/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-7.jpg)
ನಗುಮುಖದ ಸರದಾರ.. ಜೊತೆಗಿರದ ಜೀವ ಎಂದೆಂದಿಗೂ ಜೀವಂತ.. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಇಂದು 50ನೇ ವರ್ಷದ ಹುಟ್ಟುಹಬ್ಬ.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar.jpg)
ಅಪ್ಪು ಜನ್ಮದಿನದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳ ಸಾಗರವೇ ಹರಿದು ಬಂದಿದೆ.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-1.jpg)
ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಇಬ್ಬರು ಪುತ್ರಿಯರ ಜೊತೆ ಆಗಮಿಸಿದ್ದರು.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-4.jpg)
ಅಪ್ಪು ಸ್ಮಾರಕದ ಬಳಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬರುತ್ತಿದ್ದಂತೆ ಫ್ಯಾನ್ಸ್ ಅಪ್ಪು, ಅಪ್ಪು ಅಂತ ಕೂಗಿದರು.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-2.jpg)
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-3.jpg)
ರಾಘವೇಂದ್ರ ರಾಜ್‌ಕುಮಾರ್ ಪತ್ನಿ ಮಂಗಳ ಜೊತೆಗೆ ಆಗಮಿಸಿ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-5.jpg)
ಅಪ್ಪು ಸಮಾಧಿಗೆ ಡಾ.ರಾಜ್‌ಕುಮಾರ್ ಕುಟುಂಬಸ್ಥರು ಪೂಜೆ ಸಲ್ಲಿಸಿದ್ರೆ, ಸಮಾಧಿ ಹೊರಗಡೆ ಅನ್ನದಾಸೋಹ, ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-6.jpg)
ಇದೇ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಅಭಿಮಾನಿಗಳಿಗೆ ಅನ್ನದಾನ ಮಾಡಿದರು. ಪುನೀತ್ ರಾಜ್ಕುಮಾರ್ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಪ್ಪು ಸ್ಮಾರಕದ ಬಳಿ ಇಂದು ಬೆಳಗಿನ ಜಾವದಿಂದಲೇ ಅಭಿಮಾನಿಗಳ ಸಾಗರ ಹರಿದು ಬರ್ತಿದೆ.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-10.jpg)
ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಅಶ್ವಿನಿ ಅವರು ಅನ್ನದಾನ ಮಾಡಿ ಫ್ಯಾನ್ಸ್ ಜೊತೆ ಕಾಲ ಕಳೆದರು. ಅಭಿಮಾನಿಗಳಿಗಾಗಿ ಅಪ್ಪು ಸ್ಮಾರಕದ ಬಳಿ ಊಟ, ಸಿಹಿ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-8.jpg)
ಕಂಠೀರವ ಸ್ಟುಡಿಯೋ ಬಳಿ 25 ಸಾವಿರ ನಂದಿನಿ ಮಜ್ಜಿಗೆ ಪ್ಯಾಕೆಟ್, 10 ಸಾವಿರ ನಂದಿನಿ ಪೇಡ, 5 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2025/03/appu-birthday-ashwini-puneeth-rajkumar-9.jpg)
ಇದಕ್ಕೂ ಮುನ್ನ ನಟ ಯುವರಾಜ್‌ಕುಮಾರ್ ಅವರು ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ವರ್ಷದಿಂದ ವರ್ಷಕ್ಕೆ ಅಪ್ಪು ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಇದನ್ನೂ ಓದಿ: ಜ್ಯೂನಿಯರ್ ಅಂಬಿ ಅದ್ಧೂರಿ ನಾಮಕರಣ.. ಸಂಭ್ರಮಕ್ಕೆ ಸಾಕ್ಷಿಯಾದ ಕಿಚ್ಚ, ಮುಂದುವರೀತಾ ದರ್ಶನ್ ಮುನಿಸು?
ಇದೆಲ್ಲ ನೋಡಿದ್ರೆ ಚಿಕ್ಕಪ್ಪ ಇಲ್ಲೇ ನಮ್ಮ ಜೊತೆ ಇದ್ದಾರೆ ಅನ್ನಿಸುತ್ತೆ. ಅಪ್ಪು ಸಿನಿಮಾ ರೀ-ರಿಲೀಸ್ ಆದಾಗ್ಲೂ ಅಭಿಮಾನಿಗಳು ಹೊಸ ಸಿನಿಮಾ ರಿಲೀಸ್ ಆದಂತೆ ಬಂದು ನೋಡ್ತಿದ್ದಾರೆ. ಅವರ ಹೆಸರಲ್ಲಿ ಅಭಿಮಾನಿಗಳು ಅನ್ನದಾನ, ರಕ್ತದಾನ, ಶಿಬಿರಗಳನ್ನ ಮಾಡುತ್ತಿರೋದು ಖುಷಿಯ ವಿಚಾರ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us