newsfirstkannada.com

ವೋಟ್ ಮಾಡೋರಿಗೆ ನಮ್ಮ ಮೆಟ್ರೋ ಕಡೆಯಿಂದ ಗುಡ್‌ನ್ಯೂಸ್‌; ಎಲ್ಲರೂ ಓದಲೇಬೇಕಾದ ಸ್ಟೋರಿ!

Share :

Published April 24, 2024 at 9:30pm

    ಮತದಾನದ ದಿನ ಬೆಂಗಳೂರಿಗರಿಗೆ ನಮ್ಮ ಮೆಟ್ರೋ ಗುಡ್‌ನ್ಯೂಸ್

    ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಸಾಧ್ಯತೆ

    ಮೆಜೆಸ್ಟಿಕ್ ನಿಲ್ದಾಣದಿಂದ 4 ನಾಲ್ಕು ದಿಕ್ಕುಗಳಿಗೂ ಮೆಟ್ರೋ ಸಮಯ ವಿಸ್ತರಣೆ

ಬೆಂಗಳೂರು: ಲೋಕಸಭಾ ಚುನಾವಣೆ ಬಂದೇ ಬಿಟ್ಟಿದೆ. ನಾಳೆ ಒಂದು ದಿನ ಕಳೆದ್ರೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ 2024ರ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಏಪ್ರಿಲ್ 26ರ ಮತದಾನಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಸಜ್ಜಾಗುತ್ತಿದ್ದಾರೆ.

ಲೋಕಸಭಾ ಚುನಾವಣೆಯ ಮತದಾನದ ದಿನ ಬೆಂಗಳೂರಿಗರಿಗೆ ನಮ್ಮ ಮೆಟ್ರೋ ಗುಡ್‌ನ್ಯೂಸ್ ಕೊಟ್ಟಿದೆ. ಏಪ್ರಿಲ್ 26ರಂದು ಪ್ರಯಾಣಿಕರಿಗೆ ಅನುಕೂಲವಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುವುದರಿಂದ ಅವರಿಗೆ ಅನುಕೂಲವಾಗುವ ತಯಾರಿ ನಡೆಸಿದೆ.

ಇದನ್ನೂ ಓದಿ: ಏಪ್ರಿಲ್‌ 26 ಚುನಾವಣೆ; ಮತದಾನದ ದಿನ ಯಾರಿಗೆಲ್ಲಾ ಕಡ್ಡಾಯ ರಜೆ ಇದೆ? ತಪ್ಪದೇ ಸ್ಟೋರಿ ಓದಿ!

ಏಪ್ರಿಲ್ 26ರಂದು ಬೆಂಗಳೂರಲ್ಲಿ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಮೆಟ್ರೋ ಪ್ರಯಾಣದ ಸೇವೆ ಒದಗಿಸಲು BMRCL ಮುಂದಾಗಿದೆ. ಅಂದು ಬೆಂಗಳೂರು ನಗರದಾದ್ಯಂತ ಸಂಚರಿಸುವ ಪ್ರಯಾಣಿಕರಿಗೆ ಚುನಾವಣಾ ಸಿಬ್ಬಂದಿಗಳಿಗೆ ಅಗತ್ಯ ಸೇವೆ ನೀಡುವ ಪ್ರಕಟಣೆ ನೀಡಿದೆ.

ಮೆಟ್ರೋ ಸೇವೆ ವಿಸ್ತರಣೆ!
ಇದಕ್ಕಿಂತಲೂ ಮುಖ್ಯವಾಗಿ ಬೆಂಗಳೂರಲ್ಲಿ ಮತದಾನದ ದಿನ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಏಪ್ರಿಲ್ 26ರಂದು ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್‌ (ಕಾಡುಗೋಡಿ) ನಿಲ್ದಾಣದಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 11.55ರವರೆಗೂ ವಿಸ್ತರಿಸಲಾಗಿದೆ.

ನಾಡಪ್ರಭು ಕೇಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲು ಮಧ್ಯರಾತ್ರಿ 00.35ರವರೆಗೂ ಹೊರಡಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೋಟ್ ಮಾಡೋರಿಗೆ ನಮ್ಮ ಮೆಟ್ರೋ ಕಡೆಯಿಂದ ಗುಡ್‌ನ್ಯೂಸ್‌; ಎಲ್ಲರೂ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/06/Metro.jpg

Load More