Advertisment

ಒಂದು ಸಾಂಗ್‌ಗೆ 3 ಕೋಟಿ, ಬಂಗಲೆ, ಐಷಾರಾಮಿ ಕಾರು, ಸ್ಟುಡಿಯೋ; ಎ.ಆರ್‌ ರೆಹಮಾನ್ ಆಸ್ತಿ ಎಷ್ಟು ಕೋಟಿ ಗೊತ್ತಾ?

author-image
Gopal Kulkarni
Updated On
ಒಂದು ಸಾಂಗ್‌ಗೆ 3 ಕೋಟಿ, ಬಂಗಲೆ, ಐಷಾರಾಮಿ ಕಾರು, ಸ್ಟುಡಿಯೋ; ಎ.ಆರ್‌ ರೆಹಮಾನ್ ಆಸ್ತಿ ಎಷ್ಟು ಕೋಟಿ ಗೊತ್ತಾ?
Advertisment
  • ಚೆನ್ನೈ, ಲಾಸ್​ ಎಂಜೆಲ್ಸ್​ನಲ್ಲಿ ಐಷಾರಾಮಿ ಬಂಗಲೆಗಳು, ಕಾರುಗಳು
  • ಒಂದು ಹಾಡಿಗೆ 3 ಕೋಟಿ, ಲೈವ್ ಶೋಗೆ ಗಂಟೆಗೆ 1ಕೋಟಿ ರೂಪಾಯಿ !
  • ಆರ್ಕೆಸ್ಟ್ರಾದಿಂದ ಸಂಗೀತ ದಿಗ್ಗಜನಾಗಿ ಬೆಳೆದ ರೆಹಮಾನ್​ ಆಸ್ತಿ ಎಷ್ಟು?

ಅಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್​, ಸಂಗೀತ ಕ್ಷೇತ್ರದ ಸರ್ವರಿಗೂ ಕೂಡ ಒಂದು ಸ್ಪೂರ್ತಿ. ವಿಪರೀತ ಶ್ರಮ ಹಾಗೂ ಶ್ರದ್ಧೆಯಿಂದಾಗಿ ರೆಹಮಾನ್ ಇಂದು ತಮ್ಮನ್ನು ತಾವು ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಗುರುತಿಸಿಕೊಂಡಿದ್ದಾರೆ. ರೆಹಮಾನ್ ಅವರು ಕಳೆದ ಹಲವು ದಶಕಗಳಿಂದ ಎದುರಾಳಿಯನ್ನೇ ನೋಡದೇ ಸಂಗೀತ ಸಾಮ್ರಾಜ್ಯದಲ್ಲಿ ಮೆರೆದವರು. ಅವರ ಹಾಡುಗಳು ಅನೇಕ ಬಾರಿ ಸುದ್ದಿ ಮಾಡಿವೆ. ಅವರ ಸಂಗೀತ ಸುದ್ದಿ ಮಾಡಿದೆ. ಸದ್ಯ ಈಗ ಅವರ 29 ವರ್ಷದಿಂದ ಸಾಂಗವಾಗಿ ನಡೆದುಕೊಂಡು ಬಂದಿದ್ದ ಸಂಸಾರ ಸುದ್ದಿಯಾಗುತ್ತಿದೆ. ಎ ಆರ್ ರೆಹಮಾನ್ ಹಾಗೂ ಸೈರಾ ಬಾನು ಅವರ 29 ವರ್ಷದ ದಾಂಪತ್ಯ ಈಗ ಮುರಿದು ಬಿದ್ದಿದೆ. ಸೆಲೆಬ್ರೆಟಿಗಳ ದಾಂಪತ್ಯ ಮುರಿದು ಬಿದ್ದಾಗಲೆಲ್ಲಾ ಮೊದಲು ಮುನ್ನೆಲೆಗೆ ಬರುವುದೇ ಅವರ ಆಸ್ತಿಯ ವಿಷಯ. ಈಗ ರೆಹಮಾನ್ ಅವರ ಬಳಿ ಇರುವ ಆಸ್ತಿಯೂ ಕೂಡ ಮುನ್ನೆಲೆಗೆ ಬಂದಿದೆ.

Advertisment

ರೆಹಮಾನ್ ರಾತ್ರೋ ರಾತ್ರಿ ಯಶಸ್ಸು ಕಂಡವರಲ್ಲ. ದಿಢೀರ್​​ ಅಂತ ಅರಳಿದ ಪ್ರತಿಭೆಯಲ್ಲ. ಹಲವಾರು ವರ್ಷಗಳ ಶ್ರಮ ಇಂದು ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ. ರೂಟ್ಸ್ ಎನ್ನುವ ಆರ್ಕೆಸ್ಟ್ರಾದ ತಂಡದೊಂದಿಗೆ ತಮ್ಮ ಸಂಗೀತದ ಪಯಣ ಆರಂಭಿಸಿದ ಎ ಆರ್ ರೆಹಮಾನ್ ಇಂದು ಭಾರತೀಯ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ಸಂಗೀತ ನಿರ್ದೇಶಕರ ಸಾಲಿನಲ್ಲಿ ನಿಂತಿದ್ದಾರೆ. ಒಂದು ಹಾಡಿಗೆ ಬರೋಬ್ಬರಿ ಮೂರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎ ಆರ್ ರೆಹಮಾನ್. ಅದರಲ್ಲೂ ಸ್ಲಮ್ ಡಾಗ್ ಮಿಲಿಯೇನಿಯರ್ ಸಿನಿಮಾಗೆ ಆಸ್ಕರ್ ಅವಾರ್ಡ್ ಪಡೆದುಕೊಂಡ ಮೇಲಂತೂ ರೆಹಮಾನ್ ಹೆಸರು ಇನ್ನೂ ಉತ್ತುಂಗಕ್ಕೆ ಹೋಯ್ತು.

ಇದನ್ನೂ ಓದಿ: ಎ.ಆರ್‌ ರೆಹಮಾನ್ ಡಿವೋರ್ಸ್‌ಗೆ ಹೊಸ ಟ್ವಿಸ್ಟ್‌.. ಗಂಡನಿಂದ ಬೇರೆಯಾದ ಗಿಟಾರಿಸ್ಟ್‌! ಯಾರು ಈ ಮೋಹಿನಿ?

publive-image

ಸಂಗೀತ ದಿಗ್ಗಜ ಎ ಆರ್​ ರೆಹಮಾನ್ ಚೆನ್ನೈನಲ್ಲಿ ಅತ್ಯಂತ ಭವ್ಯವಾದ ಬಂಗಲೆಯನ್ನು ಹೊಂದಿದ್ದಾರೆ. ತುಂಬಾ ಐಷಾರಾಮಿ ಇಂಟಿರಿಯರ್​ಗಳನ್ನು ಆ ಬಂಗಲೆ ಹೊಂದಿದೆ. ಇದು ಮಾತ್ರವಲ್ಲ ಅಮೆರಿಕಾದ ಲಾಸ್ ಎಂಜೆಲ್ಸ್​ನಲ್ಲಿಯೂ ಕೂಡ ರೆಹಮಾನ್ ಒಂದು ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಈ ಬಂಗಲೆ ಅಂತಾರಾಷ್ಟ್ರೀಯ ಮಟ್ಟದ ಐಷಾರಾಮಿತನವನ್ನು ಹೊಂದಿದೆ ಈ ಹಿಂದೆ ಈ ಬಂಗಲೆಯ ಬಗ್ಗೆ ಇದೇ ರೆಹಮಾನ್​ ರಾಷ್ಟ್ರೀಯ ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವಾಗ ಉಲ್ಲೇಖಿಸಿದ್ದರು.
ಐಷಾರಾಮಿ ಬಂಗಲೆಯ ಜೊತೆ ಜೊತೆಗೆ ಎ ಆರ್ ರೆಹಮಾನ್ ಅಂತಹುದೇ ಒಂದು ದೈತ್ಯ ಸ್ಟುಡಿಯೋವನ್ನು ಹೊಂದಿದ್ದಾರೆ. ಎ ಆರ್ ರೆಹಮಾನ್ ಅತಿ ಹೆಚ್ಚು ಸಮಯ ಕಳೆಯುವುದೇ ತಮ್ಮ ಸ್ಟುಡಿಯೋದಲ್ಲಿ ಎಂದು ಹೇಳಲಾಗುತ್ತದೆ. ಅವರಲ್ಲಿ ಹೆಚ್ಚು ಕ್ರಿಯಾಶೀಲತೆ ಹುಟ್ಟುವುದೇ ಇಲ್ಲಿ ಎಂದು ರೆಹಮಾನ್​ ತಮ್ಮ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ.

Advertisment

ಇದನ್ನೂ ಓದಿ: ಎ.ಆರ್‌ ರೆಹಮಾನ್​ ಸ್ಟೂಡೆಂಟ್​ಗೆ ಕೂಡಿ ಬಂತು ಕಂಕಣ ಭಾಗ್ಯ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರಿಗಮಪ ಸಿಂಗರ್​ ವರ್ಣಾ ಚವಾಣ್
ಇನ್ನು ಈ ಸಂಗೀತ ದಿಗ್ಗಜನಿಗೆ ಕಾರ್​ಗಳ ಕ್ರೇಜ್​ ಕೂಡ ತುಂಬಾ ಇದೆ, ಅವರ ಶ್ರೀಮಂತಿಕೆಗೆ ತಕ್ಕಂತೆ ಐಷಾರಾಮಿ ಕಾರ್​ಗಳನ್ನು ಹೊಂದಿದ್ದಾರೆ ಎ ಆರ್ ರೆಹಮಾನ್, 3 ಕೋಟಿರ ರೂಪಾಯಿ ಮೌಲ್ಯದ ವೊಲ್ವೊ ಎಸ್​ಯುವಿ ಹಾಗೂ ಮರ್ಸಿಡಿಜ್​ ಬೆಂಜ್​ ಹಾಗೂ ಒಂದು ಕೋಟಿ ರೂಪಾಯಿ ಮೌಲ್ಯದ ಜಾಗ್ವಾರ್ ಕಾರ್​ನ್ನು ಕೂಡ ಹೊಂದಿದ್ದಾರೆ.ಈಗಾಗಲೇ ಹೇಳಿದಂತೆ ಎ ಆರ್ ರೆಹಮಾನ್​ ಒಂದು ಹಾಡಿಗೆ ಮೂರು ಕೋಟಿ ರೂಪಾಯಿ ಸಂಬಾವನೆ ಪಡೆದ್ರೆ ಲೈವ್ ಶೋಗಳಿಗೆ ಗಂಟೆಗೆ 1 ರಿಂದ ಎರಡು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರಂತೆ. ಅವರ ಒಟ್ಟು ಆಸ್ತಿ 1,728 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment