/newsfirstlive-kannada/media/post_attachments/wp-content/uploads/2025/01/JOBS_CBSC.jpg)
ಬೆಂಗಳೂರು: ಫಾರೀನ್​​ನಲ್ಲಿ ಕೆಲಸ ಮಾಡಬೇಕು ಅನ್ನೋರಿಗೆ ಗುಡ್​ನ್ಯೂಸ್​ ಒಂದಿದೆ. ಇಸ್ರೇಲ್​​ನಲ್ಲಿ ಕೆಲಸ ಮಾಡಲು ಆಸಕ್ತಿ ಇರೋರಿಗೆ ಮಹಾರಾಷ್ಟ್ರ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಆಸಕ್ತ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಬಹುದು. ಮಹಾರಾಷ್ಟ್ರದ ಕೌಶಲ್ಯಾಭಿವೃದ್ಧಿ, ಉದ್ಯೋಗ ಮತ್ತು ಉದ್ಯಮಶೀಲತೆ ಅಸಿಸ್ಟಂಟ್​​ ಕಮಿಷನರ್​ ಆಗಿರೋ ಸಂಗೀತಾ ಖಂಡ್ರೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಯಾವ ಕ್ಷೇತ್ರದಲ್ಲಿ ಕೆಲಸ?
ಮಹಾರಾಷ್ಟ್ರ ಸರ್ಕಾರವೂ ಮಿತ್ರ ಸಂಸ್ಥೆಯೊಂದಿಗೆ ಸೇರಿ ಆರೋಗ್ಯ ಮತ್ತು ಗೃಹ ಬೆಂಬಲ ಸೇವಾ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಅದರಲ್ಲೂ ಇಸ್ರೇಲ್​​ನಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದು ಸುವರ್ಣಾವಕಾಶ. ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಪದವೀಧರರಿಗೆ ಅವಕಾಶ ನೀಡಲಾಗುತ್ತದೆ.
ವಯೋಮಿತಿ ಎಷ್ಟು?
ಅಭ್ಯರ್ಥಿಗಳಿಗೆ 25 ರಿಂದ 45 ವರ್ಷದ ವಯೋಮಿತಿ ಇರಬೇಕು.
ವಿದ್ಯಾರ್ಹತೆ ಏನು?
ಡಿಗ್ರಿ, ಮಾಸ್ಟರ್ಸ್​, ಐಟಿಐ, ಬಿಇ ಸೇರಿ JOC (ಜಾಬ್​ ಓರಿಯೆಂಟೆಂಡ್​ ಕೋರ್ಸ್​) ಮಾಡಿದವರಿಗೆ ಆದ್ಯತೆ.
ವಿಶೇಷ ತರಬೇತಿ ಏನು?
ನರ್ಸಿಂಗ್, ಫಿಸಿಯೋಥೆರಪಿ, ನರ್ಸ್ ಅಸಿಸ್ಟೆಂಟ್, ಜಿಡಿಎ, ಎಎನ್ಎಂ, ಜಿಎನ್ಎಂ ಅಥವಾ B.Sc ನರ್ಸಿಂಗ್ ಕ್ಷೇತ್ರಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಅರ್ಹರು
ಎಷ್ಟು ಭಾಷೆ ಗೊತ್ತಿರಬೇಕು?
ಇಂಗ್ಲಿಷ್ ಭಾಷೆಯ ಸಾಮಾನ್ಯ ಜ್ಞಾನ ಕಡ್ಡಾಯ
ಅರ್ಜಿ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳು https://maharashtrainternational.com/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್​ಲೈನ್​ ಅರ್ಜಿ ಸಲ್ಲಿಸಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳು ಈ ವೆಬ್​ಸೈಟ್​​ನಲ್ಲೇ ಲಭ್ಯವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us