NIMHANS ಸಂಸ್ಥೆಯಲ್ಲಿ ಉನ್ನತ ಉದ್ಯೋಗಕ್ಕೆ ಅರ್ಜಿ ಆಹ್ವಾನ.. ಸಂಬಳ ಮಾತ್ರ ಲಕ್ಷ.. ಲಕ್ಷ

author-image
Bheemappa
Updated On
ಕರ್ನಾಟಕ ಲೋಕಾಯುಕ್ತದಿಂದ Group- C ಹುದ್ದೆಗಳ ನೇಮಕಾತಿ.. ಕೊನೆ ದಿನಾಂಕ ಯಾವಾಗ?
Advertisment
  • ಅರ್ಜಿ ಪ್ರತಿಯನ್ನು ಡೌನ್​ಲೋಡ್ ಮಾಡುವುದು ಹೇಗೆ..?
  • ಒಟ್ಟು ಎಷ್ಟು ಉದ್ಯೋಗಗಳನ್ನ NIMHANS ಆಹ್ವಾನಿಸಿದೆ?
  • ಅರ್ಜಿ ಸಲ್ಲಿಸಲು ಬೇಕಾದ ಲಿಂಕ್ ಇಲ್ಲಿ ನಮೂದಿಸಲಾಗಿದೆ

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ಉನ್ನತ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕೆಲಸ ಕೇವಲ ನುರಿತ ತಜ್ಞರಿಗೆ ಮಾತ್ರ ನೀಡಲಾಗುತ್ತದೆ. ಹೀಗಾಗಿ ಉದ್ಯೋಗದಲ್ಲಿ ಹೆಚ್ಚಿನ ಅನುಭವ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು.

ನಿಮ್ಹಾನ್ಸ್ ಸಂಸ್ಥೆಯು ಮೆಡಿಕಲ್ ಸೂಪರಿಟೆಂಡೆಂಟ್ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಆಸಕ್ತಿ ಹೊಂದಿದ ಅನುಭದ ಇರುವ ಉದ್ಯೋಗ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕೆಳಗೆ ನೀಡಲಾದ ಅರ್ಹತೆಗಳನ್ನು ಹೊಂದಿದ್ರೆ ನೀವು ಅಪ್ಲೇ ಮಾಡಬಹುದು. ಅರ್ಜಿಯನ್ನು ಸಂಸ್ಥೆಯ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಲಗತ್ತಿಸಿ ಕಳುಹಿಸಿಕೊಡಬೇಕು.

ಉದ್ಯೋಗದ ಹೆಸರು- Medical Superintendent (ವೈದ್ಯಕೀಯ ಅಧೀಕ್ಷಕ)

ಎಷ್ಟು ಉದ್ಯೋಗಗಳು- 01

ವಿದ್ಯಾರ್ಹತೆ- ಎಂಬಿಬಿಎಸ್​, ಎಂಡಿ (ಆಸ್ಪತ್ರೆ ಆಡಳಿತ) ಅಥವಾ ಎಂಡಿ (ಮನೋವೈದ್ಯಶಾಸ್ತ್ರ), ಡಿಎಂ (ನ್ಯೂರೋ)/ ಎಂಸಿಹೆಚ್​ (Neurosurgery)

ತಿಂಗಳ ಸ್ಯಾಲರಿ- 1,44,200 ದಿಂದ 2,18,200 ರೂಪಾಯಿಗಳು

ಇದನ್ನೂ ಓದಿ:ನಾಳೆ ಇಂದ SSLC ಪರೀಕ್ಷೆ; ಎಷ್ಟು ಲಕ್ಷ ಬಾಲಕರು, ಬಾಲಕಿಯರು ಎಕ್ಸಾಂ ಬರೆಯುತ್ತಿದ್ದಾರೆ?

publive-image

ಉದ್ಯೋಗದ ಅನುಭವ- 12 ರಿಂದ 14 ವರ್ಷಗಳು

ವಯಸ್ಸಿನ ಮಿತಿ- 50 ವರ್ಷ ಮೇಲ್ಪಟ್ಟವರಿಗೆ ಅವಕಾಶ

ಅರ್ಜಿ ಶುಲ್ಕ ಎಷ್ಟು?

ಜನರಲ್, ಒಬಿಸಿ ಅಭ್ಯರ್ಥಿಗಳು- 2,360 ರೂಪಾಯಿಗಳು
ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು- 1,180 ರೂಪಾಯಿಗಳು

ವಿಳಾಸ-
ನಿರ್ದೇಶಕರು,
ನಿಮ್ಹಾನ್ಸ್‌, ಪಿ.ಬಿ ನಂಬರ್ 2900,
ಹೊಸೂರು ರಸ್ತೆ, ಬೆಂಗಳೂರು - 560029

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 30 ಏಪ್ರಿಲ್ 2025, ಸಂಜೆ 04-30

ಅರ್ಜಿಯ ಮಾಹಿತಿ-https://static-cdn.publive.online/newsfirstlive-kannada/media/pdf_files/prodnimhans/documents/announcementsb7a1fea52c6b427bb77e8b9b82242021.pdf

ಅರ್ಜಿಯ ಪ್ರತಿ-https://static-cdn.publive.online/newsfirstlive-kannada/media/pdf_files/prodnimhans/documents/announcements81a600e163af4818806942e960709e49.pdf

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment