ವಿನ್ಯಾಸ ಇದಾಗಿದೆ. ಕಂಟ್ರೋಲ್ ಸೆಂಟರ್, ಡಾಕ್ ಮತ್ತು ವಿಜೆಟ್‌ಗಳು ಮೊದಲಿಗಿಂತ ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ. ಐಫೋನ್ ಅಪ್ಲಿಕೇಶನ್‌ಗಳನ್ನು ಆಪಲ್ ಮಿರರಿಂಗ್‌ನೊಂದಿಗೆ ಮ್ಯಾಕ್‌ನಲ್ಲಿ ನೇರವಾಗಿ ಬಳಸಬಹುದು.

ಇದನ್ನೂ ಓದಿ: ಚೆನಾಬ್ ಬ್ರಿಡ್ಜ್ ಯಶಸ್ಸಿನ ಹಿಂದೆ ಬೆಂಗಳೂರು ಪ್ರಾಧ್ಯಾಪಕಿಯ ಶ್ರಮ.. ಯಾರು ಈ ಮಾಧವಿ ಲತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment