Advertisment

ಕಮಲಾ ಹ್ಯಾರಿಸ್​ ಪ್ರಚಾರಕ್ಕಾಗಿ 30 ನಿಮಿಷಗಳ ವಿಡಿಯೋ ಮಾಡಿದ ಎ.ಆರ್.ರೆಹಮಾನ್; ಏನಿದರ ವಿಶೇಷ?

author-image
Gopal Kulkarni
Updated On
ಕಮಲಾ ಹ್ಯಾರಿಸ್​ ಪ್ರಚಾರಕ್ಕಾಗಿ 30 ನಿಮಿಷಗಳ ವಿಡಿಯೋ ಮಾಡಿದ ಎ.ಆರ್.ರೆಹಮಾನ್; ಏನಿದರ ವಿಶೇಷ?
Advertisment
  • ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ರೆಹಮಾನ್ ಹಾಡು
  • 30 ನಿಮಿಷಗಳ ವಿಡಿಯೋ ಸಿದ್ಧಗೊಳಿಸಿದ ಸಂಗೀತ ಮಾಂತ್ರಿಕ ಎ.ಆರ್.ಆರ್
  • ಈ ವಿಡಿಯೋ ಮತ ಹಾಕುವವರಿಗೆ ಹೊಸ ಕನಸನ್ನು ಬಿತ್ತಲಿದೆ ಎಂದಿದ್ದು ಯಾರು?

ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್, ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಬೆಂಬಲಿಸಿ 30 ನಿಮಿಷದ ಒಂದು ಸಂಗೀತದ ವಿಡಿಯೋವೊಂದನ್ನು ತಯಾರು ಮಾಡಿದ್ದಾರೆ. ಇದು ಕಮಲಾ ಹ್ಯಾರಿಸ್ ಮುಂದಿನ ಅಧ್ಯಕ್ಷೀಯ ಚುನಾವಣೆ ಪ್ರಚಾರಕ್ಕೆ ಹೊಸ ಬೂಸ್ಟ್ ನೀಡಲಿದೆ ಎಂದು ಭಾವಿಸಲಾಗಿದೆ.

Advertisment

ಇದನ್ನೂ ಓದಿ:ರಣರಣ ಮರುಭೂಮಿಯಲ್ಲಿ ರಣಭೀಕರ ಮಳೆ; ಸಹರಾದಲ್ಲಿ ಪ್ರವಾಹ ಸೃಷ್ಟಿಸಿದ ವರ್ಷಧಾರೆ!

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಮೊದಲ ಬಾರಿ ದಕ್ಷಿಣ ಭಾರತದ ಸಂಗೀತ ನಿರ್ದೇಶಕರೊಬ್ಬರು ಈ ರೀತಿ ಪ್ರಚಾರದಲ್ಲಿ ಸಹಕಾರಿಯಾಗಿದ್ದಾರೆ. ಈ ಒಂದು 30 ನಿಮಿಷಗಳ ವಿಡಿಯೋ ಸಾಂಗ್​ನಲ್ಲಿ ಎ ಆರ್ ರೆಹಮಾನ್ ಕೂಡ ತಮ್ಮ ಧ್ವನಿಯನ್ನು ನೀಡಿದ್ದಾರೆ ಎಂದು ಏಷಿಯನ್ ಅಮೆರಿಕಾ ಮತ್ತು ಫೆಸಿಫಿಕ್ ಐಲ್ಯಾಂಡರ್​ನ ಚೇರ್​ಮನ್ ಶೇಖರ್ ನರಸಿಂಹನ್ ಹೇಳಿದ್ದಾರೆ.

ರೆಹಮಾನ್ ಸಿದ್ಧಪಡಿಸಿರುವ 30 ನಿಮಿಷದ ವಿಡಿಯೋ ಬಿಡಗಡೆ ಕಾರ್ಯಕ್ರಮ 13/10/2024ರಂದು AAPIನ ಅಮೆರಿಕಾ ಕಾಲಮಾನದ ಪ್ರಕಾರ ರಾತ್ರಿ ಎಂಟು ಗಂಟೆಗೆ ಹಾಗೂ ಭಾರತೀಯ ಕಾಲಮಾನದ ಪ್ರಕಾರ ಅಕ್ಟೋಬರ್ 14 ಮುಂಜಾನೆ 5.30ಕ್ಕೆ  ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಲಿದೆ. ಅದು ಮಾತ್ರವಲ್ಲ AAIP Victory Fund 2024ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಪರ ಪ್ರಚಾರದ ಕಣಕ್ಕೆ ಧುಮುಕಿದೆ. ಶೇಖರ್ ನರಸಿಂಹನ್ ಹೇಳುವ ಪ್ರಕಾರ ಅಕ್ಟೋಬರ್ 13ರಂದು ಬಿಡಗಡೆಯಾಗಲಿರುವ 30 ನಿಮಿಷದ ವಿಡಿಯೋ ಕೇವಲ ಒಂದು ಸಂಗೀತ ಕಾರ್ಯಕ್ರಮವಲ್ಲ. ನಮ್ಮ ಸಮುದಾಯಕ್ಕೆ ನಾವು ಕಾಣಬೇಕೆಂದಿರುವ ಭವಿಷ್ಯವನ್ನು ನೋಡುವುದಕ್ಕಾಗಿ ಮತ ಹಾಕುವಂತೆ ಕರೆ ನೀಡುವ ಒಂದು ಕಾರ್ಯಕ್ರಮ ಎಂದಿದ್ದಾರೆ.

Advertisment

ಇದನ್ನೂ ಓದಿ: 200 ರಹಸ್ಯ ಬ್ಯಾಂಕ್ ಅಕೌಂಟ್​.. ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಮುಚ್ಚಿಟ್ಟ ಸಂಪತ್ತು ಎಷ್ಟು ಗೊತ್ತಾ?

30 ನಿಮಿಷದ ಈ ವಿಡಿಯೋದಲ್ಲಿ ಎ ಆರ್ ರೆಹಮಾನ್ ಅವರ ಹಲವು ಪ್ರಸಿದ್ಧ ಗೀತೆಗಳು ಇರುತ್ತವೆ ಹಾಗೂ ಕಮಲಾ ಹ್ಯಾರಿಸ್ ಬಗ್ಗೆ ಹಲವು ಮಾಹಿತಿಗಳನ್ನೊಳಗೊಂಡ ಸಂದೇಶಗಳು ಇರುತ್ತವೆ. ಈಗಾಗಲೇ ವಿಡಿಯೋದ ಕೆಲವು ತುಣುಕುಗಳು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಮುಂದಿನ ಕಾರ್ಯಕ್ರಮ ಹೇಗೆ ಮೂಡಿಬರಲಿದೆ ಎಂಬ ಒಂದು ಮುನ್ನೋಟವನ್ನು ನೀಡಲಾಗಿದೆ ಎಂದು ಶೇಖರ್ ನರಸಿಂಹನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment